Homeರಾಜ್ಯಏರುಗತಿಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ

ಏರುಗತಿಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ

Gold and silver prices on the rise

ಬೆಂಗಳೂರು,ಜೂ.15-ನಿರಂತರ ಕುಸಿತದಿಂದ ಚೇತರಿಕೆ ಕಂಡಿರುವ ಚಿನ್ನ ಮತ್ತು ಬೆಳ್ಳಿ ದರಗಳು ಇಂದು ಕೂಡ ಏರಿಕೆಯಾಗಿವೆ. ಮೇ ಕೊನೆಯ ವಾರದಿಂದ ಜೂನ್‌ 8ರವರೆಗೆ ಇಳಿಮುಖವಾಗಿದ್ದ ಚಿನ್ನವು ಜೂ.9ರಂದು ಅಲ್ಪ ಪ್ರಮಾಣದ ಚೇತರಿಕೆ ಕಂಡಿತ್ತು. ಆನಂತರ ಎರಡು ದಿನ ದರ ಕುಸಿತವಾಗಿದ್ದ ಚಿನ್ನವು ಮತ್ತೆ ಏರುಗತಿಯಲ್ಲಿ ಸಾಗುತ್ತಿದೆ.

ಲಭ್ಯವಿರುವ ಮಾಹಿತಿ ಪ್ರಕಾರ 24 ಕ್ಯಾರೆಟ್‌ನ ಚಿನ್ನವು 1 ಗ್ರಾಂಗೆ 245 ರೂ. ಹೆಚ್ಚಳವಾಗಿದ್ದು, 15,153 ರೂ.ನಷ್ಟಿದೆ. 22 ಕ್ಯಾರೆಟ್‌ನ 1 ಗ್ರಾಂ ಚಿನ್ನವು 225 ರೂ.ನಷ್ಟು ಏರಿಕೆಯಾಗಿದ್ದು, 13,890 ರೂ.ನಷ್ಟಿದೆ.

18 ಕ್ಯಾರೆಟ್‌ನ ಚಿನ್ನವು 1 ಗ್ರಾಂಗೆ 184 ರೂ.ನಷ್ಟು ಏರಿಕೆಯಾಗಿದ್ದು, 11,365 ರೂ.ನಷ್ಟಿದೆ. ಜೂ.12ರಿಂದ ಏರುಗತಿಯಲ್ಲಿ ಸಾಗುತ್ತಿರುವ ಚಿನ್ನದ ದರವು ನಿನ್ನೆ ಸ್ಥಿರವಾಗಿತ್ತು. ಇಂದು ಮತ್ತೆ ಏರಿಕೆಯತ್ತ ಸಾಗಿದೆ.

ಬೆಳ್ಳಿ ದರವು 1 ಕೆಜಿಗೆ ಇಂದು 5 ಸಾವಿರ ರೂ.ನಷ್ಟು ಏರಿಕೆಯಾಗಿದ್ದು, 2,65,000 ರೂ.ನಷ್ಟಿದೆ. ಮೇ ಅಂತ್ಯದಿಂದ ಇಳಿಮುಖವಾಗಿ ಸಾಗುತ್ತಿದ್ದ ಬೆಳ್ಳಿ ದರವು ಜೂ.12ರಂದು ದಿಢೀರ್‌ ಏರಿಕೆಯಾಗಿತ್ತು. ಆನಂತರ ಎರಡು ದಿನ ಸ್ಥಿರವಾಗಿದ್ದು ಇಂದು ಮತ್ತೆ ಹೆಚ್ಚಳ ಕಂಡಿದೆ.

ಜಾಗತಿಕ ಮಟ್ಟದಲ್ಲಿ ಉಂಟಾಗುವ ಬದಲಾವಣೆಗಳ ಪರಿಣಾಮ ಚಿನಿವಾರಪೇಟೆಯಲ್ಲಿ ಏರಿಳಿತವಾಗಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಆಗಾಗ್ಗೆ ವ್ಯತ್ಯಾಸ ಕಂಡುಬರುತ್ತಿದೆ ಎಂದು ವರ್ತಕರು ಅಭಿಪ್ರಾಯಪಟ್ಟಿದ್ದಾರೆ.

RELATED ARTICLES
spot_img

Latest News