Homeಕ್ರೀಡಾ ಸುದ್ದಿಶತಕ ಸಿಡಿಸಿ 2 ದಾಖಲೆ ನಿರ್ಮಿಸಿದ ಶ್ರೇಯಸ್‌‍ ಅಯ್ಯರ್‌

ಶತಕ ಸಿಡಿಸಿ 2 ದಾಖಲೆ ನಿರ್ಮಿಸಿದ ಶ್ರೇಯಸ್‌‍ ಅಯ್ಯರ್‌

ಲಕ್ನೋ, ಮೇ 24-ಪ್ರಸಕ್ತ ಐಪಿಎಲ್‌ ಟೂರ್ನಿಯ ಮಹತ್ತರ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್ ನಾಯಕ ಶ್ರೇಯಸ್‌ ಅಯ್ಯರ್‌ ಆಕರ್ಷಕ ಶತಕ (101) ಶತಕ ಸಿಡಿಸುವ ಮೂಲಕ ಪ್ಲೇಆ್‌‍ ಆಸೆಯನ್ನು ಜೀವಂತವಾಗಿರಿಸಿ ಎರಡು ಮಹೋನ್ನತ ದಾಖಲೆ ನಿರ್ಮಿಸಿದ್ದಾರೆ. ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಲಖನೌ ಸೂಪರ್‌ ಜಯಂಟ್‌್ಸ ಜೋಶ್‌ ಇಂಗ್ಲಿಶ್‌ (72ರನ್‌) ಅರ್ಧಶತಕ ನೆರವಿನಿಂದ 196 ರನ್‌ ಗಳಿಸಿತು. ಚೇಸಿಂಗ್‌ ನಲ್ಲಿ ಪ್ರಭುಸಿಮ್ರಾನ್‌ (69 ರನ್‌) ಹಾಗೂ ಶ್ರೇಯಸ್‌ ಐಯ್ಯರ್‌ (101) ರ ವಿರೋಚಿತ ಆಟದ ನೆರವಿನಿಂದ 18 ಓವರ್‌ ಗಳಲ್ಲೇ 200 ರನ್‌ ಸಿಡಿಸಿ ಪಂದ್ಯ ಜಯಿಸಿತು.

ಐಪಿಎಲ್‌ ಟೂರ್ನಿಯಲ್ಲಿ ಚೇಸಿಂಗ್‌ ವೇಳೆ ಶತಕ ಸಿಡಿಸಿ ಪಂದ್ಯ ಗೆಲ್ಲಿಸಿದ ಮೂರನೇ ನಾಯಕರಾಗಿ ಶ್ರೇಯಸ್‌ ಅಯ್ಯರ್‌ ದಾಖಲೆ ನಿರ್ಮಿಸಿದರು. ಈ ಹಿಂದೆ ವೀರೇಂದ್ರ ಸೆಹ್ವಾಗ್‌ (119) ಹಾಗೂ ವಿರಾಟ್‌ ಕೊಹ್ಲಿ (108) ಶತಕ ಸಿಡಿಸಿ ಪಂದ್ಯ ಗೆಲ್ಲಿಸಿದ್ದರು.
4ನೇ ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್‌:

  • ಶ್ರೇಯಸ್‌ ಅಯ್ಯರ್‌- 101*ರನ್‌- ಎಲ್‌ಎಸ್‌ಜಿ ವಿರುದ್ಧ- 2026
  • ದಿನೇಶ್‌ ಕಾರ್ತಿಕ್‌‍- 97- ಕೆಕೆಆರ್‌ VS ಆರ್‌ಆರ್‌- 2019
  • ರಿಯಾನ್‌ ಪರಾ- 95- ಆರ್‌ಆರ್‌ VS ಕೆಕೆಆರ್‌ – 2025
  • ರೋಹಿತ್‌ ಶರ್ಮಾ- 94- ಮುಂಬೈVS ಆರ್‌ಸಿಬಿ – 2018
  • ರಿಯಾನ್‌ ಪರಾಗ್‌‍- 90- ರ್‌ಆರ್‌ VS ಡಿಸಿ – 2026
    ಈ ಗೆಲುವಿನೊಂದಿಗೆ 14 ಪಂದ್ಯಗಳಲ್ಲಿ 7 ಗೆಲುವು, 6 ಸೋಲಿನೊಂದಿಗೆ 15 ಅಂಕಗಳೊಂದಿಗೆ 4 ನೇ ಸ್ಥಾನದಲ್ಲಿರುವ ಪಂಜಾಬ್‌ ಕಿಂಗ್ಸ್ ಪ್ಲೇಆ್‌‍ಗೇರಲು ರಾಜಸ್ಥಾನ್‌ ರಾಯಲ್‌್ಸ ತಂಡದ ಸೋಲನ್ನು ಎದುರು ನೋಡುತ್ತಿದೆ.
RELATED ARTICLES

Latest News