ಚಂಡೀಗಢ, ಮೇ.29- ಪಂಜಾಬ್‌ನ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತಾರೂಢ ಎಎಪಿ ಭರ್ಜರಿ ಜಯ ಸಾಧಿಸಿದೆ. ಒಟ್ಟು 1,977 ವಾರ್ಡ್‌ಗಳಲ್ಲಿ 958 ವಾರ್ಡ್‌ಗಳನ್ನು ಗೆದ್ದು ಶೇ.48ಕ್ಕಿಂತ ಹೆಚ್ಚು ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಕಾಂಗ್ರೆಸ್ 397 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿ ಎರಡನೇ ಸ್ಥಾನದಲ್ಲಿದೆ.
ರಾಜ್ಯ ಚುನಾವಣಾ ಆಯೋಗದ ಅಂಕಿ-ಅಂಶಗಳ ಪ್ರಕಾರ, ಎಸ್‌ಎಡಿ 191 ವಾರ್ಡ್‌ಗಳಲ್ಲಿ ಹಾಗೂ ಬಿಜೆಪಿ 172 ವಾರ್ಡ್‌ಗಳಲ್ಲಿ ಜಯಗಳಿಸಿವೆ. ಪಕ್ಷೇತರ ಅಭ್ಯರ್ಥಿಗಳು 251 ವಾರ್ಡ್‌ಗಳಲ್ಲಿ ಗೆಲುವು ದಾಖಲಿಸಿದ್ದು,ಬಿಎಸ್‌ಪಿ) 7 ವಾರ್ಡ್‌ಗಳಲ್ಲಿ ಜಯ ಸಾಧಿಸಿದೆ.ಈ ಫಲಿತಾಂಶವನ್ನು ತಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಜನರು ನೀಡಿದ ಅನುಮೋದನೆ ಎಂದು ಮುಖ್ಯಮಂತ್ರಿ ಭಗವಂತ್ ಮಾನ್‌ಬಣ್ಣಿಸಿದ್ದಾರೆ.
ಪಂಜಾಬ್ ಜನರು ದ್ವೇಷದ ರಾಜಕೀಯವನ್ನು ಸೋಲಿಸಿದ್ದಾರೆ. ವಿಭಜನಾ ರಾಜಕೀಯ ನಡೆಸುವ ಪಕ್ಷಗಳನ್ನು ತಿರಸ್ಕರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.ಎಎಪಿ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್ ಅವರು ಪಂಜಾಬ್ ಜನತೆಗೆ ಧನ್ಯವಾದ ಸಲ್ಲಿಸಿ, ಈ ಐತಿಹಾಸಿಕ ಮತದಾನದ ಮೂಲಕ ಜನರು ಭಗವಂತ್ ಮಾನ್ ಸರ್ಕಾರದ ಕೆಲಸವನ್ನು ಮೆಚ್ಚಿದ್ದಾರೆ. ಮುಂದೆಯೂ ಇದೇ ರೀತಿಯ ಉತ್ತಮ ಆಡಳಿತ ನೀಡುತ್ತೇವೆ ಎಂದರು.
