ಬೆಂಗಳೂರು, ಮೇ 24- ಟಾಲಿವುಡ್ ನಟ ರಾಮ್‌ಚರಣ್ ಅವರು ತಮ ಎಡವಟ್ಟು ಹೇಳಿಕೆಗೆ ಭಾರತದ ಯಾರ್ಕರ್ ಸ್ಪೆಷಾಲಿಸ್ಟ್ ಜಸ್ಪ್ರೀತ್ ಬೂಮ್ರಾ ಅವರ ಬಳಿ ಕ್ಷಮೆಯಾಚಿಸಿದ್ದಾರೆ. ರಾಮ್‌ಚರಣ್ ಹಾಗೂ ಸ್ಯಾಂಡಲ್‌ವುಡ್ ನಟ, ಸೆಂಚುರಿ ಸ್ಟಾರ್ ಡಾ. ಶಿವರಾಜ್‌ಕುಮಾರ್ ಅವರ ನಟನೆಯ ಪೆದ್ದಿ ಸಿನಿಮಾದ ಪ್ರಚಾರದ ವೇಳೆ ರಾಮ್‌ಚರಣ್ ಅವರು ಬೂಮ್ರಾ ಅವರನ್ನು ಫುಟ್ಬಾಲ್ ಆಟಗಾರ ಎಂದು ಸಂಬೋಧಿಸಿದ್ದು, ಈ ವಿಡಿಯೋ ಸಾಕಷ್ಟು ವೈರಲ್ ಆದ ಬೆನ್ನಲ್ಲೇ ರಾಮ್‌ಚರಣ್ ಕ್ಷಮೆಯಾಚಿಸಿದ್ದಾರೆ.
ಪೆದ್ದಿ ಕ್ರಿಕೆಟ್ ಹಿನ್ನೆಲೆ ಇರುವ ಸಿನಿಮಾವಾಗಿದ್ದು, ವೇದಿಕೆಯಲ್ಲಿ ಕೆಲವು ಕ್ರಿಕೆಟಿಗರ ಹೆಸರನ್ನು ಹೇಳುವಂತೆ ರಾಮ್‌ಚರಣ್‌ರನ್ನು ಕೇಳಿದ್ದಾರೆ. ಆಗ ಅವರು ವಿರಾಟ್ ಕೊಹ್ಲಿ , ಸಚಿನ್ ತೆಂಡೂಲ್ಕರ್,ಎಂ.ಎಸ್.ಧೋನಿ, ರೋಹಿತ್ ಶರ್ಮಾ ಅವರ ಹೆಸರನ್ನು ಹೇಳಿ ಶಿಳ್ಳೆಗಿಟ್ಟಿಸಿದ್ದಾರೆ. ಅದೇ ವೇಳೆ ಬುಮ್ರಾ ಹೆಸರನ್ನು ಉಲ್ಲೇಖಿಸಿ ಆತ ಒಬ್ಬ ಅದ್ಭುತ ಆಟಗಾರ ನಾನು ಅವರ ಅಪ್ಪಟ ಅಭಿಮಾನಿ ಎಂದು ಹೇಳಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ತಕ್ಷಣ ಟ್ವೀಟ್ ಮಾಡಿದ ರಾಮ್‌ಚರಣ್, `ಅಯ್ಯೊಯ್ಯೋ, ನಾನು ಕೆಲವೊಮೆ ಕೆಲವರ ಹೆಸರನ್ನು ಮರೆತುಬಿಡುತ್ತೇನೆ, ಈ ಗೊಂದಲಕ್ಕೆ ಜಸ್‌ಪ್ರೀತ್ ಬೂಮ್ರಾ ಬಳಿ ಕ್ಷಮೆಯಾಚಿಸುತ್ತೇನೆ. ಭಾರೀ ಉತ್ಸಾಹ ಹಾಗೂ ಜನಸಮೂಹದಿಂದಾಗಿ ಈ ಎಡವಟ್ಟು ಆಗಿದೆ. ನಾನು ನಿಮ ಆಟಕ್ಕೆ ದೊಡ್ಡ ಅಭಿಮಾನಿಯಾಗಿದ್ದು, ನಿಮ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ’ ಎಂದು ಹೇಳಿದ್ದಾರೆ.
