Homeರಾಷ್ಟ್ರೀಯಪ್ರಧಾನಿ ಮೋದಿ ಇಂಡೋನೇಷ್ಯಾ ಭೇಟಿ ಭಾರೀ ಮಹತ್ವ ಪಡೆದುಕೊಂಡಿದೆ ಏಕೆ..?

ಪ್ರಧಾನಿ ಮೋದಿ ಇಂಡೋನೇಷ್ಯಾ ಭೇಟಿ ಭಾರೀ ಮಹತ್ವ ಪಡೆದುಕೊಂಡಿದೆ ಏಕೆ..?

ನವದೆಹಲಿ,ಜು.8- ಪ್ರಧಾನಿ ನರೇಂದ್ರಮೋದಿ ಅವರ ಇಂಡೋನೇಷ್ಯ ಭೇಟಿ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ಮಹತ್ವ ಪಡೆದುಕೊಂಡಿತ್ತು. ಉಭಯ ರಾಷ್ಟ್ರಗಳ ನಡುವೆ ಇದೇ ಮೊದಲ ಬಾರಿಗೆ ರಕ್ಷಣಾ, ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದು ಕೇವಲ ಪ್ರವಾಸಕ್ಕೆ ಮಾತ್ರ ಸೀಮಿತವಾಗದೇ ಮೋದಿಯವರ ಇಂಡೋನೇಷ್ಯಾ ಭೇಟಿಯ ಹಿಂದೆ ಕೆಲವು ರಾಜತಾಂತ್ರಿಕ ದೂರದೃಷ್ಟಿ ಇದೆ ಎಂದು ವ್ಯಾಖ್ಯಾನಿಸಲಾಗಿದೆ.

ಅದರಲ್ಲೂ ದಕ್ಷಿಣ ಏಷ್ಯಾದಲ್ಲಿ ಚೀನಾ ಬೆಳೆಯುತ್ತಿರುವ ಪ್ರಾಬಲ್ಯವನ್ನು ತಡೆಯಲು ಮತ್ತು ಈ ಪ್ರದೇಶದಲ್ಲಿ ಭಾರತದ ಭೌಗೋಳಿಕ-ರಾಜಕೀಯ ಅಸ್ತಿತ್ವವನ್ನು ಬಲಪಡಿಸಲು ಮೋದಿ ಅವರ ಭೇಟಿ ಅತ್ಯಂತ ಸೂಕ್ಷ್ಮ ಮತ್ತು ದೀರ್ಘಕಾಲೀನ ರಣತಂತ್ರವನ್ನು ಅನುಸರಿಸುತ್ತಿದೆ.

ಭಾರತದ ವಿದೇಶಾಂಗ ನೀತಿಯ ಪ್ರಮುಖ ಭಾಗವಾಗಿರುವ ಆಕ್ಟ್‌ ಈಸ್ಟ್‌ ಪಾಲಿಸಿ, ಆಗ್ನೇಯ ಏಷ್ಯಾದ ರಾಷ್ಟ್ರಗಳೊಂದಿಗೆ (ಇಂಡೋನೇಷ್ಯಾ, ಸಿಂಗಾಪುರ, ಮಲೇಷ್ಯಾ, ವಿಯೆಟ್ನಾಂ) ಕೇವಲ ಆರ್ಥಿಕ ಸಂಬಂಧವನ್ನಷ್ಟೇ ಅಲ್ಲದೆ, ರಕ್ಷಣಾ ಮತ್ತು ತಂತ್ರಜ್ಞಾನ ವಲಯದಲ್ಲಿಯೂ ಆಳವಾದ ಸಹಭಾಗಿತ್ವವನ್ನು ಬೆಳೆಸಿಕೊಳ್ಳುತ್ತಿದೆ.

