Homeರಾಜಕೀಯಯುಎಇಯಿಂದ ಕರಾಚಿಗೆ ಬರುತ್ತಿದ್ದ ಪಾಕಿಸ್ತಾನದ ಸರಕು ವಿಮಾನ ನಾಪತ್ತೆ

ಯುಎಇಯಿಂದ ಕರಾಚಿಗೆ ಬರುತ್ತಿದ್ದ ಪಾಕಿಸ್ತಾನದ ಸರಕು ವಿಮಾನ ನಾಪತ್ತೆ

Cargo aircraft from UAE to Pakistan goes missing with five crew on board

ಲಾಹೋರ್‌,ಜು.7-ಯುನೈಟೆಡ್‌ ಅರಬ್‌ ಎಮಿರೇಟ್‌್ಸ (ಯುಎಇ)ನ ಶಾರ್ಜಾದಿಂದ ಕರಾಚಿಗೆ ಬರುತ್ತಿದ್ದ ಪಾಕಿಸ್ತಾನದ ಸರಕು ಸಾಗಣೆ ವಿಮಾನವು ಐವರು ಸಿಬ್ಬಂದಿಯೊಂದಿಗೆ ರಾತ್ರಿ ನಾಪತ್ತೆಯಾಗಿದೆ ಎಂದು ಪಾಕಿಸ್ತಾನ ವಿಮಾನ ನಿಲ್ದಾಣಗಳ ಪ್ರಾಧಿಕಾರ ತಿಳಿಸಿದೆ.

ನಾಪತ್ತೆಯಾಗಿರುವ ವಿಮಾನವನ್ನು ಪತ್ತೆಹಚ್ಚಲು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸಮುದ್ರದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.

ಎಕ್‌್ಸನಲ್ಲಿ ಪ್ರಕಟಣೆ ನೀಡಿರುವ ಪಿಎಎ,ಕೆ.2 ಏರ್‌ವೇಸ್‌‍ ಸಂಸ್ಥೆಯ ಬೋಯಿಂಗ್‌ 737 ಸರಕು ವಿಮಾನವು ಶಾರ್ಜಾದಿಂದ ಕರಾಚಿಗೆ ಬರುತ್ತಿದ್ದ ವೇಳೆ ರಾತ್ರಿ 9.18ಕ್ಕೆ ನ್ಯಾವಿಗೇಶನ್‌ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಉಂಟಾಗಿದೆ ಎಂದು ತಿಳಿಸಿತ್ತು. ತಕ್ಷಣವೇ ಕರಾಚಿ ಏರಿಯಾ ಕಂಟ್ರೋಲ್‌ ಸೆಂಟರ್‌ (ಎಸಿಸಿ) ವಿಮಾನಕ್ಕೆ ಅಗತ್ಯ ಮಾರ್ಗದರ್ಶನ ನೀಡಿತ್ತು ಎಂದು ಹೇಳಿದೆ.

ಆದರೆ ರಾತ್ರಿ 9.22ರ ಸುಮಾರಿಗೆ ವಿಮಾನವು ರಾಡಾರ್‌ನಲ್ಲಿ ಏಕಾಏಕಿ ವೇಗವಾಗಿ ಕೆಳಕ್ಕೆ ಇಳಿಯುತ್ತಿರುವುದು ಹಾಗೂ ದಿಕ್ಕು ತ್ವರಿತವಾಗಿ ಬದಲಾಗಿರುವುದು ಕಂಡುಬಂದಿತು. ಬಳಿಕ ಕರಾಚಿಯಿಂದ ಸುಮಾರು 155 ನಾಟಿಕಲ್‌ ಮೈಲುಗಳ ಪಶ್ಚಿಮಕ್ಕೆ ವಿಮಾನದೊಂದಿಗೆ ರಾಡಾರ್‌ ಸಂಪರ್ಕ ಮತ್ತು ಸಂವಹನ ಸಂಪೂರ್ಣವಾಗಿ ಕಡಿತಗೊಂಡಿತು ಎಂದು ಪಿಎಎ ತಿಳಿಸಿದೆ.

ಘಟನೆಯ ಬಳಿಕ ತಕ್ಷಣವೇ ರೆಸ್ಕ್ಯೂ ಕೋಆರ್ಡಿನೇಷನ್‌ ಸೆಂಟರ್‌ ಸಕ್ರಿಯಗೊಳಿಸಲಾಗಿದ್ದು, ಸಮುದ್ರದಲ್ಲಿ ವಿವಿಧ ಸಂಸ್ಥೆಗಳ ನೆರವಿನಿಂದ ವ್ಯಾಪಕ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.ನಾಪತ್ತೆಯಾಗಿರುವ ವಿಮಾನದಲ್ಲಿ ಒಟ್ಟು ಐವರು ಸಿಬ್ಬಂದಿ ಇದ್ದರು ಎಂದು ಪಾಕಿಸ್ತಾನ ವಿಮಾನ ನಿಲ್ದಾಣಗಳ ಪ್ರಾಧಿಕಾರ ತಿಳಿಸಿದೆ.

RELATED ARTICLES

Latest News