Homeಕ್ರೀಡಾ ಸುದ್ದಿಫಿಫಾ ಫುಟ್ಬಾಲ್‌ ವಿಶ್ವಕಪ್‌ ಹಬ್ಬ ಆರಂಭ

ಫಿಫಾ ಫುಟ್ಬಾಲ್‌ ವಿಶ್ವಕಪ್‌ ಹಬ್ಬ ಆರಂಭ

The 2026 FIFA World Cup tournament opens

– ಜಯಪ್ರಕಾಶ್‌

ಮೆಕ್ಸಿಕೊ ಸಿಟಿ, ಜೂ.11- ಕ್ರೀಡಾಲೋಕದ ಅತ್ಯಂತ ರೋಮಾಂಚಕ ಹಾಗೂ ಪ್ರತಿಷ್ಠಿತ ಕ್ರೀಡಾಕೂಟ ಎನಿಸಿಕೊಂಡಿರುವ ಪ್ರಸಕ್ತ ಸಾಲಿನ ಫಿಫಾ ಫುಟ್ಬಾಲ್‌ ವಿಶ್ವಕಪ್‌ ಪಂದ್ಯಾವಳಿ ಇಂದಿನಿಂದ ಆರಂಭಗೊಂಡಿದೆ. ಫುಟ್ಬಾಲ್‌ ಪಂದ್ಯಾವಳಿಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮೂರು ರಾಷ್ಟ್ರಗಳಾದ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ ಜಂಟಿಯಾಗಿ ಈ ಜಾಗತಿಕ ಫುಟ್‌ಬಾಲ್‌‍ ಹಬ್ಬವನ್ನು ಆಯೋಜಿಸುತ್ತಿವೆ.

ಮೆಕ್ಸಿಕೋ ಸಿಟಿಯ ಐತಿಹಾಸಿಕ ಅಜ್ಟೆಕಾ ಕ್ರೀಡಾಂಗಣದಲ್ಲಿ ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ ಇಂದಿನ ಪಂದ್ಯ ಆರಂಭವಾಗಲಿದೆ.ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಮೆಕ್ಸಿಕೋ ತಂಡವು ಸೌತ್‌ ಆಫ್ರಿಕಾ ಎದುರು ಹೊರಾಡಲಿದೆ. ಈ ಬಾರಿಯ ವಿಶ್ವಕಪ್‌ ಹಲವಾರು ದಾಖಲೆಗಳನ್ನು ಬರೆಯುತ್ತಿದೆ.

ಇದುವರೆಗೆ ಕೇವಲ 32 ತಂಡಗಳು ಮಾತ್ರ ಭಾಗವಹಿಸುತ್ತಿದ್ದ ವಿಶ್ವಕಪ್‌ನಲ್ಲಿ, ಈ ಬಾರಿ ದಾಖಲೆಯ 48 ರಾಷ್ಟ್ರಗಳು ಕಣಕ್ಕಿಳಿಯುತ್ತಿವೆ. ಹೀಗಾಗಿ ಪಂದ್ಯಗಳ ರೋಮಾಂಚನ ದುಪ್ಪಟ್ಟಾಗಲಿದೆ.

ಒಟ್ಟು 39 ದಿನಗಳ ಕಾಲ ನಡೆಯಲಿರುವ ಈ ಟೂರ್ನಿಯಲ್ಲಿ ಕಪ್‌ಗಾಗಿ 104 ಪಂದ್ಯಗಳು ಜರುಗಲಿವೆ. ಜು.19ರಂದು ನ್ಯೂಜೆರ್ಸಿಯಲ್ಲಿ ಹೈ-ವೋಲ್ಟೇಜ್‌ ಫೈನಲ್‌ ಪಂದ್ಯ ನಡೆಯಲಿದೆ. ತಂಡಗಳನ್ನು ತಲಾ ನಾಲ್ಕರಂತೆ 12 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಹಾಗೂ ಮೂರನೇ ಸ್ಥಾನ ಪಡೆಯುವ 8 ಅತ್ಯುತ್ತಮ ತಂಡಗಳು ನಾಕೌಟ್‌ (ರೌಂಡ್‌ ಆಫ್‌ 32) ಹಂತಕ್ಕೆ ಲಗ್ಗೆ ಇಡಲಿವೆ.

