ಬೆಂಗಳೂರು/ತುಮಕೂರು, ಏ.21- ಬಿಸಿಲಿನ ತಾಪಮಾನ ಏರಿಕೆಯಿಂದ ತರಕಾರಿ ಬೆಳೆಗಳ ಮೇಲೆ ಭಾರೀ ಹೊಡೆತ ಬಿದ್ದು ಇಳುವರಿ ಕುಂಠಿತವಾಗಿ ತರಕಾರಿಗಳ ಬೆಲೆ ಹೆಚ್ಚಾಗಿದ್ದು, ಬೀನ್‌್ಸ ಶತಕ ಬಾರಿಸಿದೆ. ರಾಜ್ಯಾದ್ಯಂತ ಬಿಸಿಲಿನ ರೌದ್ರಾವತಾರಕ್ಕೆ ಜನರು ತತ್ತರಿಸಿದ್ದು, ತರಕಾರಿಗಳ ಬೆಲೆ ಏರಿಕೆ ಗ್ರಾಹಕರ ಜೇಬನ್ನು ಸುಡುತ್ತಿದೆ.
ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದಿಂದಾಗಿ ರಾಜ್ಯದಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾದ ಹಿನ್ನೆಲೆಯಲ್ಲಿ ಹಲವು ಹೋಟೆಲ್, ರೆಸ್ಟೋರೆಂಟ್‌ಗಳು, ಪಿಜಿಗಳು ತಾತ್ಕಾಲಿಕವಾಗಿ ಬಂದ್ ಆಗಿದ್ದವು. ಈ ವೇಳೆ ತರಕಾರಿ ಬೆಲೆ ಇಳಿದಿತ್ತು. ಆದರೆ, ಈಗ ಸ್ಪಲ್ಪಮಟ್ಟದಲ್ಲಿ ಚೇತರಿಸಿಕೊಂಡಿದ್ದು, ಮದುವೆ , ಜಾತ್ರೆ , ಶುಭ ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿದ್ದು, ಮಾರುಕಟ್ಟೆಗಳಲ್ಲಿ ತರಕಾರಿಗೆ ಬೇಡಿಕೆ ಹೆಚ್ಚಾಗಿದ್ದು, ನೀರಿಕ್ಷಿತ ಪ್ರಮಾಣದಲ್ಲಿ ಮಾಲು ಬಾರದಿರುವುದರಿಂದ ಬೆಲೆ ಹೆಚ್ಚಳವಾಗಿದೆ.
ಕಳೆದ ವಾರಕ್ಕೆ ಹೊಲಿಸಿದರೆ ಪ್ರತಿ ತರಕಾರಿಗಳ ಬೆಲೆ ಕೆಜಿಗೆ 20 ರಿಂದ 30 ರೂ.ಗೆ ಹೆಚ್ಚಳವಾಗಿದೆ. ಈ ಭಾರಿ ತಾಪಮಾನ ಗರಿಷ್ಠ ಮಟ್ಟದಲ್ಲಿ ಏರಿಕೆಯಾಗಿದ್ದು, ಒಣಹವೆ ಹಾಗೂ ಬಿಸಿಲಿನ ತಾಪಕ್ಕೆ ಜನತೆ ತತ್ತರಿಸಿಹೊಗಿದ್ದಾರೆ. ಈ ನಡುವೆ ವಿದ್ಯುತ್ ಕೊರತೆ, ಕೊಳವೆಬಾವಿಗಳಲ್ಲಿ ಪಾತಾಳ ತಲುಪಿದ ಅಂತರ್ಜಲದಿಂದ ನೀರಿನ ಅಭಾವ ಸೃಷ್ಟಿಯಾಗಿದ್ದು, ತರಕಾರಿ ಬೆಳೆಗೆ ಬೇಕಾದ ಪೂರಕ ವಾತಾವರಣವಿಲ್ಲದ ಕಾರಣ ಇಳುವರಿಯಲ್ಲಿ ಭಾರೀ ಕುಂಠಿತವಾಗಿ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗಿದೆ.
ತರಕಾರಿ ಬೆಳೆಗೆ ಹೆಚ್ಚಾಗಿ ನೀರಿನ ಅವಶ್ಯಕತೆ ಇದ್ದು, ಅದರಲ್ಲೂ ಬೀನ್‌್ಸಗೆ ಹೆಚ್ಚಾಗಿ ತಂಪು ವಾತಾವರಣ ಹಾಗೂ ಹೆಚ್ಚಿನ ನೀರು ಬೆಕಾಗಿದೆ. ಆದರೆ, ಪ್ರಸ್ತುತ ಬಿಸಿಲಿನ ತಾಪಕ್ಕೆ ಬೆಳೆ ಉತ್ತಮವಾಗಿ ಬಾರದಿರುವುದರಿಂದ ಇಳುವರಿಯಲ್ಲಿ ಹೊಡೆತಬಿದ್ದಿದೆ. ಇದರಿಂದ ಕೆಜಿಗೆ 80 ರಿಂದ 100 ರೂ.ಗೆೆ ಹೆಚ್ಚಳವಾಗಿದೆ.
ಕಳೆದ ವಾರ 20 ರೂ. ಮಾರಾಟವಾಗುತ್ತಿದ್ದ ಕೆಜಿ ಟೊಮ್ಯಾಟೋ ಈಗ 35 ರಿಂದ 40 ರೂ. ತಲುಪಿದೆ. ಅದೇ ರೀತಿ ಕ್ಯಾರೆಟ್ 50 ರಿಂದ 60ರೂ., ಕ್ಯಾಪ್ಸಿಕಂ 80, ಗೆಡ್ಡೆಕೋಸು 50ರೂ., ಆಲೂಗೆಡ್ಡೆ 40 ರೂ., ಬಿಟ್ರೂಟ್ 40ರೂ., ಹಾಗಲಕಾಯಿ 60ರೂ., ಸೌತೆಕಾಯಿ 50ರೂ., ಬದನೆಕಾಯಿ 40 ರೂ ಗೆ ಮಾರಾಟವಾಗುತ್ತಿದೆ.
10 ರೂ.ಗೆ ಒಂದು ನಿಂಬೆ: ಬಿಸಿಲಿನ ಝಳಕ್ಕೆ ಜನರು ತತ್ತರಿಸಿದ್ದು, ಹೆಚ್ಚಾಗಿ ತಂಪು ಪಾನೀಯಗಳ ಮೊರೆಹೊಗುತ್ತಿದ್ದಾರೆ. ಎಲ್ಲೆಡೆ ನಿಂಬೆ ಶರಬತ್ತು ಮಾರಾಟ ಹೆಚ್ಚಾಗಿದೆ. ಜೊತೆಗೆ ಮನೆಗಳಲ್ಲೂ ಸಹ ನಿಂಬೆಹಣ್ಣು ಬಳಸಲಾಗುತ್ತಿದೆ. ಬಿಸಿಲಿನ ತಾಪಕ್ಕೆ ನಿಂಬೆಕಾಯಿ ಗಿಡದಲ್ಲಿ ಕಚ್ಚದೆ ಎಳೆ ಕಾಯಿಗಳೇ ಉದುರುತ್ತಿವೆ. ಇದರಿಂದ ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ನಿಂಬೆಹಣ್ಣು ಬಾರದಿರುವುದರಿಂದ ಬೆಂಗಳೂರಿನಲ್ಲಿ ಚಿಲ್ಲರೆಯಾಗಿ 10ರೂ.ಗೆ ಒಂದು ಹಣ್ಣು ಮಾರಾಟ ಮಾಡಲಾಗುತ್ತಿದೆ.