ಬಿಜೆಪಿಯನ್ನು ಟೀಕಿಸಿದ ಅವರು,ಇಂಡಿ ಪಕ್ಷವನ್ನು ಜನರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಎಂದು ಹೇಳಿದರು.50 ವಾರ್ಡ್‌ಗಳನ್ನು ಹೊಂದಿರುವ ಎಂಟು ಮಹಾನಗರ ಪಾಲಿಕೆಗಳಲ್ಲಿ ಎಎಪಿ ಮೋಗಾ, ಬರ್ನಾಲಾ, ಭಟಿಂಡಾ ಮತ್ತು ಬಟಾಲಾದಲ್ಲಿ ಸ್ಪಷ್ಟ ಬಹುಮತ ಸಾಧಿಸಿದೆ.ಮೊಹಾಲಿಯಲ್ಲಿ 26 ವಾರ್ಡ್‌ಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮಿದೆ. ಇನ್ನೊಂದೆಡೆ, ಕಪುರ್ತಲಾದಲ್ಲಿ ಕಾಂಗ್ರೆಸ್ 31 ವಾರ್ಡ್‌ಗಳನ್ನು ಗೆದ್ದು ಪ್ರಾಬಲ್ಯ ಸಾಧಿಸಿದೆ. ಪಠಾಣ್‌ಕೋಟ್ ಮತ್ತು ಅಬೋಹರ್‌ನಲ್ಲಿ ಬಿಜೆಪಿ ಕ್ರಮವಾಗಿ 22 ಮತ್ತು 28 ವಾರ್ಡ್‌ಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಇಂಡಿ ನೇತೃತ್ವದ ಕಾಂಗ್ರೆಸ್, ಚುನಾವಣೆಯಲ್ಲಿ ಅಧಿಕಾರ ದುರುಪಯೋಗ ಮತ್ತು ಸರ್ಕಾರಿ ಯಂತ್ರಾಂಗದ ದುರ್ಬಳಕೆ ನಡೆದಿದೆ ಎಂದು ಆರೋಪಿಸಿದೆ.ಮೇ 26ರಂದು ನಡೆದ ಚುನಾವಣೆಯಲ್ಲಿ ಎಂಟು ಮಹಾನಗರ ಪಾಲಿಕೆಗಳು, 75 ನಗರಸಭೆಗಳು ಹಾಗೂ 19 ನಗರ ಪಂಚಾಯಿತಿಗಳ ವ್ಯಾಪ್ತಿಯ ಒಟ್ಟು 1,977 ವಾರ್ಡ್‌ಗಳಿಗೆ ಮತದಾನ ನಡೆದಿತ್ತು. ಮತದಾನ ಪ್ರಮಾಣ ಶೇ.63.94 ದಾಖಲಾಗಿತ್ತು.ಒಟ್ಟು 7,554 ಅಭ್ಯರ್ಥಿಗಳು ಕಣದಲ್ಲಿದ್ದರೆ, 80 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು.
ಮುಂದಿನ ವರ್ಷದ ಪಂಜಾಬ್ ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ಈ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಎಎಪಿ ಸರ್ಕಾರದ ಜನಪ್ರಿಯತೆಗೆ ಪರೀಕ್ಷೆಯಾಗಿ ಪರಿಗಣಿಸಲಾಗಿತ್ತು. ಫಲಿತಾಂಶವು ಎಎಪಿಗೆ ಆತ್ಮವಿಶ್ವಾಸ ತುಂಬಿದರೆ, ಕಾಂಗ್ರೆಸ್‌ಗೆ ಗಿದ್ದರ್‌ಬಾಹಾ ನಗರಸಭೆ ಕಳೆದುಕೊಂಡಿರುವುದು ಹಿನ್ನಡೆಯಾಗಿ ಪರಿಣಮಿಸಿದೆ. ನಗರ ಪ್ರದೇಶಗಳಲ್ಲಿ ತನ್ನ ಪ್ರಭಾವ ವಿಸ್ತರಿಸುವ ನಿರೀಕ್ಷೆಯಲ್ಲಿದ್ದ ಬಿಜೆಪಿಯೂ ನಿರೀಕ್ಷಿತ ಮಟ್ಟದ ಸಾಧನೆ ಮಾಡಲಿಲ್ಲ. ಇದೇ ವೇಳೆ, ಎಸ್‌ಎಡಿ ನಗರ ಪ್ರದೇಶಗಳಲ್ಲಿ ತನ್ನ ಸಾಂಪ್ರದಾಯಿಕ ಬೆಂಬಲ ನೆಲೆಯನ್ನು ಇನ್ನೂ ಉಳಿಸಿಕೊಂಡಿದೆ ಎಂಬುದನ್ನು ಈ ಫಲಿತಾಂಶಗಳು ತೋರಿಸಿವೆ.
