Homeರಾಜ್ಯ2028ರಲ್ಲೂ ಡಿಕೆಶಿ ಸಿಎಂ ಆದರೆ ತಪ್ಪಿಲ್ಲ : ಸತೀಶ್‌ ಜಾರಕಿಹೊಳಿ

2028ರಲ್ಲೂ ಡಿಕೆಶಿ ಸಿಎಂ ಆದರೆ ತಪ್ಪಿಲ್ಲ : ಸತೀಶ್‌ ಜಾರಕಿಹೊಳಿ

There is nothing wrong with DKSH being the CM in 2028 too: Satish Jarkiholi

ಬೆಂಗಳೂರು, ಜೂ. 11- ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಮುಂದಿನ ವಿಧಾನಸಭೆ ಚುನಾವಣೆ ನಡೆದು ಕಾಂಗ್ರೆಸ್‌‍ ಪಕ್ಷ ಅಧಿಕಾರಕ್ಕೆ ಬಂದರೆ, ಡಿ.ಕೆ.ಶಿವಕುಮಾರ್‌ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದರಲ್ಲಿ ತಪ್ಪಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲಸ ಮಾಡಿದವರಿಗೆ ಕೂಲಿ ಸಿಗಬೇಕು ಎಂಬುದಕ್ಕೆ ನನ್ನ ಸಹಮತ ಇದೆ. 2028ರ ವಿಧಾನಸಭೆ ಚುನಾವಣೆಗೆ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ತಯಾರಿ ನಡೆಸುವುದಾಗಿ ನಾವೆಲ್ಲರೂ ಈಗಾಗಲೇ ಹೇಳಿದ್ದೇವೆ ಎಂದರು.ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗದೇ ಇರುವುದಕ್ಕೆ ತಮಗೆ ಯಾವುದೇ ಬೇಸರವಿಲ್ಲ. ಹರಿಪ್ರಸಾದ್‌ ಅವರಿಗೆ ಈಗಾಗಲೇ ಹೈಕಮಾಂಡ್‌ ಜವಾಬ್ದಾರಿ ನೀಡಿದೆ. ಅವರಿಗೆ ಸುದೀರ್ಘ ಪಕ್ಷ ಸಂಘಟನೆಯ ಅನುಭವ ಇದೆ.

ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವುದಾಗಿ ಹೇಳುತ್ತಿದ್ದಾರೆ, ಸಂತೋಷ. ಇದಕ್ಕೆ ನನ್ನ ಬೆಂಬಲವಿದೆ ಎಂದಿದ್ದಾರೆ.ಮುಂದಿನ ಚುನಾವಣೆಯಲ್ಲೇ ಮುಖ್ಯಮಂತ್ರಿಯಾಗಬೇಕೆಂಬ ಆತುರತೆ ತಮಗಿಲ್ಲ, ಇನ್ನೂ ವಯಸ್ಸು ಇದೆ. ಹೈಕಮಾಂಡ್‌ ಡಿ.ಕೆ.ಶಿವಕುಮಾರ್‌ ಅವರಿಗೆ ಅವಕಾಶ ನೀಡಿದೆ. ಅವರು ಯಶಸ್ವಿಯಾಗಲಿ ಎಂದು ಹೇಳಿದರು.

ಹೊಸದಾಗಿ ಇಲಾಖೆಗಳು ಖಾತೆ ನಿರ್ವಹಣೆ ಮಾಡುವವರು ಟೇಕಾಫ್‌ ಆಗಲು 6 ತಿಂಗಳ ಸಮಯಬೇಕಿದೆ. ಗೃಹಲಕ್ಷ್ಮಿ ಯೋಜನೆಯಲ್ಲಿ ದುರುಪಯೋಗಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ. 3 ಲಕ್ಷ ರೂ. ಕೊಟ್ಟು ವಿಮಾನದಲ್ಲಿ ಪ್ರಯಾಣಿಸುವವರಿಗೆ ಗೃಹಲಕ್ಷ್ಮಿ ಸೌಲಭ್ಯ ಬೇಕಿಲ್ಲ, ಜಿಎಸ್‌‍ಟಿ ಮತ್ತು ಆದಾಯ ತೆರಿಗೆ ಪಾವತಿಸುವವರಿಗೂ ಸೌಲಭ್ಯ ದೊರೆಯುತ್ತಿದ್ದರೆ ಅದನ್ನು ಪರಿಷ್ಕರಣೆ ಮಾಡುವುದು ಅನಿವಾರ್ಯ ಎಂದರು. ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು. ನಂತರ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಚರ್ಚೆಯಾಗಲಿ ಎಂದು ಹೇಳಿದರು.

ಖಾತೆ ಹಂಚಿಕೆ ಕುರಿತಂತೆ ರಾಮಲಿಂಗಾರೆಡ್ಡಿ ಅವರಿಗಿದ್ದ ಅಸಮಾಧಾನವನ್ನು ಈಗಾಗಲೇ ಬಗೆಹರಿಸಲಾಗಿದೆ. ಅದೇ ರೀತಿ ಸಚಿವ ಕೃಷ್ಣಭೈರೇಗೌಡ ಅವರಲ್ಲೂ ಅಸಮಾಧಾನಗಳಿದ್ದರೆ, ಪಕ್ಷ ಮತ್ತು ಸರ್ಕಾರದ ಮುಖಂಡರು ಬಗೆ ಹರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಮಗೆ ಕ್ರೀಡಾ ಇಲಾಖೆಯ ಮೇಲೆ ಹೆಚ್ಚಿನ ಆಸಕ್ತಿಯಿತ್ತು. ಧರ್ಮಸಿಂಗ್‌ ಸಂಪುಟದಲ್ಲಿ ಸಚಿವನಾಗಿದ್ದಾಗ ಕ್ರೀಡಾ ಇಲಾಖೆ ಖಾತೆ ಒಂದನ್ನೇ ಕೊಡುವಂತೆ ಮನವಿ ಮಾಡಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ಈಗಲೂ ತಾವು ಕ್ರೀಡಾ ಇಲಾಖೆಗಾಗಿ ಬೇಡಿಕೆ ಇಟ್ಟಿದ್ದಾಗಿ ತಿಳಿಸಿದರು.
ಆದರೆ ಉಪ ಮುಖ್ಯಮಂತ್ರಿ ಪರಮೇಶ್ವರ್‌ ಅವರಿಗೆ ಕ್ರೀಡಾ ಇಲಾಖೆ ಖಾತೆ ಕೊಟ್ಟಿರುವುದರಿಂದ ಪದೇ ಪದೇ ಅದೇ ವಿಚಾರ ಕೆಣಕುವುದರಲ್ಲಿ ಅರ್ಥವಿಲ್ಲ ಎಂದರು.

RELATED ARTICLES

Latest News