Homeಅಂತಾರಾಷ್ಟ್ರೀಯಇರಾನ್‌-ಅಮೆರಿಕ ಯುದ್ಧ : ಮತ್ತೆ ಹಾರ್ಮುಜ್‌ ಜಲಸಂಧಿ ಬಂದ್‌

ಇರಾನ್‌-ಅಮೆರಿಕ ಯುದ್ಧ : ಮತ್ತೆ ಹಾರ್ಮುಜ್‌ ಜಲಸಂಧಿ ಬಂದ್‌

Iran-US War: Strait of Hormuz Closed Again

ಟೆಹ್ರಾನ್‌, ಜೂ.11- ಇರಾನ್‌, ಅಮೆರಿಕ ಮತ್ತು ಇಸ್ರೇಲ್‌ ದೇಶಗಳ ನಡುವೆ ಮತ್ತೆ ಘರ್ಷಣೆ ಉಲ್ಬಣಗೊಂಡಿದೆ. ಈ ಬೆಳವಣಿಗೆ ಬೆನ್ನಲ್ಲೇ ಹಾರ್ಮುಜ್‌ ಜಲಸಂಧಿಯನ್ನು ಇರಾನ್‌ ಮತ್ತೆ ಬಂದ್‌ ಮಾಡಿದೆ.

ಹಾರ್ಮುಜ್‌ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಿರುವುದಾಗಿ ಇರಾನ್‌ ಘೋಷಿಸಿದ್ದು, ಈ ಜಲಸಂಧಿಯನ್ನು ದಾಟಲು ಪ್ರಯತ್ನಿಸುವ ಯಾವುದೇ ಹಡಗಿನ ಮೇಲೆ ದಾಳಿ ಮಾಡಲಾಗುವುದು ಎಂದು ಎಚ್ಚರಿಸಿದೆ.

ಭಾರತ ಸೇರಿದಂತೆ ಎಲ್ಲ ದೇಶಗಳಿಗೂ ಐಆರ್‌ಜಿಸಿ ಈ ಎಚ್ಚರಿಕೆ ಸಂದೇಶ ರವಾನಿಸಿದೆ. ಹಾರ್ಮುಜ್‌ ಮೇಲಿನ ನಿರ್ಬಂಧದಿಂದ ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ.

ದೇಶದ ಉನ್ನತ ಜಂಟಿ ಮಿಲಿಟರಿ ಕಮಾಂಡ್‌‍, ವಾಣಿಜ್ಯ ಹಡಗುಗಳು ಮತ್ತು ತೈಲ ಟ್ಯಾಂಕರ್‌ಗಳು ಸೇರಿದಂತೆ ಎಲ್ಲಾ ಸಂಚಾರಕ್ಕೂ ಹಾರ್ಮುಜ್‌ ಜಲಸಂಧಿಯನ್ನು ಸ್ಥಗಿತಗೊಳಿಸಲು ಆದೇಶಿಸಿದೆ.
ಬುಧವಾರ ಇರಾನ್‌ ವಿರುದ್ಧ ಅಮೆರಿಕ ಮತ್ತೊಂದು ಸರಣಿ ಮಿಲಿಟರಿ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಇದು ಮೂರು ತಿಂಗಳಿಗೂ ಹೆಚ್ಚು ಕಾಲ ಮುಂದುವರಿದಿರುವ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸಿದೆ.

RELATED ARTICLES
spot_img

Latest News