Homeಬೆಂಗಳೂರುಬೆಂಗಳೂರಲ್ಲಿ ನಕಲಿ ಅಂಕಪಟ್ಟಿ ತಯಾರಿಕಾ ಜಾಲ ಬಯಲಿಗೆಳೆದ ಸಿಸಿಬಿ

ಬೆಂಗಳೂರಲ್ಲಿ ನಕಲಿ ಅಂಕಪಟ್ಟಿ ತಯಾರಿಕಾ ಜಾಲ ಬಯಲಿಗೆಳೆದ ಸಿಸಿಬಿ

CCB unearths fake marksheet production network in Bengaluru

ಬೆಂಗಳೂರು,ಜೂ.11- ನಕಲಿ ಅಂಕಪಟ್ಟಿಗಳನ್ನು ತಯಾರಿಸುತ್ತಿದ್ದ ಬೃಹತ್‌ ಜಾಲವನ್ನು ಸಿಸಿಬಿ ಪೊಲೀಸರು ಬಯಲಿಗೆಳೆದಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬಾತನನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಇನ್ನಿಬ್ಬರಿಗಾಗಿ ಶೋಧ ಮುಂದುವರೆಸಿದ್ದಾರೆ.

ಕೋರಮಂಗಲದಲ್ಲಿ ಡಿಜಿಟಲ್‌ ಡಿಸ್ಪೆನ್ಸ್ ಎಜುಕೇಶನ್‌ ಮಿಷನ್‌ ಎಂಬ ಕಚೇರಿ ತೆರೆದು ಎಸ್‌‍ಎಸ್‌‍ಎಲ್‌ಸಿ, ಪಿಯುಸಿ ಹಾಗೂ ಪದವಿಗಳ ನಕಲಿ ಅಂಕಪಟ್ಟಿಗಳನ್ನು ಸಿದ್ದಪಡಿಸಿ 30 ರಿಂದ 50 ಸಾವಿರ ರೂ.ಗೆ ಮಾರಾಟ ಮಾಡಿ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುತ್ತಿದ್ದುದ್ದಲ್ಲದೆ ಹೆಚ್ಚಿನ ಹಣ ಗಳಿಸುತ್ತಿದ್ದರು.

ಈ ಕಚೇರಿಯಿಂದಲೇ ವಿದ್ಯಾರ್ಥಿಗಳಿಗೆ ಕರೆ ಮಾಡುತ್ತಿದ್ದ ವಂಚಕರು ವಿವಿಧ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಕೊಡಿಸುವುದಾಗಿ ಆಮಿಷವೊಡ್ಡುತ್ತಿದ್ದರು. ಅಲ್ಲದೇ ಕಾಲೇಜಿಗೆ ಹೋಗದಿದ್ದರೂ ಪದವಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವುದಾಗಿ ವಿದ್ಯಾರ್ಥಿಗಳನ್ನು ನಂಬಿಸಿ ಹಣ ಪಡೆದು ನಕಲಿ ಅಂಕಪಟ್ಟಿಗಳನ್ನು ಸಿದ್ದಪಡಿಸಿ ಮನೆ ಬಾಗಿಲಿಗೆ ಕೊರಿಯರ್‌ ಮೂಲಕ ಕಳುಹಿಸಲಾಗುತ್ತಿತ್ತು.

ನಕಲಿ ಅಂಕಪಟ್ಟಿ ಜಾಲದ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಈ ಆಧಾರದ ಮೇಲೆ ಕೋರಮಂಗಲದ ಕಚೇರಿ ಮೇಲೆ ಹಠಾತ್‌ ದಾಳಿ ಮಾಡಿ ಕಚೇರಿಯನ್ನೆಲ್ಲಾ ಜಾಲಾಡಿ 50ಕ್ಕೂ
ಅಧಿಕ ನಕಲಿ ಅಂಕಪಟ್ಟಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಸಿಸಿಬಿ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಮುಂದುವರೆಸಿದ್ದಾರೆ.

RELATED ARTICLES

Latest News