ಮಲಕ್ಕಾ ಜಲಸಂಧಿ :
ಜಾಗತಿಕ ವ್ಯಾಪಾರದ ಪ್ರಮುಖ ಮಾರ್ಗವಾಗಿರುವ ಮಲಕ್ಕಾ ಜಲಸಂಧಿಯು ಚೀನಾದ ಆರ್ಥಿಕತೆ ಮತ್ತು ಇಂಧನ ಪೂರೈಕೆಗೆ ಜೀವನಾಡಿಯಾಗಿದೆ. ಚೀನಾದ ಸುಮಾರು 80% ಕಚ್ಚಾ ತೈಲ ಮತ್ತು ವಾಣಿಜ್ಯ ಸರಕುಗಳು ಈ ಮಾರ್ಗದ ಮೂಲಕವೇ ಸಾಗುತ್ತವೆ.ಈ ಪ್ರದೇಶದಲ್ಲಿನ ಸಣ್ಣ ಅಡಚಣೆಯೂ ಚೀನಾದ ಇಂಧನ ಭದ್ರತೆಗೆ ದೊಡ್ಡ ಹೊಡೆತ ನೀಡಬಲ್ಲದು. ಇದನ್ನೇ ಮಲಕ್ಕಾ ಡಿಲೆಮಾ ಎಂದು ಕರೆಯಲಾಗುತ್ತದೆ.
ಭಾರತವು ಈ ಭಾಗದಲ್ಲಿ ತನ್ನ ನೌಕಾಪಡೆಯ ಉಪಸ್ಥಿತಿಯನ್ನು ಹೆಚ್ಚಿಸುವ ಮೂಲಕ ಚೀನಾದ ಮೇಲೆ ಪರೋಕ್ಷ ಒತ್ತಡವನ್ನು ಹೇರುತ್ತಿದೆ.ಇಂಡೋನೇಷ್ಯಾದ ಸಬಾಂಗ್‌ ಬಂದರು ಭಾರತದ ರಣತಂತ್ರದ ಕೇಂದ್ರಬಿಂದುವಾಗಿದೆ. ಸಬಾಂಗ್‌ ಬಂದರು ಮಲಕ್ಕಾ ಜಲಸಂಧಿಯ ದ್ವಾರದಲ್ಲಿದೆ ಮತ್ತು ಭಾರತದ ಅಂಡಮಾನ್‌‍-ನಿಕೋಬಾರ್‌ ದ್ವೀಪಗಳಿಗೆ ಅತ್ಯಂತ ಹತ್ತಿರದಲ್ಲಿದೆ.

ಈ ಬಂದರನ್ನು ಅಭಿವೃದ್ಧಿಪಡಿಸುವ ಮೂಲಕ ಭಾರತವು ಈ ಪ್ರಮುಖ ಜಲಮಾರ್ಗವನ್ನು ಮೇಲ್ವಿಚಾರಣೆ ಮಾಡುವ ಸಾಮರ್ಥ್ಯವನ್ನು ಪಡೆಯುತ್ತದೆ. ಇದು ಚೀನಾದ ನೌಕಾಪಡೆಯ ಚಲನವಲನಗಳನ್ನು ಹತ್ತಿರದಿಂದ ಗಮನಿಸಲು ಭಾರತಕ್ಕೆ ಸಹಕಾರಿಯಾಗಿದೆ.ನೆರೆಹೊರೆಯವರೊಂದಿಗೆ ಬಾಂಧವ್ಯವನ್ನು ಚೀನಾವು ಸಾಲದ ಬಲೆಯಲ್ಲಿ ಸಿಲುಕಿಸುವ ಪ್ರಯತ್ನಗಳನ್ನು ಎದುರಿಸಲು, ಭಾರತವು ತನ್ನ ನೆರೆಯ ರಾಷ್ಟ್ರಗಳಿಗೆ (ಶ್ರೀಲಂಕಾ, ಮಾಲ್ಡೀವ್‌್ಸ, ಬಾಂಗ್ಲಾದೇಶ) ಆರ್ಥಿಕ ನೆರವು, ಮೂಲಸೌಕರ್ಯ ಅಭಿವೃದ್ಧಿ ಮತ್ತು ಮಾನವೀಯ ನೆರವನ್ನು ಒದಗಿಸುವ ಮೂಲಕ ಆ ರಾಷ್ಟ್ರಗಳೊಂದಿಗೆ ವಿಶ್ವಾಸಾರ್ಹ ಪಾಲುದಾರನಾಗಿ ಉಳಿಯಲು ಪ್ರಯತ್ನಿಸುತ್ತಿದೆ.

