Homeರಾಜ್ಯಬೆಂಗಳೂರಲ್ಲಿ ನಾಲ್ವರು ಡ್ರಗ್ಸ್ ಪೆಡ್ಲರ್‌ಗಳ ಬಂಧನ : 14.94 ಲಕ್ಷ ಮೌಲ್ಯದ ಗಾಂಜಾ ಜಪ್ತಿ

ಬೆಂಗಳೂರಲ್ಲಿ ನಾಲ್ವರು ಡ್ರಗ್ಸ್ ಪೆಡ್ಲರ್‌ಗಳ ಬಂಧನ : 14.94 ಲಕ್ಷ ಮೌಲ್ಯದ ಗಾಂಜಾ ಜಪ್ತಿ

Four drug peddlers arrested in Bengaluru: Ganja worth Rs 14.94 lakh seized..

ಬೆಂಗಳೂರು,ಜೂ.9- ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಹೊರರಾಜ್ಯದ ಮೂವರು ಡ್ರಗ್ಸ್ ಪೆಡ್ಲರ್‌ಗಳು ಸೇರಿದಂತೆ ನಾಲ್ವರನ್ನು ಬಂಧಿಸಿ 14.94 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿ ಕೊಂಡಿದ್ದಾರೆ.

ಪುಲಕೇಶಿನಗರದ ಅರ್ಜುನ್‌ (21), ಮಾರತ್ತಹಳ್ಳಿಯ ಫಿರೋಜ್‌ ಅನ್ಸಾರಿ ‘(38), ಬೊಮನಹಳ್ಳಿಯ ತ್ರಿಭುವನ್‌ಕುಮಾರ್‌ (22) ಮತ್ತು ಭಾರತಿನಗರ ನಿವಾಸಿ ಮುಜಾಮಿಲ್‌ ಅಹಮದ್‌ (36) ಬಂಧಿತ ಡ್ರಗ್‌್ಸಪೆಡ್ಲರ್‌ಗಳು.

ಮಾರತ್ತಹಳ್ಳಿ, ಬೊಮನಹಳ್ಳಿ, ಪುಲಕೇಶಿನಗರ, ಭಾರತಿನಗರ ಪೊಲೀಸ್‌‍ ಠಾಣಾ ವ್ಯಾಪ್ತಿಗಳಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಹೊರರಾಜ್ಯದ ಮೂವರು ಹಾಗೂ ಸ್ಥಳೀಯ ಒಬ್ಬನನ್ನು ಬಂಧಿಸಲಾಗಿದೆ.
ಡ್ರಗ್‌್ಸ ಪೆಡ್ಲರ್‌ಗಳಿಂದ 10 ಕೆ.ಜಿ 200 ಗಾಂಜಾ, 20 ಗ್ರಾಂ ಎಂಡಿಎಂಎ, 10.03 ಗ್ರಾಂ ಮೆಥಪೆಂಟಮೈನ್‌, 2.5 ಕೆ.ಜಿ ಕೊಡೈನ್‌ ಕಾ್‌‍ ಸಿರಪ್‌ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಒಟ್ಟು ಮೌಲ್ಯ 7.47 ಲಕ್ಷ (ಮಾರುಕಟ್ಟೆ ಮೌಲ್ಯ 14.94 ಲಕ್ಷ) ರೂ.ಗಳೆಂದು ಅಂದಾಜಿಸಲಾಗಿದೆ.

ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ, ಹೆಚ್ಚಿನ ಹಣಗಳಿಸುವ ಉದ್ದೇಶದಿಂದ, ಹೊರ ರಾಜ್ಯದ ಮತ್ತು ಸ್ಥಳೀಯ ಅಪರಿಚಿತ ವ್ಯಕ್ತಿಗಳಿಂದ ನಿಷೇಧಿತ ಮಾದಕ ವಸ್ತುಗಳಾದ ಗಾಂಜಾ, ಎಂಡಿಎಂಎ, ಮೆಥಪೆಂಟಮೈನ್‌, ಕೊಡೈನ್‌ ಕಾ್‌‍ ಸಿರಪ್‌ ಅನ್ನು ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ಹೇಳಿದ್ದಾರೆ.

ಈ ಪ್ರಕರಣಗಳಲ್ಲಿ ಆರೋಪಿಗಳಿಗೆ ನಿಷೇಧಿತ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಹೊರ ರಾಜ್ಯದ ಮತ್ತು ಸ್ಥಳೀಯ ಅಪರಿಚಿತ ವ್ಯಕ್ತಿಗಳ ಪತ್ತೆ ಕಾರ್ಯ ಮುಂದುವರೆದಿದ್ದು, ಪ್ರಕರಣಗಳ ತನಿಖೆಯು ಪ್ರಗತಿಯಲ್ಲಿರುತ್ತವೆ.

ಈ ಕಾರ್ಯಾಚರಣೆಯಲ್ಲಿ ವೈಟ್‌ಫೀಲ್ಡ್ , ಪೂರ್ವ, ಆಗ್ನೇಯ ವಿಭಾಗದ ಉಪ ಪೊಲೀಸ್‌‍ ಆಯುಕ್ತರುಗಳಾದ ಸೈದುಲ್ಲಾ ಅದಾವತ್‌, ವಿಕ್ರಮ ಅಮಟೆ, ಮೊಹಮದ್‌ ಸುಜೀತರವರ ಮಾರ್ಗದರ್ಶನದಲ್ಲಿ ಮಾರತ್ತಹಳ್ಳಿ, ಪುಲಕೇಶಿನಗರ ಹಾಗೂ ಮೈಕೋ ಲೇಔಟ್‌ ಉಪವಿಭಾಗದ ಸಹಾಯಕ ಪೊಲೀಸ್‌‍ ಆಯುಕ್ತ ರವರುಗಳ ನೇತೃತ್ವದಲ್ಲಿ, ಇನ್ಸ್ ಪೆಕ್ಟರ್‌ಗಳು ಹಾಗೂ ಇತರೆ ಸಿಬ್ಬಂದಿ ತಂಡ ಪ್ರಕರಣಗಳನ್ನು ಬೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

RELATED ARTICLES

Latest News