Homeರಾಜ್ಯಮಳೆ ಕೊರತೆ-ನೆರೆ ಪರಿಸ್ಥಿತಿ ಮೇಲುಸ್ತುವಾರಿಗೆ ಸಚಿವರನ್ನು ನಿಯೋಜಿಸಿದ ಸಿಎಂ ಡಿಕೆಶಿ

ಮಳೆ ಕೊರತೆ-ನೆರೆ ಪರಿಸ್ಥಿತಿ ಮೇಲುಸ್ತುವಾರಿಗೆ ಸಚಿವರನ್ನು ನಿಯೋಜಿಸಿದ ಸಿಎಂ ಡಿಕೆಶಿ

CM DK Shivakumar deputes ministers to monitor drought-flood situation

ಬೆಂಗಳೂರು, ಜೂ. 25- ಮಳೆ ಕೊರತೆಯಿಂದ ಎದುರಾಗಿರುವ ಬರ ಹಾಗೂ ಕೆಲ ಜಿಲ್ಲೆಗಳಲ್ಲಿನ ನೆರೆ ಪರಿಸ್ಥಿತಿಯ ಮೇಲುಸ್ತುವಾರಿಗೆ ಸಂಪುಟದ ಸಚಿವರನ್ನು ನಿಯೋಜಿಸಲಾಗಿದೆ.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರನ್ನು ತವರು ಜಿಲ್ಲೆ ತುಮಕೂರು ಹಾಗೂ ನೆರೆಯ ಚಿತ್ರದುರ್ಗಾ ಜಿಲ್ಲೆಗೆ ಮೇಲುಸ್ತುವಾರಿಯಾಗಿ ನೇಮಿಸಲಾಗಿದೆ.

ಸಚಿವ ಕೆ.ಎಚ್‌.ಮುನಿಯಪ್ಪ ಅವರನ್ನು ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ವಿಜಯನಗರ ಜಿಲ್ಲೆಗಳಿಗೆ, ರಾಮಲಿಂಗಾ ರೆಡ್ಡಿಯವರನ್ನು ಬೆಂಗಳೂರು ದಕ್ಷಿಣ, ಮಂಡ್ಯ ಜಿಲ್ಲೆಗೆ, ಎಂ.ಬಿ.ಪಾಟೀಲ್‌ ಅವರನ್ನು ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ, ಕೆ.ಜೆ.ಜಾರ್ಜ್‌ ಅವರನ್ನು ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಗಳಿಗೆ ಉಸ್ತುವಾರಿಯನ್ನಾಗಿ ನಿಯೋಜಿಸಲಾಗಿದೆ.

ಸಚಿವ ಕೃಷ್ಣಭೈರೇಗೌಡ ಅವರನ್ನು ಬೆಂಗಳೂರು ನಗರ ಹಾಗೂ ಹಾಸನ ಜಿಲ್ಲೆಗಳಿಗೆ, ಈಶ್ವರ್‌ ಖಂಡ್ರೆ ಅವರನ್ನು ಬೀದರ್‌ ಮತ್ತು ಗದಗ ಜಿಲ್ಲೆಗಳಿಗೆ, ಸತೀಶ್‌ ಜಾರಕಿಹೊಳಿಯವರನ್ನು ಬೆಳಗಾವಿ, ಧಾರವಾಡ, ಯಾದಗಿರಿ ಜಿಲ್ಲೆಗಳಿಗೆ, ಪ್ರಿಯಾಂಕ್‌ ಖರ್ಗೆ ಅವರನ್ನು ಕಲಬುರ್ಗಿ, ರಾಯಚೂರು ಜಿಲ್ಲೆಗಳಿಗೆ, ಶರಣಪ್ರಕಾಶ್‌ ಪಾಟೀಲ್‌ರವರನ್ನು ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಿಗೆ ನಿಯೋಜಿಸಲಾಗಿದೆ.

ಸಚಿವ ಯು.ಟಿ.ಖಾದರ್‌ ಅವರನ್ನು ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಗೆ, ಭೈರತಿ ಸುರೇಶ್‌ ಅವರನ್ನು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ, ಡಾ.ಯತೀಂದ್ರ ಸಿದ್ದರಾಮಯ್ಯಅವರನ್ನು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.

RELATED ARTICLES

Latest News