ಚಿಕ್ಕಮಗಳೂರು, ಜು.4- ನೈಋತ್ಯ ರೈಲ್ವೆಯು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ಚಲಿಸುವ ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸೇವೆಯನ್ನು ವಿಸ್ತರಿಸಲು ನಿರ್ಧರಿಸಿದೆ.
ಈ ಹಿಂದೆ ಜೂ.21 ರವರೆಗೆ ಮಾತ್ರ ಚಲಾಯಿಸಲು ನಿಗದಿಪಡಿಸಲಾಗಿದ್ದ ಈ ರೈಲುಗಳ ಅವಧಿಯನ್ನು ಈಗ ವಿಸ್ತರಿಸಲಾಗಿದ್ದು, ಜುಲೈ ತಿಂಗಳಿನಲ್ಲಿ ತಲಾ ನಾಲ್ಕು ಹೆಚ್ಚುವರಿ ಟ್ರಿಪ್‌ಗಳನ್ನು ಇವು ನಡೆಸಲಿವೆ.
ಇದರ ಅನ್ವಯ, ರೈಲು ಸಂಖ್ಯೆ-07341 ಎಸ್‌ಎಸ್‌ಎಸ್ ಹುಬ್ಬಳ್ಳಿ ಚಿಕ್ಕಮಗಳೂರು ದ್ವಿ-ವಾರದ (ಶನಿವಾರ ಮತ್ತು ಭಾನುವಾರ) ಎಕ್ಸ್ ಪ್ರೆಸ್ ವಿಶೇಷ ರೈಲು ಹಾಗೂ ರೈಲು ಸಂಖ್ಯೆ 07342 ಚಿಕ್ಕಮಗಳೂರು ಎಸ್‌ಎಸ್‌ಎಸ್ ಹುಬ್ಬಳ್ಳಿ ದ್ವಿ-ವಾರದ ಎಕ್ಸ್ ಪ್ರೆಸ್ ವಿಶೇಷ ರೈಲುಗಳು ಇಂದು, ಜು.5, ಜು.11 ಮತ್ತು ಜು.12 ರಂದು ಸಂಚಾರ ನಡೆಸಲಿವೆ.
ಮಲೆನಾಡು ಮತ್ತು ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಈ ಮಹತ್ವದ ನಿರ್ಧಾರ ಕೈಗೊಂಡಿದೆ.