ಫುಟ್‌ಬಾಲ್‌‍ ಲೋಕದ ಶ್ರೇಷ್ಠ ಆಟಗಾರರಾದ ಲಿಯೋನೆಲ್‌ ಮೆಸ್ಸಿ(ಅರ್ಜೆಂಟೀನಾ) ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ (ಪೋರ್ಚುಗಲ್‌‍) ಆಡಲಿರುವ ಕೊನೆಯ ವಿಶ್ವಕಪ್‌ ಇದಾಗಿರಲಿದೆ.
ಡಿಫೆಂಡಿಂಗ್‌ ಚಾಂಪಿಯನ್‌ ಅರ್ಜೆಂಟೀನಾ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಹೋರಾಡಿದರೆ, ಬ್ರೆಜಿಲ್‌‍, ಫ್ರಾನ್‌್ಸ ಮತ್ತು ಸ್ಪೇನ್‌ ತಂಡಗಳು ಪ್ರಬಲ ಪೈಪೋಟಿ ನೀಡಲು ಸಜ್ಜಾಗಿವೆ.

ಚೊಚ್ಚಲ ವಿಶ್ವಕಪ್‌ :
ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ತಂಡಗಳ ಸಂಖ್ಯೆಗಳನ್ನು 48ಕ್ಕೆ ಹೆಚ್ಚಿಸಿದ್ದು, ಕೇಪ್‌ ವರ್ಡೆ, ಉಜ್ಬೇಕಿಸ್ತಾನ್‌, ಜೋರ್ಡಾನ್‌ ಹಾಗೂ ಕುರ್ಯಾಕೋ ಚೊಚ್ಚಲ ವಿಶ್ವಕಪ್‌ ಆಡಲು ಅರ್ಹತೆ ಹೊಂದಿದೆ, ಕುರ್ಯಾಕೋ ವಿಶ್ವದ ಅತ್ಯಂತ ಚಿಕ್ಕ ದೇಶವಾಗಿದ್ದು 1.58 ಲಕ್ಷ ಜನಸಂಖ್ಯೆ ಹೊಂದಿದೆ.

2026ರ ಕಾಲ್ಚೆಂಡು ವಿಶ್ವಸಮರದಲ್ಲಿ ನಿರ್ಮಾಣವಾಗುವ ದಾಖಲೆಗಳು
ಫಿಾ ವಿಶ್ವಕಪ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 48 ತಂಡಗಳು ಪಾಲ್ಗೊಳ್ಳುತ್ತಿದ್ದು, ಟ್ಬಾಲ್‌ ಪ್ರೇಮಿಗಳ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.ಇಂದಿನಿಂದ (ಜೂನ್‌ 11) ರಿಂದ ಜುಲೈ 19ರವರೆಗೆ ಯುನೈಟೆಡ್‌ ಸ್ಟೇಟ್‌್ಸ, ಕೆನಡಾ ಹಾಗೂ ಮೆಕ್ಸಿಕೊದ 16 ಕ್ರೀಡಾಂಗಣಗಳಲ್ಲಿ ಫಿಾ ಮಹಾ ಸಮರ ನಡೆಯಲಿದ್ದು, ನಾಕೌಟ್‌ ಹಂತ ಮಾದರಿಯಲ್ಲಿ ನಡೆಯುವ 104 ಪಂದ್ಯಗಳಲ್ಲಿ 1248 ಆಟಗಾರರು ಪಾಲ್ಗೊಂಡು ತಮ ದೇಶಕ್ಕೆ ಟ್ರೋಫಿ ಗೆದ್ದುಕೊಡುವ ಹುಮಸ್ಸಿನಲ್ಲಿದ್ದಾರೆ.
ಟ್ಬಾಲ್‌ ದಿಗ್ಗಜರಾದ ಅರ್ಜೆಂಟೀನಾದ ಲಿಯೋನೆಲ್‌ ಮೆಸ್ಸಿ, ಪೋರ್ಚುಗಲ್‌ ನ ಕ್ರಿಸ್ಟಿಯಾನೋ ರೊನಾಲ್ಡೋಗೆ ಬಹುತೇಕ ಇದು ಕೊನೆಯ ಫಿಾ ವಿಶ್ವಕಪ್‌ ಟೂರ್ನಿ ಆಗಿರುವುದರಿಂದ ಜಾಗತಿಕ ಮಟ್ಟದಲ್ಲಿರುವ ಇವರ ಅಭಿಮಾನಿಗಳು ಈ ದಿಗ್ಗಜರು ನಿರ್ಮಿಸಲಿರುವ ದಾಖಲೆಗಳ ಕಡೆಗೂ ಗಮನ ಹರಿಸಲಿದ್ದಾರೆ.

