Homeರಾಷ್ಟ್ರೀಯಕಾಕ್ರೋಚ್‌ ಪಾರ್ಟಿ ವ್ಯವಸ್ಥಿತ ಸಂಚು : ಪಾಕ್, ಬಾಂಗ್ಲಾ & ಟರ್ಕಿ ಫಾಲೋವರ್ಸ್ ಹೆಚ್ಚು

ಕಾಕ್ರೋಚ್‌ ಪಾರ್ಟಿ ವ್ಯವಸ್ಥಿತ ಸಂಚು : ಪಾಕ್, ಬಾಂಗ್ಲಾ & ಟರ್ಕಿ ಫಾಲೋವರ್ಸ್ ಹೆಚ್ಚು

ನವದೆಹಲಿ, ಮೇ 23 ಸದ್ಯ ಸಂಚಲನ ಸೃಷ್ಟಿಸಿರುವ ಕಾಕ್ರೋಚ್‌ ಪಾರ್ಟಿಗೆ ನಮ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದವರೇ ಅತಿ ಹೆಚ್ಚು ಫಾಲೋವರ್‌ರ‍ಸಗಳನ್ನು ಹೊಂದಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಅಭಿಜಿತ್‌ ದಿಪ್ಕೆ ಅವರ ಸಿಜೆಪಿ ವಿಪಕ್ಷಗಳ ಟೂಲ್‌ಕಿಟ್‌ನ ಭಾಗ ಎಂದು ಕೆಲವರು ಆರೋಪಿಸಿದ್ದಾರೆ ಅದಕ್ಕೆ ತಕ್ಕಂತೆ ಇದೀಗ ನೆಟ್ಟಿಗರು ಸಿಜೆಪಿಯ ಫಾಲೋವರ್ಸ್‌ಗಳಲ್ಲಿ ಶೇಕಡ 80ರಷ್ಟು ಮಂದಿ ಮುಸ್ಲಿಂ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ, ಟರ್ಕಿಯವರೇ ಇದ್ದಾರೆ ಎಂದು ಹೇಳಿದ್ದಾರೆ.

ಸೋಷಿಯಲ್‌ ಮೀಡಿಯಾ ಬಳಕೆದಾರರಲ್ಲಿ ಹಲವರು ಸಿಜೆಪಿಯನ್ನು ವಿದೇಶಿಗರು ಅದರಲ್ಲಿ ಹೆಚ್ಚಾಗಿ ಪಾಕಿಸ್ತಾನದವರು ಫಾಲೋ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನ, ಬಾಂಗ್ಲಾದೇಶ, ಸೌದಿ ಅರೇಬಿಯಾ ಮತ್ತು ಟರ್ಕಿಯ ಫಾಲೋವರ್ಸ್‌ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಹೇಳುವ ಹಲವು ಪೋಸ್ಟ್‌ಗಳು ಸದ್ದು ಮಾಡುತ್ತಿವೆ. ಇನ್‌ಸ್ಟಗ್ರಾಮ್‌ನಲ್ಲಿ ಸಿಜೆಪಿಯ ಫಾಲೋವರ್ಸ್‌ಗಳಲ್ಲಿ ಶೇಕಡ 49ರಷ್ಟು ಮಂದಿ ಪಾಕಿಸ್ತಾನದವರು. ಅಮೆರಿಕ ಮತ್ತು ಬಾಂಗ್ಲಾದೇಶದ ಪ್ರಜೆಗಳು ಶೇಕಡ 14ರಷ್ಟಿದ್ದಾರೆ. ಭಾರತ-ಶೇಕಡ 9, ಇಂಗ್ಲೆಂಡ್‌, ಆಸ್ಟ್ರೇಲಿಯಾ, ಸೌದಿ ಅರೇಬಿಯಾ-ತಲಾ ಶೇಕಡ 3, ಯುಎಇ-ಶೇಕಡ 2ರಷ್ಟು ಮಂದಿ ಇದ್ದಾರೆ ಎನ್ನುವ ಪೋಸ್ಟ್‌ ವೈರಲ್‌ ಆಗಿದ್ದು, ಆತಂಕಕ್ಕೆ ಕಾರಣವಾಗಿದೆ.

ಇದೊಂದು ದೊಡ್ಡ ಸಂಚು. ಪಾಕಿಸ್ತಾನ, ಅಮೆರಿಕ, ಬಾಂಗ್ಲಾದೇಶ ದೊಡ್ಡ ರಾಜತಾಂತ್ರಿಕ ಸಂಚು ರೂಪಿಸಿದೆ. ಮೋದಿ ಸರ್ಕಾರವದ ವಿರುದ್ಧ ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದನ್ನು ಯಾವ ಕಾರಣಕ್ಕೂ ಫಾಲೋ ಮಾಡಬೇಡಿ ಎಂದು ಕೆಲವರು ಸಲಹೆ ನೀಡಿದ್ದಾರೆ.

RELATED ARTICLES

Latest News