ವಿಯೆಟ್ನಾಂ : ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಆಕ್ರಮಣಕಾರಿ ನೀತಿಯನ್ನು ಎದುರಿಸಲು ವಿಯೆಟ್ನಾಂಗೆ ಮಿಲಿಟರಿ ತರಬೇತಿ ಮತ್ತು ರಕ್ಷಣಾ ಉಪಕರಣಗಳ (ಉದಾ: ಬ್ರಹೋಸ್‌‍ ಕ್ಷಿಪಣಿಗಳು) ಪೂರೈಕೆ.
ಸಿಂಗಾಪುರ ಮತ್ತು ಮಲೇಷ್ಯಾ: ನೌಕಾಪಡೆಯ ಜಂಟಿ ತಾಲೀಮುಗಳು, ಡಿಜಿಟಲ್‌ ಆರ್ಥಿಕತೆ, ಸೆಮಿಕಂಡಕ್ಟರ್‌ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಸಹಭಾಗಿತ್ವ.ಇಂಡೋನೇಷ್ಯಾ: ಕಂಪ್ರೆಹೆನ್ಸಿವ್‌ ಸ್ಟ್ರಾಟೆಜಿಕ್‌ ಪಾಟ್ರ್ನರ್ಶಿಪ್‌ ಮೂಲಕ ರಕ್ಷಣೆ, ಭದ್ರತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಸಹಕಾರ. ಸಮತೋಲಿತ ವಿದೇಶಾಂಗ ನೀತಿಯನ್ನು ಭಾರತವು ಚೀನಾದೊಂದಿಗೆ ಆರ್ಥಿಕ ಸಂಬಂಧಗಳನ್ನು ಸಂಪೂರ್ಣವಾಗಿ ಕಡಿದುಕೊಳ್ಳದೆ, ತನ್ನ ಸ್ಟ್ರಾಟೆಜಿಕ್‌ ಅಟಾನಮಿ ನೀತಿಯನ್ನು ಅನುಸರಿಸುತ್ತಿದೆ.

ಅಂದರೆ ಅನಿವಾರ್ಯವಾದ ಆರ್ಥಿಕ ವಹಿವಾಟುಗಳನ್ನು ಮುಂದುವರಿಸುತ್ತಲೇ, ನಿರ್ಣಾಯಕ ತಾಂತ್ರಿಕ ಮತ್ತು ರಕ್ಷಣಾ ವಲಯಗಳಲ್ಲಿ ಚೀನಾದ ಮೇಲಿನ ಅವಲಂಬನೆಯನ್ನು ತಗ್ಗಿಸುತ್ತಿದೆ.ಪ್ರಧಾನಿ ಮೋದಿಯವರ ಪ್ರಸ್ತುತ ಭೇಟಿಗಳು ಮತ್ತು ಆಗ್ನೇಯ ಏಷ್ಯಾದೊಂದಿಗೆ ಬೆಳೆಯುತ್ತಿರುವ ಆಳವಾದ ಸಂಬಂಧವು, ಆ ಪ್ರದೇಶದಲ್ಲಿ ಚೀನಾದ ಏಕಸ್ವಾಮ್ಯವನ್ನು ಪ್ರಶ್ನಿಸುವ ಭಾರತದ ಸಾಮರ್ಥ್ಯವನ್ನು ಸಾಬೀತುಪಡಿಸುತ್ತದೆ. ಆಕ್ಟ್‌ ಈಸ್ಟ್‌ ಪಾಲಿಸಿ ಕೇವಲ ಘೋಷಣೆಯಾಗಿ ಉಳಿಯದೆ, ಸಬಾಂಗ್‌ ಬಂದರಿನಂತಹ ಕಾರ್ಯತಂತ್ರದ ತಾಣಗಳಲ್ಲಿ ಭಾರತದ ಬಲವರ್ಧನೆಯ ಮೂಲಕ ಒಂದು ವಾಸ್ತವಿಕ ರಣತಂತ್ರವಾಗಿ ಬದಲಾಗಿದೆ.


ದಕ್ಷಿಣ ಏಷ್ಯಾ ರಾಷ್ಟ್ರಗಳೊಂದಿಗಿನ ಪ್ರಮುಖ ರಕ್ಷಣಾ ಸಹಕಾರ ಮ್ಯಾನಾರ್‌:
ಭಾರತವು ಮ್ಯಾನಾರ್‌ಗೆ ಜಲಾಂತರ್ಗಾಮಿ ನೌಕೆಯನ್ನು ಹಸ್ತಾಂತರಿಸುವ ಮೂಲಕ ತನ್ನ ರಕ್ಷಣಾ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಇದು ದಕ್ಷಿಣ ಏಷ್ಯಾದಲ್ಲಿ ಭಾರತದ ರಕ್ಷಣಾ ರಫ್ತಿನ ದೊಡ್ಡ ಹೆಜ್ಜೆಯಾಗಿದೆ.