2026ರಲ್ಲಿ ನಿರ್ಮಾಣಗೊಳ್ಳುವ ಪ್ರಮುಖ ದಾಖಲೆಗಳು:

  1. ಅತಿ ಹೆಚ್ಚು ಗೆಲುವು:
    ಫಿಫಾ ವಿಶ್ವಕಪ್‌ ಇತಿಹಾಸದಲ್ಲಿ ಜರ್ಮನಿಯ ಮಿರೋಸ್ಲಾವ್‌ ಕ್ಲೋಸ್‌‍ (17) ಅತಿ ಹೆಚ್ಚು ಗೆಲುವು ಸಾಧಿಸಿದ ಆಟಗಾರ ಎಂಬ ದಾಖಲೆ ಹೊಂದಿದ್ದಾರೆ. ಪ್ರಸ್ತುತ ಫಿಾ ವಿಶ್ವಕಪ್‌ ಟೂರ್ನಿಯಲ್ಲಿ ಅರ್ಜೇಂಟೀನಾದ ಮಾಂತ್ರಿಕ ಲಿಯೋನೆಲ್‌ ಮೆಸ್ಸಿ (16) ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಆ ದಾಖಲೆ ಮುರಿಯುವ ಅವಕಾಶ ಹೊಂದಿ ದ್ದಾರೆ.
  2. ಗೋಲು ಬಾರಿಸುವ ಅತಿ ಹಿರಿಯ:
    ಟ್ಬಾಲ್‌ ಜಗತ್ತು ಕಂಡ ಮತ್ತೊಬ್ಬ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊ (41) ಫಿಾ ವಿಶ್ವಕಪ್‌ ಟೂರ್ನಿಯಲ್ಲಿ ಗೋಲು ಬಾರಿಸಿದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆ ಬರೆಯುವ ಹೊಸ್ತಿಲಲ್ಲಿ ನಿಂತಿದ್ದಾರೆ.
  3. ಒಂದೇ ಆವೃತ್ತಿಯಲ್ಲಿ ಹೆಚ್ಚು ಗೋಲು:
    ಫಿಫಾ ವಿಶ್ವಕಪ್‌ ಟೂರ್ನಿಯ ಒಂದೇ ಆವೃತ್ತಿಯಲ್ಲಿ ಗರಿಷ್ಠ ಗೋಲು ಬಾರಿಸಿದ ಸಾಧನೆ ಜರ್ಮನಿಯ ಮಿರೋಸ್ಲಾವ್‌ ಕ್ಲೋಸ್‌‍ (16) ಹೊಂದಿದ್ದು, ಈ ದಾಖಲೆ ಮುರಿಯುವತ್ತ ಲಿಯೋನೆಲ್‌ ಮೆಸ್ಸಿ ಹಾಗೂ ಕೈಲಿಯನ್‌ ಎಂಬಾಪೆ ಚಿತ್ತ ಹರಿಸಿದ್ದಾರೆ.
  4. ಹ್ಯಾಟ್ರಿಕ್‌ ಗೋಲು:
