Homeಇದೀಗ ಬಂದ ಸುದ್ದಿಪ್ರಕಾಶ್‌ರಾಜ್‌ಗೆ ಜಾಮೀನು ರಹಿತ ವಾರೆಂಟ್‌

ಪ್ರಕಾಶ್‌ರಾಜ್‌ಗೆ ಜಾಮೀನು ರಹಿತ ವಾರೆಂಟ್‌

ಬೆಂಗಳೂರು, ಜೂ.21- ಬಹುಭಾಷಾ ನಟ ಪ್ರಕಾಶ್‌ ರಾಜ್‌ ಅವರು, ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಅಕ್ರಮವಾಗಿ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ, ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಅವರ ವಿರುದ್ಧ ಜಾಮೀನು ರಹಿತ ವಾರೆಂಟ್‌ ಜಾರಿಗೊಳಿಸಿದೆ. 48 ಎಸಿಜೆಎಂ ಕೋರ್ಟ್‌ ನಿಂದ ಆದೇಶ ಹೊರಬಿದ್ದಿದೆ.ಇದರಿಂದಾಗಿ ಬಂಧನದ ಭೀತಿ ಎದುರಾಗಿದೆ. ಸಮನ್‌್ಸ, ವಾರಂಟ್‌ ಯಾವುದಕ್ಕೂ ಹಾಜರಾಗದ ಪ್ರಕಾಶ್‌ ರಾಜ್‌ ವಿರುದ್ಧ, ಈಗ ಕಾನೂನು ಉಲ್ಲಂಘನೆ ಆರೋಪವೂ ಸೇರಿಕೊಂಡಿದೆ. ಈ ಎಲ್ಲ ಕಾರಣಗಳಿಂದ ಇದೀಗ ನಟ ಪ್ರಕಾಶ್‌ ರಾಜ್‌ ಅವರಿಗೆ ಬಂಧನ ಭೀತಿ ಎದುರಾಗಿದೆ. ಪ್ರಕಾಶ್‌ ರಾಜ್‌ ಹೆಸರಿನಲ್ಲಿ ನಾಲ್ಕು ಗುರುತಿನ ಚೀಟಿ ಹೊಂದಿರುವ ಆರೋಪ ಕೇಳಿ ಬಂದಿದೆ.

ಕರ್ನಾಟಕ, ತಮಿಳುನಾಡು , ತೆಲಂಗಾಣ ಸೇರಿ ನಾಲ್ಕು ಕಡೆಗಳಲ್ಲಿ ಗುರುತಿನ ಚೀಟಿಹೊಂದಿರುವ ಆರೋಪ ಕೇಳಿ ಬಂದಿತ್ತು.ವಕೀಲ ದಿಲೀಪ್‌ ಕುಮಾರ್‌ ಅವರಿಂದ ದೂರು ದಾಖಲಾಗಿತ್ತು. ಮೊದಲಿಗೆ ಹಲಸೂರು ಗೇಟ್‌ ಪೊಲೀಸ್‌‍ ಠಾಣೆಯಲ್ಲಿ 2019ರಲ್ಲಿ ದೂರು ದಾಖಲಾಗಿತ್ತು. ನಂತರ ಕ್ರಮ ಕೈಗೊಳ್ಳದ ಕಾರಣ ಪೊಲೀಸ್‌‍ ಆಯುಕ್ತರಿಗೆ ದೂರು ನೀಡಲಾಗಿತ್ತು. ತದನಂತರ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಎಲ್ಲೂ ಕ್ರಮ ಕೈಗೊಳ್ಳದ ಕಾರಣ ಕೋರ್ಟ್‌ ಮೊರೆ ಹೋಗಲಾಗಿತ್ತು.

