ಬೆಂಗಳೂರು, ಏ.20- ಶಿಸ್ತಿಗೆ ಹೆಸರಾಗಿರುವ ಪೊಲೀಸ್ ಇಲಾಖೆಯಲ್ಲಿ ಅಪಸ್ವರಗಳು ಹೆಚ್ಚಾಗಿದ್ದು, ಹಿರಿಯ ಅಧಿಕಾರಿಗಳ ವಿರುದ್ಧ ಕಿರಿಯ ಅಧಿಕಾರಿಗಳು ಬಹಿರಂಗ ಹೇಳಿಕೆ ನೀಡಿ ಗಂಭೀರ ಆರೋಪ ಮಾಡಿದ್ದಾರೆ. ಮಂಗಳೂರಿನ ಪೊಲೀಸ್ ಕಮೀಷನರ್ ವಿರುದ್ಧ ಡಿಸಿಆರ್‌ಇ ಎಸ್ಪಿ ಎಸ್.ಎಸ್.ಕಾಶಿ ಅವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಡಿಸಿಆರ್‌ಇ ಪಶ್ಚಿಮ ವಲಯ ಪೊಲೀಸ್ ಇನ್ಸ್ ಪೆಕ್ಟರ್ ಟಿ.ಆರ್.ಶ್ರೀನಿವಾಸ್ ಅವರು ಪತ್ರ ಬರೆದು, ಎಸ್ಪಿ ಕರಿ ಬಸವನಗೌಡ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಎಸ್.ಎಸ್.ಕಾಶಿಯವರು ತಮ ಪತ್ರದಲ್ಲಿ ತಾವು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಬೆಂಗಳೂರು ನಗರ ವಲಯದಲ್ಲಿ ಎಸ್ಪಿಯಾಗಿ ಕೆಲಸ ಮಾಡುತ್ತಿದ್ದು, ಕರ್ನಾಟಕ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲವು ಐಪಿಎಸ್ ಅಧಿಕಾರಿಗಳು ತಮ ಅಧಿಕಾರ ಬಲದಿಂದ ಕೆಳ ಹಂತದ ಸಿಬ್ಬಂದಿಗಳ ಮೇಲೆ ದರ್ಪ, ತಾರತಮ್ಯ, ಸ್ವಜನ ಪಕ್ಷಪಾತದಂತಹ ಪ್ರವೃತ್ತಿಗಳನ್ನು ತೋರಿಸುತ್ತಿದ್ದಾರೆ.
ಅದರಲ್ಲೂ ಬೇರೆ ರಾಜ್ಯಗಳಿಂದ ಬಂದು ಕರ್ನಾಟಕದಲ್ಲಿ ಕೆಲಸ ಮಾಡುತ್ತಿರುವ ಕೆಲವು ಐಪಿಎಸ್ ಅಧಿಕಾರಿಗಳು ಮೂಲತಃ ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದು ಇಲ್ಲಿಯೇ ತಾಯ್ನಾಡಿನಲ್ಲಿ ಕರ್ತವ್ಯವಹಿಸುತ್ತಿರುವ ಕನ್ನಡ ಅಧಿಕಾರಿಗಳನ್ನು ಹತ್ತಿಕ್ಕುವ ಉದ್ದೇಶದಿಂದ ವಿಪರೀತ ದರ್ಪ ತೋರಿಸಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಹೊರ ರಾಜ್ಯದಿಂದ ಕನ್ನಡಿಗರ ಸೇವೆಗೆಂದು ಬಂದು ಕನ್ನಡಿಗರಿಂದ ಕೂಲಿ ಪಡೆಯುತ್ತಿರುವ ಮಂಗಳೂರು ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಅವರ ಕರ್ಮಕಾಂಡಗಳು, ಅಧೀನ ಅಧಿಕಾರಿ-ಸಿಬ್ಬಂದಿಗಳಿಗೆ ನೀಡಿರುವ ಕಿರುಕುಳಗಳು, ಮಾಡಿರುವ ದೌರ್ಜನ್ಯಗಳು ಹಾಗೂ ಇತರ ಐಪಿಎಸ್ ಅಧಿಕಾರಿಗಳ ಕರ್ಮಕಾಂಡವನ್ನು ಮತ್ತು ಕರ್ನಾಟಕದಲ್ಲಿ ಕನ್ನಡಿಗ ಅಧಿಕಾರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಎಳೆಎಳೆಯಾಗಿ ತೆರೆದಿಡುವ ಸದುದ್ದೇಶದಿಂದ, ಮುಖ್ಯಮಂತ್ರಿ, ಗೃಹಮಂತ್ರಿ ಮತ್ತು ಗೃಹ ಕಾರ್ಯದರ್ಶಿಗಳ ಸಮಕ್ಷಮದಲ್ಲಿ ಏಪ್ರಿಲ್ 18ರಿಂದ 29ರ ನಡುವೆ ತಮಗೆ 30 ನಿಮಿಷಗಳ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಡಿಜಿಪಿ ಒಬ್ಬರು ಅಪ್ಪಟ ಕನ್ನಡ ನಾಡಿನ ಅಧಿಕಾರಿಯಾಗಿದ್ದು, ನಿಮಿಂದ ನ್ಯಾಯ ಸಿಗುತ್ತದೆ ಎಂಬ ಮಹೋನ್ನತ ಉದ್ದೇಶದಿಂದ ತಮ ಅಹವಾಲನ್ನು ಮೌಖಿಕವಾಗಿ ಹಾಗೂ ಲಿಖಿತವಾಗಿ ಹಲವಾರು ಬಾರಿ ತಿಳಿಸಿದ್ದೇನೆ. ನಿಮಿಂದ ಶೇ. 20ರಷ್ಟು ಮಾತ್ರ ಸಮಸ್ಯೆ ಬಗೆ ಹರಿಸಲು ಸಾಧ್ಯವಾಗಿದ್ದು, ಶೇ. 80 ರಷ್ಟು ಹಾಗೆ ಇವೆ ಎಂದು ಹೇಳಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಇನ್‌್ಸಪೆಕ್ಟರ್ ಟಿ.ಆರ್.ಶ್ರೀನಿವಾಸ್, ಡಿಸಿಆರ್‌ಇನ ಎಸ್ಪಿ ಕರಿ ಬಸವನಗೌಡ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದು, ತಮಗೆ ಕಿರುಕುಳ ನೀಡುತ್ತಿದ್ದಾರೆ. ಇದು ಮುಂದುವರೆದರೆ ಆತಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.