    ಫಿಾ ವಿಶ್ವಕಪ್‌ ಇತಿಹಾಸದಲ್ಲಿ ಎರಡು ಬಾರಿ ಹ್ಯಾಟ್ರಿಕ್‌ ಗೋಲು ಬಾರಿಸಿದ ಏಕೈಕ ಆಟಗಾರ ಎಂಬ ದಾಖಲೆ 1998 ರಿಂದಲೂ ಗೇಬ್ರಿಯೆಲ್‌ ಬಟಿಸ್ತುಟಾ ಹೆಸರಿನಲ್ಲಿದೆ. 28 ವರ್ಷಗಳ ನಂತರ ಈ ದಾಖಲೆ ಮುರಿಯುವ ಸೂಚನೆಯನ್ನು ಹ್ಯಾರಿ ಕೇನ್‌, ಕೈಲಿಯನ್‌ ಎಂಬಾಪೆ , ಕ್ರಿಸ್ಟಿಯಾನೋ ರೊನಾಲ್ಡೊ ಹಾಗೂ ಗೊನ್ಸಾಲೊ ರಾಮೋಸ್‌‍ ರಂತಹ ಆಟಗಾರರು ನೀಡಿದ್ದಾರೆ.
  5. ಮೂರು ಬಾರಿ ಫೈನಲ್ಸ್ :
    ಕಾಲ್ಚೆಂಡಿನ ಆಟದ ಸರದಾರರಾದ ಲಿಯೋನೆಲ್‌ ಮೆಸ್ಸಿ, ಕೈಲಿಯನ್‌ ಎಂಬಾಪೆ ಹಾಗೂ ಉಸಾನೆ ಡೆಂಬೆಲೆ ಅವರು ಮೂರು ಬಾರಿ ಫಿಫಾ ವಿಶ್ವಕಪ್‌ ಫೈನಲ್ಸ್ ಆಡಿದ ಆಟಗಾರ ಎಂಬ ದಾಖಲೆ ನಿರ್ಮಿಸುವ ಅವಕಾಶ ಹೊಂದಿದ್ದಾರೆ.
  6. ಅತಿ ಹೆಚ್ಚು ವಿಶ್ವಕಪ್‌:
    1930ರಲ್ಲಿ ಆರಂಭಗೊಂಡ ವಿಶ್ವಕಪ್‌ ಕಾಲ್ಚೆಂಡಿನ ಸಾವ್ರಾಜ್ಯದಲ್ಲಿ ಈಗಾಗಲೇ ಹಲವು ದಾಖಲೆ ಹೊಂದಿರುವ ಮೆಸ್ಸಿ, ರೊನಾಲ್ಡೋ ಹಾಗೂ ಗಿಲ್ಲೆರ್ಮೊ ಒಚೋಮಾಗೆ ಇದು 6ನೇ ಫಿಾ ವಿಶ್ವಕಪ್‌ ಆಗಿದ್ದು, ಅತಿ ಹೆಚ್ಚು ವಿಶ್ವಕಪ್‌ ಟೂರ್ನಿಯಲ್ಲಿ ಕಾಣಿಸಿಕೊಂಡ ಆಟಗಾರರ ಎಂಬ ದಾಖಲೆಯತ್ತ ಗಮನಹರಿಸಿದ್ದಾರೆ.

7.ಎಲ್ಲಾ ವಿಶ್ವಕಪ್‌ ಟೂರ್ನಿಯಲ್ಲಿ ಗೋಲ್‌:
ಪೋರ್ಚುಗಲ್‌ನ ಕ್ರಿಸ್ಟಿಯಾನೋ ರೊನಾಲ್ಡೊ ತಾವಾಡಿರುವ 5 ವಿಶ್ವಕಪ್‌ ಟೂರ್ನಿಯಲ್ಲೂ ಗೋಲು ಬಾರಿಸುವ ಮೂಲಕ ಈ ಸಾಧನೆ ಮಾಡಿದ ಏಕೈಕ ಆಟಗಾರ ಎಂಬ ಮೈಲುಗಲ್ಲು ಸಾಧಿಸಿದ್ದು, 6ನೇ ವಿಶ್ವಕಪ್‌ ಟೂರ್ನಿಯಲ್ಲೂ ಗೋಲು ಬಾರಿಸಿ ದಾಖಲೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಹೊರಟಿದ್ದಾರೆ.