ಬಾಂಗ್ಲಾದೇಶ: ಬಾಂಗ್ಲಾದೇಶದೊಂದಿಗೆ ರಕ್ಷಣಾ ಉಪಕರಣಗಳ ಖರೀದಿಗಾಗಿ ಸಾಲದ ಸೌಲಭ್ಯವನ್ನು ಭಾರತ ಕಲ್ಪಿಸಿದೆ. ರಕ್ಷಣಾ ತರಬೇತಿ, ಜಂಟಿ ಮಿಲಿಟರಿ ವ್ಯಾಯಾಮಗಳು ಮತ್ತು ಮಾಹಿತಿ ವಿನಿಮಯದ ಕುರಿತು ಭಾರತವು ಬಾಂಗ್ಲಾದೇಶದೊಂದಿಗೆ ಬಲವಾದ ಒಪ್ಪಂದಗಳನ್ನು ಹೊಂದಿದೆ.


ಮಾಲ್ಡೀವ್ಸ್ : ಭಾರತವು ಮಾಲ್ಡೀವ್ಸ್ ಗೆ ಕರಾವಳಿ ಕಾವಲು ನೌಕೆಗಳು, ಕಣ್ಗಾವಲು ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಪೂರೈಸಿದೆ. ಸಮುದ್ರ ಸುರಕ್ಷತೆಗಾಗಿ ಜಂಟಿ ಗಸ್ತು ಮತ್ತು ತರಬೇತಿ ಕಾರ್ಯಕ್ರಮಗಳಲ್ಲಿ ಭಾರತ ನಿರಂತರವಾಗಿ ತೊಡಗಿಸಿಕೊಂಡಿದೆ.

ಶ್ರೀಲಂಕಾ : ಶ್ರೀಲಂಕಾಕ್ಕೆ ಭಾರತವು ಕರಾವಳಿ ಗಸ್ತು ನೌಕೆಗಳು, ತರಬೇತಿ ವಿಮಾನಗಳು ಮತ್ತು ಸಮುದ್ರ ಕಣ್ಗಾವಲು ಸಾಮರ್ಥ್ಯವನ್ನು ಹೆಚ್ಚಿಸಲು ಅಗತ್ಯವಾದ ಉಪಕರಣಗಳನ್ನು ಒದಗಿಸಿದೆ. ಇತ್ತೀಚೆಗೆ ಡಾಕ್‌ ಸೇರಿದಂತೆ ಹಲವು ತಾಂತ್ರಿಕ ಬೆಂಬಲಗಳನ್ನು ನೀಡಲಾಗಿದೆ.

ಜಾಗತಿಕ ವ್ಯಾಪಾರಕ್ಕೆ ಇದು ಏಷ್ಯಾ, ಮಧ್ಯಪ್ರಾಚ್ಯ ಮತ್ತು ಯುರೋಪ್‌ ನಡುವಿನ ಅತ್ಯಂತ ಹ್ರಸ್ವವಾದ ಮತ್ತು ಅಗ್ಗದ ನೌಕಾಯಾನ ಮಾರ್ಗವಾಗಿದೆ. ಚೀನಾ ಸೇರಿದಂತೆ ಪ್ರಮುಖ ಏಷ್ಯನ್‌ ಆರ್ಥಿಕತೆಗಳಾದ ಜಪಾನ್‌ ಮತ್ತು ದಕ್ಷಿಣ ಕೊರಿಯಾಗಳು ತಮ ಇಂಧನ ಅಗತ್ಯಕ್ಕಾಗಿ ಈ ಮಾರ್ಗವನ್ನು ನಂಬಿವೆ. ಈ ಮಾರ್ಗದ ಮೇಲಿನ ನಿಯಂತ್ರಣವು ಆ ಪ್ರದೇಶದಲ್ಲಿ ಯಾವ ದೇಶದ ನೌಕಾಪಡೆಯ ಬಲ ಹೆಚ್ಚಿದೆ ಎಂಬುದನ್ನು ನಿರ್ಧರಿಸುತ್ತದೆ.

