Homeಬೆಂಗಳೂರುಬೆಂಗಳೂರು : ಶೀಲ ಶಂಕಿಸಿ ಪ್ರೇಯಸಿಯ ಕತ್ತು ಕೊಯ್ದು ಕೊಂದ ಬಾಯ್‌ಫ್ರೆಂಡ್

ಬೆಂಗಳೂರು : ಶೀಲ ಶಂಕಿಸಿ ಪ್ರೇಯಸಿಯ ಕತ್ತು ಕೊಯ್ದು ಕೊಂದ ಬಾಯ್‌ಫ್ರೆಂಡ್

Bengaluru: A young man slits the throat of his girlfriend,

ಬೆಂಗಳೂರು, ಜೂ.14- ಶೀಲ ಶಂಕಿಸಿ ಸಿಕ್ಕಿಂ ಮೂಲದ ಯುವತಿಯನ್ನು ಗೆಳೆಯನ್ನೇ ಚಾಕುವಿನಿಂದ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ದೊಡ್ಡಕನಹಳ್ಳಿ ಪ್ರದೇಶದಲ್ಲಿ ನಡೆದಿದೆ.

ಸಲೂನ್‌ವೊಂದರಲ್ಲಿ ಸ್ವಾಗತಕಾರಣಿಯಾಗಿ ಕೆಲಸ ಮಾಡುತ್ತಿದ್ದ ಅತಿ ಹಂಗಾ ಸುಬ್ಬಾ(22) ಕೊಲೆಯಾದ ಯುವತಿ. ಡಾರ್ಜಿಲಿಂಗ್‌ ಮೂಲದ ಪುರ್ಬಾ ಲೆಪ್ಚಾ ಎಂದು ಗುರುತಿಸಲಾದ ಆರೋಪಿ ಹೋಟೆಲ್‌ನಲ್ಲಿ ವೇಟರ್‌ ಆಗಿ ಕೆಲಸ ಮಾಡುತ್ತಿದ್ದ.

ದೊಡ್ಡಕನಹಳ್ಳಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಈಕೆಯನ್ನು ಲೆಪ್ಚಾ ಚಾಕುವಿನಿಂದ ಕತ್ತು ಕೊಯ್ದು ಭೀಕರವಾಗಿ ಕೊಲೆಗೈದಿದ್ದಾನೆ. ಲಿವಿಂಗ್‌ ಟುಗೆದರ್‌ನಲ್ಲಿ ಇದ್ದ ಇವರು ಒಂದು ತಿಂಗಳ ಹಿಂದೆ ಬೆಂಗಳೂರಿಗೆ ಬಂದು ದೊಡ್ಡಕನಹಳ್ಳಿಯಲ್ಲಿ ಒಟ್ಟಿಗೆ ವಾಸವಿದ್ದರು.

ಪ್ರಾಥಮಿಕ ತನಿಖೆಯ ಪ್ರಕಾರ, ಯುವತಿಯು ಇನ್ನೊಬ್ಬ ಸ್ನೇಹಿತನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಲೆಪ್ಚಾ ಅನುಮಾನಿಸಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿತ್ತು.

ಜಗಳ ವಿಕೋಪಕಕ್ಕೆ ತಿರುಗಿ ಲೆಪ್ಚಾ, ಅಡುಗೆ ಮನೆಯಲ್ಲಿದ್ದ ಚಾಕುವನ್ನು ತಂದು ಸುಬ್ಬಾಳ ಮೇಲೆ ಹಲ್ಲೆ ಮಾಡಿ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಪ್ರಕರಣ ಸಂಬಂಧ ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

RELATED ARTICLES

Latest News