ಬೆಂಗಳೂರು, ಏ. 23- ಅಪಾರ್ಟ್ಮೆಂಟ್ಗಳ ವಾಶ್ ರೂಂ ಕಿಟಕಿಯ ಮೂಲಕ ಒಳ ನುಗ್ಗಿ ಕಳವು ಮಾಡುತ್ತಿದ್ದ ಆರೋಪಿಯನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿ 7.57 ಲಕ್ಷ ಮೌಲ್ಯದ 62 ಗ್ರಾಂ ಚಿನ್ನಾಭರಣ ಹಾಗೂ 17 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಾಗಲೂರು ಕಾಲೋನಿಯ ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಿರುವ ನಿವಾಸಿಯೊಬ್ಬರು ತುರ್ತು ಕಾರಣದಿಂದ ಹೊರಗೆ ಹೋಗಿ ವಾಪಸ್ ಬರುವಷ್ಟರಲ್ಲಿ ಅವರ ಮನೆಯ ವಾಶ್ರೂಂ ಕಿಟಕಿಯ ಮೂಲಕ ಕಳ್ಳರು ಒಳ ನುಗ್ಗಿ ಆಭರಣ ಕಳುವು ಮಾಡಿಕೊಂಡು ಹೋಗಿರುವುದು ಗೊತ್ತಾಗಿದೆ.
ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಮಾಹಿತಿಗಳನ್ನು ಕಲೆ ಹಾಕಿ ಅಪಾರ್ಟ್ಮೆಂಟ್ ಬಳಿಯೇ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕಳುವು ಮಾಡಿರುವುದಾಗಿ ಹೇಳಿದ್ದಾನೆ.
ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಿದಾಗ ಕಳುವು ಮಾಡಿದ ಆಭರಣಗಳನ್ನು ಮೈಸೂರಿನ ಕುವೆಂಪುನಗರ, ಆರ್ಟಿನಗರ, ಯಲಹಂಕ, ಯಲಹಂಕ ನ್ಯೂಟೌನ್ ಮತ್ತು ದೇವನಹಳ್ಳಿಯ ಜ್ಯೂವೆಲರಿ ಅಂಗಡಿಗಳಲ್ಲಿ ಅಡಮಾನವಿಟ್ಟಿರುವುದಾಗಿ ತಿಳಿಸಿದ್ದಾನೆ.
ಆತನ ಮಾಹಿತಿಯಂತೆ ಆ ಆಭರಣಗಳ ಅಂಗಡಿಗಳಿಂದ ಸುಮಾರು 7.57 ಲಕ್ಷ ರೂ. ಮೌಲ್ಯದ 62 ಗ್ರಾಂ ಚಿನ್ನಾಭರಣ ಹಾಗೂ 17 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಇನ್ಸ್ ಪೆಕ್ಟರ್ ಅಶೋಕ್ ಮತ್ತು ಸಿಬ್ಬಂದಿ ತಂಡ ಯಶಸ್ವಿಯಾಗಿದೆ.
