ಬೆಂಗಳೂರು,ಏ.20-ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿರುವ ಘಟನೆ ಚಿಕ್ಕಬಾಣವಾರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮೃತಪಟ್ಟ ಬೈಕ್ ಸವಾರನನ್ನು ಬಸವೇಶ್ವರ ನಗರದ ನಾಗರಾಜು (61) ಎಂದು ಗುರುತಿಸಲಾಗಿದೆ. ಇವರು ನಂದಿನಿ ಮಿಲ್್ಕ ಪಾರ್ಲರ್ ನಡೆಸುತ್ತಿದ್ದರು.ನಾಗರಾಜು ಅವರು ದ್ವಿಚಕ್ರ ವಾಹನದಲ್ಲಿ ಇಂದು ಬೆಳಗ್ಗೆ 10.15 ರ ಸುಮಾರಿನಲ್ಲಿ ಕನ್ನಮಂಗಲದಲ್ಲಿರುವ ಮಗಳ ಮನೆಗೆ ಹೋಗುತ್ತಿದ್ದರು.
ನೆಲಮಂಗಲದಿಂದ ಯಲಹಂಕಕ್ಕೆ ಹೋಗುತ್ತಿದ್ದ ಬಿಎಂಟಿಸಿ ಬಸ್ ಮಧುರೆ ರಸ್ತೆಯ ಬೆನಕ ಕಲ್ಯಾಣ ಮಂಟಪದ ಬಳಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾಗರಾಜು ಗಂಭೀರ ಗಾಯಗೊಂಡರು.
ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದು ಚಿಕ್ಕಬಾಣವಾರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
