Homeರಾಷ್ಟ್ರೀಯಸಿಎನ್‌ಜಿ ದರ ಮತ್ತಷ್ಟು ಏರಿಕೆ, ಪ್ರತಿ ಕೆಜಿಗೆ 2 ರೂ. ಹೆಚ್ಚಳ

ಸಿಎನ್‌ಜಿ ದರ ಮತ್ತಷ್ಟು ಏರಿಕೆ, ಪ್ರತಿ ಕೆಜಿಗೆ 2 ರೂ. ಹೆಚ್ಚಳ

Mumbai CNG gets Rs 2/kg costlier from Saturday; piped cooking gas rates also raised

ಮುಂಬೈ, ಮೇ.30- ಸತತ ತೈಲ ಬೆಲೆ ಏರಿಕೆ ಮಾದರಿಯಲ್ಲೇ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ) ದರ ಕೂಡ ಮತ್ತೆ ಏರಿಕೆಯಾಗಿದೆ.ಸರ್ಕಾರಿ ಅನಿಲ ವಿತರಕ ಮಹಾನಗರ ಗ್ಯಾಸ್‌‍ ಲಿಮಿಟೆಡ್‌ ಸಂಸ್ಥೆಯು ಪ್ರತಿ ಒಂದು ಕೆಜಿ ಸಿಎನ್‌ಜಿಗೆ ಎರಡು ರೂ.ಗಳಷ್ಟು ಹೆಚ್ಚಳ ಮಾಡಿದೆ. ಮುಂಬೈನಲ್ಲಿ ಇಂದಿನ ಅನ್ವಯವಾಗುವಂತೆ ಹೊಸ ದರ ಘೋಷಿಸಿದೆ.

ಪರಿಷ್ಕೃತ ದರದಲ್ಲಿ ಸಿಎನ್‌ಜಿ ಬೆಲೆ ಪ್ರತಿ ಕೆಜಿಗೆ 2 ರೂ. ಹೆಚ್ಚಿಸಲಾಗಿದ್ದು, 86 ರೂ.ಗಳಿಗೆ ಏರಿಕೆಯಾಗಿದೆ. ಇನ್ನೂ ಗೃಹ ಬಳಕೆಯ ಪಿಎನ್‌ಜಿ ಸ್ಟ್ಯಾಂಡರ್ಡ್‌ ಕ್ಯೂಬಿಕ್‌ ಮೀಟರ್‌ಗೆ 50 ಪೈಸೆ ಹೆಚ್ಚಿಸಲಾಗಿದೆ. ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಗೆ ಬರಲಿದೆ.

ಕಳೆದ ಮೇ 26 ರಂದು ದೆಹಲಿಯಲ್ಲೂ ಸಿಎನ್‌ಜಿ ಬೆಲೆ ಪ್ರತಿ ಕೆಜಿಗೆ 2 ರೂ. ಹೆಚ್ಚಳ ಮಾಡಲಾಗಿತ್ತು. ಇದಕ್ಕೂ ಮುನ್ನ ಮುಂಬೈ ವ್ಯಾಪ್ತಿಯಲ್ಲಿ ಮೇ 14 ರಂದು 2 ರೂ. ಹೆಚ್ಚಳ ಮಾಡಲಾಗಿತ್ತು. ಸದ್ಯ ಈಗಿನ ಪರಿಷ್ಕೃತ ದರವು ಮುಂಬೈ, ಥಾಣೆ, ನವಿ ಮುಂಬೈ ಮತ್ತು ಮುಂಬೈ ಮೆಟ್ರೋಪಾಲಿಟನ್‌ ಪ್ರದೇಶದ (ಎಂಎಂಆರ್‌) ಇತರ ಭಾಗಗಳಿಗೆ ಅನ್ವಯವಾಗಲಿದೆ.

ಸರ್ಕಾರಿ ಅನಿಲ ವಿತರಕ ಮಹಾನಗರ ಗ್ಯಾಸ್‌‍ ಲಿಮಿಟೆಡ್‌ (ಎಂಜಿಎಲ್‌‍) ಕಲ್ಯಾಣ್‌‍, ರಾಯಗಢ, ರತ್ನಗಿರಿ, ಲಾತೂರ್‌, ಉಸ್ಮಾನಾಬಾದ್‌‍, ಚಿತ್ರದುರ್ಗ ಮತ್ತು ದಾವಣಗೆರೆ ಸೇರಿದಂತೆ ಹಲವಾರು ನಗರಗಳಿಗೆ ಅನಿಲ ಪೂರೈಸುತ್ತದೆ.

ಯಾರಿಗೆ ಹೊರೆ?ಸಿಎನ್‌ಜಿ ಬೆಲೆ ಹೆಚ್ಚಳವು ದೆಹಲಿಯಲ್ಲಿ ವಾಣಿಜ್ಯ ವಾಹನ ಚಾಲಕರಿಗೆ ಹೆಚ್ಚು ಹೊರೆಯಾಗಲಿದೆ. ಆಟೋಗಳು, ಟ್ಯಾಕ್ಸಿಗಳು, ಶಾಲಾ ವ್ಯಾನ್‌ಗಳು ಮತ್ತು ಖಾಸಗಿ ಕಾರುಗಳು ಸಿಎನ್‌ಜಿಯ ಸಾಮಾನ್ಯ ಬಳಕೆದಾರರಾಗಿದ್ದಾರೆ. ಈ ಬೆಲೆ ಏರಿಕೆಯೂ ಈ ವರ್ಗದ ಚಾಲಕರಿಗೆ ಹೆಚ್ಚು ಆರ್ಥಿಕ ಹೊರೆ ನೀಡಲಿದೆ.

ಅಲ್ಲದೇ ಸಿಎನ್‌ಜಿ ಬೆಲೆ ಏರಿಕೆಯು ಮುಂಬರುವ ದಿನಗಳಲ್ಲಿ ಪ್ರಯಾಣ ಮತ್ತು ಸರಕು ಸಾಗಣೆ ದರಗಳನ್ನ ಹೆಚ್ಚಿಸಲು ಕಾರಣವಾಗಬಹುದು ಎಂದು ಆಟೋ ಮತ್ತು ಟ್ಯಾಕ್ಸಿ ಚಾಲಕರ ಒಕ್ಕೂಟಗಳು ಹೇಳುತ್ತಿವೆ.

RELATED ARTICLES

Latest News