Homeಕ್ರೀಡಾ ಸುದ್ದಿ2027ರ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಗೆ ದಿನಾಂಕ ನಿಗದಿ

2027ರ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಗೆ ದಿನಾಂಕ ನಿಗದಿ

Bangladesh to host Asia Cup 2027 in ODI format from June 18

ಮುಂಬೈ, ಜು.8- ಬರುವ 2027ರ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಗೆ ದಿನಾಂಕ ನಿಗದಿಯಾಗಿದೆ. ಮುಂದಿನ ವರ್ಷದ ಜೂನ್‌ 18 ರಿಂದ ಪಂದ್ಯಾವಳಿ ಆರಂಭವಾಗಲಿದ್ದು, ಜುಲೈ 4 ರಂದು ಫೈನಲ್‌ ಪಂದ್ಯ ನಡೆಯಲಿದೆ.ಈ ಬಾರಿ ಟೂರ್ನಿಯ ಆತಿಥ್ಯವನ್ನು ಬಾಂಗ್ಲಾದೇಶ ವಹಿಸಿಕೊಳ್ಳಲಿರುವುದು ಅಧಿಕೃತವಾಗಿದೆ.

ವಿಶ್ವಕಪ್‌ ಸರಣಿಗಳಿಗೆ ಅನುಗುಣವಾಗಿ ಏಷ್ಯಾ ಕಪ್‌ ಮಾದರಿಯನ್ನು ಬದಲಾಯಿಸಲಾಗುತ್ತದೆ. 2027ರ ಕೊನೆಯಲ್ಲಿ ಸೌತ್‌ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಐಸಿಸಿ ಪುರುಷರ ಏಕದಿನ ವಿಶ್ವಕಪ್‌ ನಡೆಯಲಿದ್ದು, ಅದಕ್ಕೆ ಪೂರ್ವಸಿದ್ಧತೆಯಾಗಿ 2027ರ ಏಷ್ಯಾ ಕಪ್‌ ಅನ್ನು ಕೂಡ 50 ಓವರ್‌ಗಳ ಏಕದಿನ ಮಾದರಿಯಲ್ಲೇ ನಡೆಸಲು ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ ನಿರ್ಧರಿಸಿದೆ.

3 ಸ್ಟೇಡಿಯಂಗಳಲ್ಲಿ ಪಂದ್ಯ:ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ಟೂರ್ನಿಯನ್ನು ಯಶಸ್ವಿಯಾಗಿ ನಡೆಸಲು ಮೂರು ಪ್ರಮುಖ ನಗರಗಳ ಕ್ರೀಡಾಂಗಣಗಳನ್ನು ಪ್ರಸ್ತಾಪಿಸಿದೆ. ಈ ಸ್ಟೇಡಿಯಂಗಳಿಗೆ ಎಸಿಸಿ ಕಡೆಯಿಂದ ಗ್ರೀನ್‌ ಸಿಗ್ನಲ್‌ ಸಿಗುವುದು ಖಚಿತ ಎಂದು ವರದಿಯಾಗಿದೆ.

ಮಿರ್‌ಪುರ್‌ (ಢಾಕಾ): ಶೇರ್‌-ಎ-ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣ.ಚತ್ತೋಗ್ರಾಮ್‌‍: ಬೀರ್‌ ಶ್ರೇಷ್ಠ ಫ್ಲೈಟ್‌ ಲೆಫ್ಟಿನೆಂಟ್‌ ಮತಿಯುರ್‌ ರೆಹಮಾನ್‌ ಕ್ರೀಡಾಂಗಣ ಹಾಗೂ ಸೈಲ್ಹೆಟ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣ ಏಷ್ಯಾ ಕಪ್‌ ಪಂದ್ಯಕ್ಕೆ ಸಿದ್ದಗೊಳಿಸಲಾಗಿದೆ. ಈ ಟೂರ್ನಿಯ ಫೈನಲ್‌ ಪಂದ್ಯವನ್ನು ಢಾಕಾದ ಶೇರ್‌-ಎ-ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಆಯೋಜಿಸಲು ಬಾಂಗ್ಲಾದೇಶ್‌ ಕ್ರಿಕೆಟ್‌ ಬೋರ್ಡ್‌ ಪ್ಲ್ಯಾನ್‌ ಮಾಡಿದೆ.

ಭಾರತ ಮತ್ತು ಪಾಕಿಸ್ತಾನ್‌ ಮುಖಾಮುಖಿ:ಈ ಬಾರಿಯ ಏಷ್ಯಾಕಪ್‌ನಲ್ಲೂ ಭಾರತ ಮತ್ತು ಪಾಕಿಸ್ತಾನ್‌ ತಂಡಗಳು ಒಂದೇ ಗ್ರೂಪ್‌ನಲ್ಲಿ ಕಾಣಿಸಿಕೊಳ್ಳಲಿದೆ. ಹೀಗಾಗಿ ಸಾಂಪ್ರದಾಯಿಕ ಎದುರಾಳಿಗಳು ಲೀಗ್‌ ಹಂತದಲ್ಲೇ ಮುಖಾಮುಖಿಯಾಗಲಿದ್ದಾರೆ.ಎಷ್ಟು ತಂಡಗಳು ಕಣಕ್ಕೆ? ಏಷ್ಯಾದ ಅಗ್ರ 5 ಪೂರ್ಣಾವಧಿ ಸದಸ್ಯ ರಾಷ್ಟ್ರಗಳಾದ ಭಾರತ, ಪಾಕಿಸ್ತಾನ್‌, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ್‌ ತಂಡಗಳು ಕಣಕ್ಕಿಳಿಯುವುದು ಖಚಿತವಾಗಿದೆ.

ಇನ್ನು ಅರ್ಹತಾ ಸುತ್ತಿನಲ್ಲಿ ಗೆದ್ದು ಬರುವ ಒಂದು ಅಸೋಸಿಯೇಟ್‌ ತಂಡ ಸೇರಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿವೆ. ಬಾಂಗ್ಲಾದೇಶವು ಕೊನೆಯದಾಗಿ 2016 ರಲ್ಲಿ ಏಷ್ಯಾ ಕಪ್‌ (ಟಿ20 ಮಾದರಿ) ಆಯೋಜಿಸಿತ್ತು. ಈಗ ಸುದೀರ್ಘ 11 ವರ್ಷಗಳ ಬಳಿಕ ಮತ್ತೆ ಆತಿಥ್ಯ ವಹಿಸಲು ಸಜ್ಜಾಗಿ ನಿಂತಿದೆ. ಅದರಂತೆ 2027ರ ಏಷ್ಯಾಕಪ್‌ ಏಕದಿನ ಟೂರ್ನಿಯು ಬಾಂಗ್ಲಾದೇಶ್‌ನಲ್ಲಿ ಜರುಗಲಿದೆ.

RELATED ARTICLES

Latest News