ಬಿಎಸ್ಎನ್ಎಲ್ ಸಿಬ್ಬಂದಿ ಸಮವಸ್ತ್ರ ಧರಿಸಿ ಕಳ್ಳತನ : ಮಾಡ್ಯೂಲ್ಸ್ , ಕಾಪರ್ ಕೇಬಲ್ಗಳು ವಶ
ಬೆಂಗಳೂರು, ಏ. 23-ಬಿಎಸ್ಎನ್ಎಲ್ ಸಿಬ್ಬಂದಿಗಳಂತೆ ಸಮವಸ್ತ್ರ ಹಾಗೂ ಹೆಲೆಟ್ ಧರಿಸಿಕೊಂಡು ಕಾರಿನಲ್ಲಿ ಸುತ್ತಾಡುತ್ತಾ ಎಲೆಕ್ಟ್ರಿಕ್ ಪಿಲ್ಲರ್ಗಳನ್ನು ಒಡೆದು ಮಾಡ್ಯೂಲ್ಸ್ ಮತ್ತು ಕಾಪರ್ ಕೇಬಲ್ಗಳನ್ನು ಕಳುವು ಮಾಡುತ್ತಿದ್ದ ಹೊರರಾಜ್ಯದ ಮೂವರು ಆರೋಪಿಗಳನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿ 7 ಲಕ್ಷ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಏ.17 ರಿಂದ 19 ರ ನಡುವೆ ಬಿಎಸ್ಎನ್ಎಲ್ ಕಂಪನಿಗೆ ಸಂಬಂಧಿಸಿದ 2.39 ಲಕ್ಷ ರೂ. ಮೌಲ್ಯ ಬೆಲೆಬಾಳುವ 2160 ಮಾಡ್ಯೂಲ್್ಸ ಮತ್ತು 66 ಮೀಟರ್ ಕಾಪರ್ ಕೇಬಲ್ ಕಳುವಾಗಿರುವ ಬಗ್ಗೆ ಬಿಎಸ್ಎನ್ಎಲ್ ಕಚೇರಿಯವರು ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆಹಾಕಿ ಯಶವಂತಪುರದ ಮತ್ತಿಕೆರೆಯಲ್ಲಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಾಪರ್ ಕೇಬಲ್ ಕಳುವು ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ.
ಹಗಲು ಮತ್ತು ರಾತ್ರಿ ವೇಳೆಯಲ್ಲಿ ಕಾರನ್ನು ಬಳಸಿಕೊಂಡು ಬಿಎಸ್ಎನ್ಎಲ್ ಸಿಬ್ಬಂದಿ ಧರಿಸುವ ಸಮವಸ್ತ್ರ ಹಾಗೂ ಹೆಲೆಟನ್ನು ಹಾಕಿಕೊಂಡು ನಗರದ ಮತ್ತಿಕೆರೆ,
ಯಶವಂತಪುರ, ಮಲ್ಲೇಶ್ವರಂ ಹಾಗೂ ಸದಾಶಿವನಗರದಲ್ಲಿ ಸುತ್ತಾಡುತ್ತಾ ಪುಟ್ಪಾತ್ ಬದಿಯಲ್ಲಿ ಬಿಎಸ್ಎನ್ಎಲ್ ಕಂಪನಿಗೆ ಸಂಬಂಧಿಸಿದ ಟೆಲಿಫೋನ್, ಇಂಟರ್ನೆಟ್ ಹಾಗೂ ಲ್ಯಾನ್ಗೆ ಅಳವಡಿಸಿದಂತಹ ಕಬ್ಬಿಣದ ಪಿಲ್ಲರ್ಗಳನ್ನು ಒಡೆದು ಮಾಡ್ಯೂಲ್ಸ್ ಮತ್ತು ಕಾಪರ್ ಕೇಬಲ್ಗಳನ್ನು ಕಳುವು ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ.
ಕಳವು ಮಾಡಿದ ಈ ಮಾಲನ್ನು ಮಾರಾಟ ಮಾಡುವ ಸಲುವಾಗಿ ರೈಲ್ವೆ ನಿಲ್ದಾಣಕ್ಕೆ ಕಾರಿನಲ್ಲಿ ಸಾಗಿಸುತ್ತಿದ್ದುದ್ದಾಗಿ ಆರೋಪಿಗಳು ಹೇಳಿದ್ದು, ಇವರ ವಶದಿಂದ 4140 ಮಾಡ್ಯೂಲ್್ಸ ಮತ್ತು 60 ಮೀಟರ್ ಕಾಪರ್ ಕೇಬಲ್ಗಳು, ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳುವಲ್ಲಿ ಇನ್್ಸಪೆಕ್ಟರ್ ಮಂಜುನಾಥ್ ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದು, ಇವುಗಳ ಒಟ್ಟು ಮೌಲ್ಯ 7 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.