2026ರ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ 48 ತಂಡಗಳು 104 ಪಂದ್ಯಗಳಲ್ಲಿ ಸಮರ ಸಾರಲಿರುವುದು ಕೂಡ ಫಿಾ ದಾಖಲೆ ಪುಸ್ತಕ ಸೇರಲಿದೆ. ಈ ಹಿಂದೆ 32 ತಂಡಗಳು 64 ಪಂದ್ಯಗಳನ್ನು ಆಡಿದ್ದವು. ಆದರೆ ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ದಿಗ್ಗಜರಾದ ರೊನಾಲ್ಡೊ, ಮೆಸ್ಸಿರನ್ನೇ ಹಿಂದಿಕ್ಕಿ ತಾವಾಡುವ ಚೊಚ್ಚಲ ವಿಶ್ವಕಪ್‌ ಟೂರ್ನಿಯಲ್ಲೇ ದಾಖಲೆ ನಿರ್ಮಿಸಲು ಲ್ಯಾಮಿನೆ ಯಾಮೆಲ್‌‍, ಎಂಡ್ರಿಕ್‌, ರೊರ್ಡಿಗೊ ಮೊರಾ, ಗಾವಿ, ನಿಕೋಾಝ್‌, ಜೊರೆಲ್‌ ಹಾಟೊ ರಂತಹ ಕೆಲವು ಯುವ ಪ್ರತಿಭೆಗಳು ಹೊರಟಿದ್ದಾರೆ.

ನಿಜವಾಗುತ್ತಾ ಎಐ ಭವಿಷ್ಯ?
ಫಿಫಾ ವಿಶ್ವಕಪ್‌ ಟೂರ್ನಿ ಆರಂಭಕ್ಕೂ ಮುನ್ನವೇ ಅರ್ಜೆಂಟೀನಾ ಅಥವಾ ಫ್ರಾನ್ಸ್ ನಡುವೆಫೈನಲ್ ಪಂದ್ಯ ನಡೆಯಲಿದೆ ಎಂದು ಎಐ ಭವಿಷ್ಯ ನುಡಿದಿದೆ. 2022ರ ಫಿಾ ವಿಶ್ವಕಪ್‌ ಟೂರ್ನಿಯ ಫೈನಲ್ ಪಂದ್ಯದಲ್ಲಿ ಲಿಯೋನೆಲ್‌ ಮೆಸ್ಸಿ ಪ್ರತಿನಿಧಿಸಿದ್ದ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ ನಲ್ಲಿ (4-2) ಕೈಲಿಯನ್‌ ಎಂಬಾಪೆಯ ಫ್ರಾನ್ಸ್ ತಂಡವನ್ನು ಮಣಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಪ್ರಸಕ್ತ ಫಿಾ ವಿಶ್ವಕಪ್‌ ಟೂರ್ನಿಯ ಫೈನಲ್ ಪಂದ್ಯವು ಈ ಎರಡು ತಂಡಗಳ ನಡುವೆಯೇ ನಡೆಯುವ ಹೆಚ್ಚಿನ ಸಾಧ್ಯತೆಗಳಿವೆ ಎಂದು ಎಐ ವಿಶ್ಲೇಷಿಸಿದೆ.
ಜುಲೈ 19ರಂದು ನ್ಯೂಜೆರ್ಸಿಯಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಹಾಗೂ ್ರ್ಸಾ್‌‍ ಶೇ.21 ರಷ್ಟು ಆಡುವ ಸಾಧ್ಯತೆ ಹೊಂದಿದ್ದರೆ, ಸ್ಪೇನ್‌ (20%), ಬ್ರೆಜಿಲ್‌ ಹಾಗೂ ಪೋರ್ಚುಗಲ್‌ ಶೇ.19, ಇಂಗ್ಲೆಂಡ್‌ ಶೇ.12ರಷ್ಟು ಆಡುವ ಸಾಧ್ಯತೆ ಹೊಂದಿದೆ ಎಂದು ಎಐ ಭವಿಷ್ಯ ನುಡಿದಿದೆ.

