Monday, April 20, 2026
Homeಅಂತಾರಾಷ್ಟ್ರೀಯಇರಾನ್‌ ಸರಕು ಹಡಗು ವಶಕ್ಕೆ ಪಡೆದ ಅಮೆರಿಕ

ಇರಾನ್‌ ಸರಕು ಹಡಗು ವಶಕ್ಕೆ ಪಡೆದ ಅಮೆರಿಕ

Iran cargo ship seized by US could become ‘spoils of war’

ಟೆಹ್ರಾನ್‌, ಏ. 20- ಅಮೆರಿಕ ತನ್ನ ನೌಕಾ ದಿಗ್ಬಂಧನದ ಭಾಗವಾಗಿ ಕೊಲ್ಲಿಯಲ್ಲಿ ಇರಾನಿನ ಸರಕು ಹಡಗನ್ನು ತಡೆದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ತಿಳಿಸಿದ್ದಾರೆ. ಇರಾನ್‌ನ ಟೌಸ್ಕಾ ಹಡಗನ್ನು ಅಮೆರಿಕದ ನೌಕಾಪಡೆಯು ನಿಲ್ಲಿಸುವಂತೆ ನೀಡಿದ ಎಚ್ಚರಿಕೆಗೆ ಸ್ಪಂದಿಸದ ಕಾರಣ ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಮ್ಮ ಟ್ರೂತ್‌ ಸೋಶಿಯಲ್‌ ಪ್ಲಾಟ್‌ಫಾರ್ಮ್‌ನಲ್ಲಿ ಬರೆದುಕೊಂಡಿದ್ದಾರೆ.

ಅಮೆಕಾದ ಈ ಧೋರಣೆಯಿಂದ ಕೋಪಗೊಂಡಿರುವ ಇರಾನ್‌ ಇದು ಕದನ ವಿರಾಮದ ಉಲ್ಲಂಘನೆಯಾಗಿದ್ದು, ಸಶಸ್ತ್ರ ಕಡಲ್ಗಳ್ಳತನದ ಕೃತ್ಯಕ್ಕೆ ಶೀಘ್ರದಲ್ಲೇ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಸಿದೆ.

ಕದನ ವಿರಾಮ ಒಪ್ಪಂದ ಮಾತುಕತೆಗೆ ಇರಾನ್‌ ನಕಾರ ವ್ಯಕ್ತಪಡಿಸಿದೆ. ಅಮೆರಿಕಾದ ದಿಗ್ಬಂಧನ ಜಾರಿಯಲ್ಲಿರುವವರೆಗೆ ಶಾಂತಿ ಮಾತುಕತೆ ಸಾಧ್ಯವಿಲ್ಲ. ಎರಡನೇ ಸಭೆಗೆ ಹಾಜರಾಗುವುದಿಲ್ಲ. ಇರಾನ್‌ ಬಂದರುಗಳ ಸುತ್ತಲೂ ನೌಕಾ ದಿಗ್ಬಂಧನ ಮುಂದುವರಿದಿದೆ. ಇದು ಕದನ ವಿರಾಮ ಒಪ್ಪಂದದ ಉಲ್ಲಂಘನೆ ಹೀಗಾಗಿ ಮಾತುಕತೆಗಳಿಂದ ಹಿಂದೆ ಸರಿಯುತ್ತಿದ್ದೇವೆ ಎಂದು ಇರಾನ್‌ ಸ್ಪಷ್ಟಪಡಿಸಿದೆ.

ಈ ಘಟನೆಗಳ ನಂತರ ಹಾರ್ಮುಜ್‌ನಲ್ಲಿ ಅಮೆರಿಕ ಸೇನಾಪಡೆಯಿಂದ ಗುಂಡಿನ ಮೊರೆತದ ಸದ್ದು ಜೋರಾಗಿದ್ದು, ಈ ದಾಳಿಗೆ ಪ್ರತಿಕಾರವಾಗಿ ಇರಾನ್‌ನ ಇಸ್ಲಾಮಿಕ್‌ ರೆವಲ್ಯೂಷನ್‌ ಗಾರ್ಡ್‌್ಸ ಕಾರ್ಪ್‌್ಸ ಮರು ದಾಳಿ ನಡೆದಿದೆ.

RELATED ARTICLES

Latest News