ದಕ್ಷಿಣ ಏಷ್ಯಾದಲ್ಲಿ ಮತ್ತು ಹಿಂದೂ ಮಹಾಸಾಗರ ವಲಯದಲ್ಲಿ ಚೀನಾದ ಹೆಚ್ಚುತ್ತಿರುವ ಪ್ರಾಬಲ್ಯವನ್ನು ತಡೆಯಲು ಮತ್ತು ತನ್ನ ಭದ್ರತೆಯನ್ನು ಬಲಪಡಿಸಿಕೊಳ್ಳಲು ಭಾರತವು ಬಹುಮುಖಿ ರಣತಂತ್ರಗಳನ್ನು ಅನುಸರಿಸುತ್ತಿದೆ. ನೆಕ್ಲೇಸ್‌‍ ಆಫ್‌ ಡೈಮಂಡ್ಸ್ ವ್ಯೂಹ ಚೀನಾದ ಸ್ಟ್ರಿಂಗ್‌ ಆಫ್‌ ಪರ್ಲ್ಸ್ – ಹಿಂದೂ ಮಹಾಸಾಗರದಲ್ಲಿ ತನ್ನ ಬಂದರುಗಳನ್ನು ಸ್ಥಾಪಿಸಿ ಭಾರತವನ್ನು ಸುತ್ತುವರಿಯುವ ತಂತ್ರಕ್ಕೆ ಪ್ರತಿಯಾಗಿ, ಭಾರತವು ತನ್ನದೇ ಆದ ನೆಕ್ಲೇಸ್‌‍ ಆಫ್‌ ಡೈಮಂಡ್ಸ್ ತಂತ್ರವನ್ನು ರೂಪಿಸಿದೆ.

ಇದರಲ್ಲಿ ಪ್ರಮುಖವಾಗಿ ಬಂದರು, ನೌಕಾ ನೆಲೆಗಳ ಬಲವರ್ಧನೆ, ದ್ವೀಪಗಳ ಅಭಿವೃದ್ಧಿ, ಬಂದರು ಮತ್ತು ನೌಕಾ ನೆಲೆಗಳ ಬಲವರ್ಧನೆ: ಮಾರಿಷಸ್‌‍ನ ಅಗೆಲೆಗಾ, ಒಮಾನ್‌ನ ಡುಕ್‌, ಇರಾನ್‌ನ ಚಬಹಾರ್‌ ಮತ್ತು ಇಂಡೋನೇಷ್ಯಾದ ಸಬಾಂಗ್‌ ಬಂದರುಗಳೊಂದಿಗೆ ಭಾರತವು ಸಂಪರ್ಕ ಮತ್ತು ಸಹಕಾರವನ್ನು ವೃದ್ಧಿಸಿಕೊಂಡಿದೆ.

ದ್ವೀಪಗಳ ಅಭಿವೃದ್ಧಿ : ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು ಹಾಗೂ ಲಕ್ಷದ್ವೀಪದಲ್ಲಿನ ಮೂಲಸೌಕರ್ಯಗಳನ್ನು ಬಲಪಡಿಸುವ ಮೂಲಕ ಹಿಂದೂ ಮಹಾಸಾಗರದ ಮೇಲೆ ಕಣ್ಗಾವಲು ಹೆಚ್ಚಿಸಲಾಗಿದೆ. ರಕ್ಷಣಾ ಸಹಭಾಗಿತ್ವ – ಬ್ರಹ್ಮೋಸ್‌‍ ರಾಜತಾಂತ್ರಿಕತೆ ಭಾರತವು ತನ್ನ ನೆರೆಯ ಮತ್ತು ಆಗ್ನೇಯ ಏಷ್ಯಾದ ರಾಷ್ಟ್ರಗಳೊಂದಿಗೆ ರಕ್ಷಣಾ ಸಂಬಂಧಗಳನ್ನು ಗಾಢವಾಗಿಸುತ್ತಿದೆ.