ಬಹುಮಾನಗಳ ಸುರಿಮಳೆ
*ಒಟ್ಟು ಬಹುಮಾನ: 655 ಮಿಲಿಯನ್‌ ಡಾಲರ್‌
*ಚಾಂಪಿಯನ್‌: 50 ಮಿಲಿಯನ್‌ ಡಾಲರ್‌
*ರನ್ನರ್ಸ್‌ಅಪ್‌:33 ಮಿಲಿಯನ್‌ ಡಾಲರ್‌
*3ನೇ ಸ್ಥಾನ:29ಮಿಲಿಯನ್‌ ಡಾಲರ್‌
*4ನೇ ಸ್ಥಾನ: 27 ಮಿಲಿಯನ್‌ ಡಾಲರ್‌
*ಕ್ವಾರ್ಟರ್‌ ಫೈನಲಿಸ್ಟ್‌ಗಳು (5-8ನೇ ಸ್ಥಾನ):19ಮಿಲಿಯನ್‌ ಡಾಲರ್‌
*ಪ್ರತಿ ರೌಂಡ್‌ ಆಫ್‌ 16 (9-16ನೇ ಸ್ಥಾನ): 15 ಮಿಲಿಯನ್‌ ಡಾಲರ್‌
*ರೌಂಡ್‌ 32 (17-32ನೇ ಸ್ಥಾನ): ತಲಾ 11ಮಿಲಿಯನ್‌ ಡಾಲರ್‌.

ಡಿಡಿ ಚಾನೆಲ್‌ ನಲ್ಲೂ ಪ್ರಸಾರ
ಈ ಬಾರಿಯ ಫಿಫಾ ವಿಶ್ವಕಪ್‌ ಟೂರ್ನಿಯನ್ನು ಭಾರತದಲ್ಲಿ ಪ್ರಸಾರ ಮಾಡುವ ಹಕ್ಕನ್ನು ಜೀ 5 ಆ್ಯಪ್‌ (ಚಂದಾದಾರರೇ ಮಾತ್ರ) ಹೊಂದಿದೆ. ಅಲ್ಲದೆ ಕೆಲವು ಪಂದ್ಯಗಳನ್ನು ಪ್ರೇಕ್ಷಕರು ಡಿಡಿ ಚಾನೆಲ್‌ ಗಳಲ್ಲೂ ಉಚಿತವಾಗಿ ವೀಕ್ಷಿಸಬಹುದು.
ಭಾರತೀಯ ಕಾಲಮಾನ ಜೂನ್‌ 12 ( ಶುಕ್ರವಾರ) 12.30(ಎ.ಎಂ.) ಕ್ಕೆ ದಕ್ಷಿಣ ಆಫ್ರಿಕಾ ಹಾಗೂ ಮೆಕ್ಸಿಕೊ ನಡುವಿನ ಉದ್ಘಾಟನಾ ಪಂದ್ಯವನ್ನು ಪ್ರಸಾರ ಮಾಡಲಿದೆ.
ಅಲ್ಲದೆ ಜುಲೈ 9 ರಿಂದ11ರವರೆಗಿನ ಕ್ವಾರ್ಟರ್‌ ಫೈನಲ್‌ ಪಂದ್ಯಗಳು, ಜುಲೈ 14, 15 ಹಾಗೂ 19 ರಂದು ನಡೆಯಲಿರುವ ಸೆಮಿಫೈನಲ್‌ ಹಾಗೂ ಫೈನಲ್‌ ಪಂದ್ಯಗಳು ಡಿಡಿ ಚಾನೆಲ್‌ ನಲ್ಲಿ ಪ್ರಸಾರವಾಗಲಿವೆ.

RELATED ARTICLES

Latest News