ಭಾರತದ ಚುನಾವಣಾ ನಿಯಮಗಳ ಪ್ರಕಾರ, ಒಬ್ಬ ನಾಗರಿಕ ದೇಶದ ಯಾವುದೇ ಒಂದು ಕಡೆಯಲ್ಲಿ ಮಾತ್ರ ಮತದಾರರ ಗುರುತಿನ ಚೀಟಿ ಹೊಂದಲು ಅವಕಾಶವಿದೆ. ಆದರೆ, ನಟ ಪ್ರಕಾಶ್‌ ರಾಜ್‌ ಅವರು ನಿಯಮಗಳನ್ನು ಗಾಳಿಗೆ ತೂರಿ ದಕ್ಷಿಣ ಭಾರತದ ನಾಲ್ಕು ಪ್ರಮುಖ ರಾಜ್ಯಗಳಲ್ಲಿ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಇದು ಕಾನೂನಿನ ಪ್ರಕಾರ ಗಂಭೀರ ಅಪರಾಧವಾಗಿದೆ.ಕೋರ್ಟ್‌ ಆದೇಶಕ್ಕೆ ಕ್ಯಾರೆ ಎನ್ನದ ನಟ ನ್ಯಾಯಾಲಯ ನೀಡಿದ ಎರಡು ಸಮನ್‌್ಸಗಳಿಗೂ ಬೆಲೆ ಕೊಡದ ಪ್ರಕಾಶ್‌ ರಾಜ್‌‍, ವಿಚಾರಣೆಗೆ ಗೈರುಹಾಜರಾಗಿದ್ದರು. ನ್ಯಾಯಾಲಯದ ಆದೇಶವನ್ನು ಪದೇ ಪದೇ ನಿರ್ಲಕ್ಷಿಸಿದ ನಟನ ವರ್ತನೆಗೆ ನ್ಯಾಯಾಧೀಶರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕೋರ್ಟ್‌ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಅವರ ವಿರುದ್ಧ ಈಗ ನೇರವಾಗಿ ಜಾಮೀನು ರಹಿತ ವಾರಂಟ್‌ ಹೊರಡಿಸಿದೆ. ಸದಾ ಸಾಮಾಜಿಕ ಮತ್ತು ರಾಜಕೀಯ ವಿಚಾರಗಳಲ್ಲಿ ಸಕ್ರಿಯರಾಗಿರುವ ಪ್ರಕಾಶ್‌ ರಾಜ್‌ ಅವರಿಗೆ ಈ ಅಕ್ರಮ ಮತದಾರರ ಗುರುತಿನ ಚೀಟಿ ಪ್ರಕರಣವು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಏಪ್ರಿಲ್‌‍ನಲ್ಲಿ ರಾಮಾಯಣ ಹಾಗೂ ಶ್ರೀರಾಮಚಂದ್ರ ಹಾಗೆಯೇ ಲಕ್ಷ್ಮಣರ ಕುರಿತು ನೀಡಿದ ಒಂದು ಹೇಳಿಕೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿತ್ತು.

ಪ್ರಕಾಶ್‌ ರಾಜ್‌ ಕೇರಳದಲ್ಲಿ ನಡೆದ ಸಾಹಿತ್ಯ ಉತ್ಸವದಲ್ಲಿ ಭಾಗಿಯಾಗಿದ್ದರು. ಈ ಸಮಯದಲ್ಲಿ ನಟ ಪ್ರಕಾಶ್‌ ರಾಮಾಯಣ ಕುರಿತು ವಿವಾದಾತಕ ಹೇಳಿಕೆ ನೀಡಿದ್ದರು. ಶ್ರೀ ರಾಮ ಉತ್ತರ ಭಾರತದವನು ಹಾಗೆಯೇ ರಾವಣ ದಕ್ಷಿಣ ಭಾರತದ ಆದಿವಾಸಿ ಅಷ್ಟೇ ಅಲ್ಲದೆ ಶ್ರೀರಾಮನು ದಕ್ಷಿಣ ಭಾರತದ ಜಮೀನಿಗೆ ನುಗ್ಗಿ ಹಣ್ಣನ್ನು ಕಿತ್ತು ತಿಂದಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಆ ನಂತರ ಪ್ರಕಾಶ್‌ ರಾಜ್‌ ವಿರುದ್ಧ ಕ್ರಿಮಿನಲ್‌ ಕೇಸ್‌‍ ದಾಖಲಾಗಿತ್ತು.ಈ ಹೇಳಿಕೆಯಲ್ಲಿ ಪ್ರಕಾಶ್‌ ರಾಜ್‌ ರಾಮ ಮತ್ತು ಲಕ್ಷ್ಮಣರನ್ನು ಉತ್ತರ ಭಾರತದಿಂದ ಬಂದವರು ಎಂದು ಪ್ರಕಾಶ್‌ ರಾಜ್‌ ಹೇಳಿದ್ದರು. ಅಷ್ಟೇ ಅಲ್ಲದೆ ರಾಮ ಹಾಗೂ ಲಕ್ಷ್ಮಣರು ದಕ್ಷಿಣ ಭಾರತದ ಒಂದು ಜಮೀನಿಗೆ ಬಂದು , ಅಲ್ಲಿನ ಹಣ್ಣುಗಳನ್ನು ಕದ್ದು ತಿಂದರು ಎಂದಿದ್ದರು. ಇದು ವಿವಾದಕ್ಕೆ ಎಡೆಮಾಡಿ ಕೊಟ್ಟಿತ್ತು. ಪ್ರಕಾಶ್‌ ರಾಜ್‌ ವಿರುದ್ಧ ಕ್ರಿಮಿನಲ್‌ ಕೇಸ್‌‍ ದಾಖಲಾಗಿದೆ ಎಂದು ಹೇಳಲಾಗಿತ್ತು.

RELATED ARTICLES
spot_img

Latest News