Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-06-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-06-2026)

Today's Horoscope

ನಿತ್ಯ ನೀತಿ : ನಿತ್ಯ ಸುಖ ಆನಂದವನ್ನುಂಟು ಮಾಡುವುದೇ ಭಕ್ತಿಯ ಪರಾಕಾಷ್ಠೆ. ಭಗವಂತನ ನಾಮಸ್ಮರಣೆಯಿಂದ ಚಿತ್ತ ವೃತ್ತಿ ಶುದ್ಧವಾಗುತ್ತಾ ಹೋಗುತ್ತದೆ. ಅಂತಹ ಭಕ್ತಿಯೇ ಮುಕ್ತಿಗೆ ಸಾಧನವಾಗಲಿದೆ.

ಪಂಚಾಂಗ : ಸೋಮವಾರ, 01-06-2026
ಪರಾಭವ ನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಗ್ರೀಷ / ಮಾಸ: ಅಧಿಕ ಜ್ಯೇಷ್ಠ / ಪಕ್ಷ: ಕೃಷ್ಣ / ತಿಥಿ: ಪ್ರತಿಪದಾ / ನಕ್ಷತ್ರ: ಜ್ಯೇಷ್ಠಾ / ಯೋಗ: ಸಿದ್ಧ / ಕರಣ: ತೈತಿಲ
ಸೂರ್ಯೋದಯ – ಬೆ.5.53
ಸೂರ್ಯಾಸ್ತ – 06.43
ರಾಹುಕಾಲ – 7.30-9.00
ಯಮಗಂಡ ಕಾಲ – 10.30-12.00
ಗುಳಿಕ ಕಾಲ – 1.30-3.00

ರಾಶಿಭವಿಷ್ಯ :
ಮೇಷ
: ನೀವು ಮಾಡುವ ಕೆಲಸ-ಕಾರ್ಯಗಳಿಗೆ ಜೀವನ ಸಂಗಾತಿಯ ಬೆಂಬಲ ನಿಮಗೆ ಸಿಗುತ್ತದೆ.
ವೃಷಭ: ಹಳೆ ಸ್ನೇಹಿತರೊಂದಿಗೆ ಮಾತನಾಡುವ ಮೂಲಕ ನಿಮ್ಮ ವಿಷಯಗಳನ್ನು ಹಂಚಿಕೊಳ್ಳಬಹುದು.
ಮಿಥುನ: ಮನೆಯ ಸದಸ್ಯರು ನಿಮ್ಮನ್ನು ನೋಯಿಸಿ ದ್ದರೆ, ಅವರು ನಿಮ್ಮ ಬಳಿ ಬಂದು ಕ್ಷಮೆ ಕೇಳುವರು.

ಕಟಕ: ಸಾಲದ ವ್ಯವಹಾರ ಮಾಡುವುದನ್ನು ತಪ್ಪಿಸಿ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವಿರಿ.
ಸಿಂಹ: ಮಾನಸಿಕ ಒತ್ತಡ ಹೆಚ್ಚಾಗಬಹುದು. ಯೋಗ ಮಾಡುವುದರಿಂದ ಪ್ರಯೋಜನವಾಗುತ್ತದೆ.
ಕನ್ಯಾ: ಆಹಾರದ ಬಗ್ಗೆ ಗಮನ ಕೊಡುವುದು ಒಳಿತು. ಇಲ್ಲದಿದ್ದರೆ ನಿಮ್ಮ ಆರೋಗ್ಯ ಹದಗೆಡಬಹುದು. ಎಚ್ಚರಿಕೆ ವಹಿಸಿ.

ತುಲಾ: ಕೆಲಸಕ್ಕೆ ಸಂಬಂ ಸಿದಂತೆ ಹಿರಿಯರಿಂದ ಕೆಲವು ಉತ್ತಮ ಸಲಹೆಗಳನ್ನು ಪಡೆಯಬಹುದು.
ವೃಶ್ಚಿಕ: ಗುರಿ ತಲುಪುವಲ್ಲಿ ನಿಮ್ಮ ಶ್ರಮ ಸಾರ್ಥಕವೆನಿಸಲಿದೆ. ಲಕ್ಷ್ಮೀ ಪೂಜೆ ಮಾಡುವುದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ.
ಧನುಸ್ಸು: ಸಾಮಾಜಿಕ ಜೀವನದಲ್ಲಿ ಆಹ್ಲಾದಕರ ಅನುಭವಗಳಾಗುತ್ತವೆ.

ಮಕರ: ಒಡಹುಟ್ಟಿದವರೊಂದಿಗೆ ಸಮಯ ಕಳೆಯುವ ಅವಕಾಶ ಸಿಗಲಿದೆ ಮತ್ತು ಅವರಿಂದ ಲಾಭವೂ ದೊರೆಯುವುದು.
ಕುಂಭ: ತಂದೆಯೊಂದಿಗೆ ವೈಮನಸ್ಯವಿದ್ದರೆ ಪರಿಹರಿಸಿ ಕೊಳ್ಳಬಹುದು. ಅವರ ಮಾತಿಗೆ ಮನ್ನಣೆ ನೀಡಿ.
ಮೀನ: ಮನೆಯ ಸಾಮಗ್ರಿಗಳ ಖರೀದಿಗಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗಬಹುದು.

RELATED ARTICLES

Latest News