ಫಿಲಿಪೈನ್ಸ್, ಇಂಡೋನೇಷ್ಯಾ ಮತ್ತು ವಿಯೆಟ್ನಾಂನಂತಹ ರಾಷ್ಟ್ರಗಳಿಗೆ ಬ್ರಹೋಸ್‌‍ ಕ್ಷಿಪಣಿಗಳು ಮತ್ತು ಇತರ ರಕ್ಷಣಾ ಪರಿಕರಗಳನ್ನು ಪೂರೈಸುವ ಮೂಲಕ ಈ ದೇಶಗಳು ಚೀನಾದ ಆಕ್ರಮಣಕಾರಿ ಧೋರಣೆಯನ್ನು ಎದುರಿಸಲು ಭಾರತದ ಮೇಲೆ ಅವಲಂಬಿತವಾಗುವಂತೆ ಮಾಡಲಾಗುತ್ತಿದೆ.ಇದು ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಏಕಸ್ವಾಮ್ಯಕ್ಕೆ ಸವಾಲಾಗಿ ಪರಿಣಮಿಸಿದೆ. ಕ್ವಾಡ್‌ ಮತ್ತು ಬಹುಪಕ್ಷೀಯ ಮೈತ್ರಿಗಳು ಭಾರತ, ಅಮೆರಿಕ, ಜಪಾನ್‌ ಮತ್ತು ಆಸ್ಟ್ರೇಲಿಯಾ ಒಳಗೊಂಡಿರುವ ಕ್ವಾಡ್‌ ವೇದಿಕೆಯು ಮುಕ್ತ ಮತ್ತು ಸ್ವತಂತ್ರ ಇಂಡೋ-ಪೆಸಿಫಿಕ್‌ ವಲಯಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ.ಇದು ಚೀನಾದ ಏಕಪಕ್ಷೀಯ ಪ್ರಭಾವವನ್ನು ತಡೆಯಲು ಸಮಾನ ಮನಸ್ಕ ರಾಷ್ಟ್ರಗಳನ್ನು ಒಗ್ಗೂಡಿಸುವ ಒಂದು ಪ್ರಯತ್ನವಾಗಿದೆ.

ತಾಂತ್ರಿಕ ಸಹಕಾರ : ಜಪಾನ್‌ನಂತಹ ದೇಶಗಳೊಂದಿಗೆ ಸೆಮಿಕಂಡಕ್ಟರ್‌, ನಿರ್ಣಾಯಕ ಖನಿಜಗಳು (ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿ ಸಹಭಾಗಿತ್ವದ ಮೂಲಕ ಚೀನಾದ ಮೇಲಿನ ಅವಲಂಬನೆಯನ್ನು ತಗ್ಗಿಸಲು ಭಾರತ ಪ್ರಯತ್ನಿಸುತ್ತಿದೆ. ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಪ್ರೆಡಕ್ಷನ್‌ ಲಿಂಕ್‌್ಡ ಇನ್ಸೆಂಟಿವ್‌ ಯೋಜನೆಗಳ ಮೂಲಕ ಚೀನಾದಿಂದ ಆಮದಾಗುವ ಸರಕುಗಳಿಗೆ ಪರ್ಯಾಯಗಳನ್ನು ಸೃಷ್ಟಿಸಲಾಗುತ್ತಿದೆ.
ರಕ್ಷಣಾ ರಫ್ತಿನ ಹಿಂದಿರುವ ಗುರಿಗಳು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ಪ್ರಭಾವವನ್ನು ಬಲಪಡಿಸುವುದು ಮತ್ತು ಚೀನಾದಂತಹ ಶಕ್ತಿಗಳ ಪ್ರವೇಶವನ್ನು ತಡೆಯುವುದು.

ರಕ್ಷಣಾ ಉದ್ಯಮಕ್ಕೆ ಉತ್ತೇಜನ : ಭಾರತದ ರಕ್ಷಣಾ ಕಂಪನಿಗಳ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯನ್ನು ಸೃಷ್ಟಿಸುವುದು. ನೆರೆಯ ರಾಷ್ಟ್ರಗಳ ರಕ್ಷಣಾ ಸಾಮಥ್ರ್ಯವನ್ನು ಹೆಚ್ಚಿಸುವ ಮೂಲಕ ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವುದು. ಭಾರತವು ಪ್ರಸ್ತುತ ತನ್ನ ರಕ್ಷಣಾ ರಫ್ತನ್ನು 2028-29ರ ವೇಳೆಗೆ 50,000 ಕೋಟಿಗೂ ಅಧಿಕಗೊಳಿಸುವ ಗುರಿಯನ್ನು ಹೊಂದಿದ್ದು, ಇದರಲ್ಲಿ ದಕ್ಷಿಣ ಏಷ್ಯಾ ರಾಷ್ಟ್ರಗಳ ಪಾಲು ಮಹತ್ವದ್ದಾಗಿದೆ.

RELATED ARTICLES

Latest News