Homeಅಂತಾರಾಷ್ಟ್ರೀಯಜಿ 7 ಶೃಂಗಸಭೆಯಲ್ಲಿ ಮುಖಾಮುಖಿಯಾಗಲಿದ್ದಾರೆ ಟ್ರಂಪ್‌-ಮೋದಿ

ಜಿ 7 ಶೃಂಗಸಭೆಯಲ್ಲಿ ಮುಖಾಮುಖಿಯಾಗಲಿದ್ದಾರೆ ಟ್ರಂಪ್‌-ಮೋದಿ

Trump-Modi to meet at G7 summit

ಫ್ರಾನ್ಸ್ , ಜೂ. 16- ಜಿ 7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಫ್ರಾನ್ಸ್ ಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆಗಳಿವೆ. ಈ ಇಬ್ಬರು ಮಹಾನ್‌ ನಾಯಕರ ದ್ವಿಪಕ್ಷೀಯ ಸಭೆಯ ಮೇಲೆ ಇದೀಗ ಜಗತ್ತಿನ ಕಣ್ಣು ನೆಟ್ಟಿದೆ.

ಈ ಸಭೆಯಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದ, ಸುಂಕಗಳು ಮತ್ತು ಹಾರ್ಮುಜ್‌ ಜಲಸಂಧಿಯ ಇರಾನ್‌ ಬಿಕ್ಕಟ್ಟಿನ ಕುರಿತು ನಿರ್ಣಾಯಕ ಚರ್ಚೆಗಳು ನಡೆಯಲಿವೆ.
ಫ್ರಾನ್‌್ಸ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಔಪಚಾರಿಕವಾಗಿ ಸ್ವಾಗತಿಸಲಿದ್ದಾರೆ. ಭಾರತವು ಜಿ7 ಒಕ್ಕೂಟದ ಖಾಯಂ ಸದಸ್ಯ ರಾಷ್ಟ್ರವಲ್ಲದಿದ್ದರೂ, ಜಾಗತಿಕ ನಿರ್ಧಾರಗಳಲ್ಲಿ ಭಾರತಕ್ಕಿರುವ ಪ್ರಭಾವದಿಂದಾಗಿ ಸತತ 7ನೇ ಬಾರಿಗೆ ಪ್ರಧಾನಿ ಮೋದಿ ಈ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.

ಹೊಸ ಪಾಲುದಾರಿಕೆಗಳನ್ನು ರೂಪಿಸುವುದು ಮತ್ತು ಅಂತಾರಾಷ್ಟ್ರೀಯ ಒಗ್ಗಟ್ಟಿನ ಪುನರ್ನಿರ್ಮಾಣ ಎಂಬ ವಿಷಯದ ಕಾರ್ಯಕಾರಿ ಸಭೆಯಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ.
ಡೊನಾಲ್‌್ಡ ಟ್ರಂಪ್‌ ಅವರು ಮತ್ತೆ ಶ್ವೇತಭವನಕ್ಕೆ ಮರಳಿದ ನಂತರ ಇಬ್ಬರು ನಾಯಕರ ನಡುವೆ ನಡೆಯುತ್ತಿರುವ ಮೊದಲ ಮುಖಾಮುಖಿ ಸಭೆ ಇದಾಗಿದೆ.

ಇತ್ತೀಚಿನ ತಿಂಗಳುಗಳಲ್ಲಿ ಭಾರತ-ಅಮೆರಿಕ ನಡುವೆ ವ್ಯಾಪಾರ ಸುಂಕಗಳು ಹಾಗೂ ರಷ್ಯಾದೊಂದಿಗಿನ ಭಾರತದ ಇಂಧನ ಸಂಬಂಧಗಳ ಕಾರಣದಿಂದ ಕೆಲವು ಭಿನ್ನಾಭಿಪ್ರಾಯಗಳು ಮೂಡಿದ್ದವು. ಈ ಹಿನ್ನೆಲೆಯಲ್ಲಿ, ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸುವ ನಿಟ್ಟಿನಲ್ಲಿ ಪ್ರಸ್ತಾವಿತ ಭಾರತ-ಯುಎಸ್‌‍ ವ್ಯಾಪಾರ ಒಪ್ಪಂದದ ಬಗ್ಗೆ ಇಬ್ಬರೂ ನಾಯಕರು ಸುದೀರ್ಘ ಸಮಾಲೋಚನೆ ನಡೆಸಲಿದ್ದಾರೆ.

ಕಳವಳ ಮೂಡಿಸಿರುವ ಇರಾನ್‌ ಸಂಘರ್ಷ ಜಾಗತಿಕ ಇಂಧನ ಪೂರೈಕೆಯ ಪ್ರಮುಖ ಮಾರ್ಗವಾದ ಹಾರ್ಮುಜ್‌ ಜಲಸಂಧಿಯ ಬಳಿ ಇತ್ತೀಚೆಗೆ ವಾಣಿಜ್ಯ ತೈಲ ಟ್ಯಾಂಕರ್‌ಗಳ ಮೇಲೆ ನಡೆದ ದಾಳಿಗಳು ಮತ್ತು ಅದರಲ್ಲಿ ಭಾರತೀಯ ನಾವಿಕರು ಸಿಲುಕಿರುವ ವಿಷಯದ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ. ಈ ಪ್ರದೇಶದಲ್ಲಿ ಶಾಂತಿ ಸ್ಥಾಪಿಸಲು, ಸಂಯಮ ಮತ್ತು ಸಂವಾದದ ಮೂಲಕ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಲು ವಾಷಿಂಗ್ಟನ್‌ ಜೊತೆ ಭಾರತ ಚರ್ಚಿಸಲಿದೆ.

ಇತರ ವಿಶ್ವ ನಾಯಕರೊಂದಿಗೆ ಸರಣಿ ಸಭೆಗಳು ಅಧ್ಯಕ್ಷ ಟ್ರಂಪ್‌ ಮಾತ್ರವಲ್ಲದೆ, ಪ್ರಧಾನಿ ಮೋದಿ ಅವರು ಶೃಂಗಸಭೆಯ ಹೊರತಾಗಿ ಬ್ರಿಟನ್‌ ಪ್ರಧಾನಿ ಕೀರ್‌ ಸ್ಟಾರ್ಮರ್‌, ಕೆನಡಾದ ಪ್ರಧಾನಿ ಮಾರ್ಕ್‌ ಕಾರ್ನಿ ಮತ್ತು ಯುಎಇ ಅಧ್ಯಕ್ಷ ಶೇಖ್‌ ಮೊಹಮ್ಮದ್‌ ಬಿನ್‌ ಜಾಯೆದ್‌ ಅಲ್‌ ನಹ್ಯಾನ್‌ ಅವರೊಂದಿಗೂ ಪ್ರತ್ಯೇಕ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇವೆಲ್ಲದರ ನಂತರ ಫ್ರೆಂಚ್‌ ಅಧ್ಯಕ್ಷ ಮ್ಯಾಕ್ರನ್‌ ಆಯೋಜಿಸಿರುವ ಭವ್ಯ ಗಾಲಾ ಡಿನ್ನರ್‌ನಲ್ಲಿ ಪ್ರಧಾನಿ ಭಾಗಿಯಾಗಲಿದ್ದಾರೆ.

RELATED ARTICLES

Latest News