ಫಾಕ್‌್ಸಬರೋ,ಜುಲೈ 10-ಸ್ಟಾರ್ ಆಟಗಾರ ಕೈಲಿಯನ್‌ಎಂಬಾಪೆ ಹಾಗೂ ಅಸಿಸ್ಟ್ ಅದ್ಬುತ ಗೋಲಿನ ನೆರವಿನಿಂದ ಫ್ರಾನ್ಸ್ ತಂಡ ಮೊರಾಕೊ ವಿರುದ್ಧ 2-0 ಗೋಲುಗಳ ಅಂತರದಲ್ಲಿ ಗೆದ್ದು ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಸೆಮಿಫೈನಲ್‌ಗೆ ಪ್ರವೇಶಿಸಿದೆ.
ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮೊದಲಾರ್ಧದಲ್ಲಿ ಪೆನಾಲ್ಟಿ ಅವಕಾಶವನ್ನು ಕೈಚೆಲ್ಲಿದರೂ, ಎರಡನೇಯಾರ್ಧದಲ್ಲಿ ಎಂಬಾಪೆ (60ನೇ ನಿಮಿಷ) ಗೋಲು ದಾಖಲಿಸಿದರು. ಬಳಿಕ ಅವರ ಪಾಸ್‌ನ ನೆರವಿನಿಂದ ಓಸ್ಮಾನ್ ಡೆಂಬೆಲೆ (66ನೇ ನಿಮಿಷ) ಮತ್ತೊಂದು ಗೋಲು ಬಾರಿಸಿ ಫ್ರಾನ್‌್ಸಗೆ ಭದ್ರ ಮುನ್ನಡೆ ತಂದುಕೊಟ್ಟರು.
ಈ ವಿಶ್ವಕಪ್‌ನಲ್ಲಿ ಎಂಬಾಪೆ ದಾಖಲಿಸಿದ ಇದು ಎಂಟನೇ ಗೋಲು. ವಿಶ್ವಕಪ್ ಇತಿಹಾಸದಲ್ಲಿ ಅವರ ಒಟ್ಟು ಗೋಲುಗಳ ಸಂಖ್ಯೆ 20ಕ್ಕೆ ಏರಿದ್ದು, ಅರ್ಜೆಂಟೀನಾದ ನಾಯಕ ಲಿಯೋನೆಲ್ ಮೆಸ್ಸಿಯ ದಾಖಲೆಗೆ ಕೇವಲ ಒಂದು ಗೋಲಿನ ಅಂತರದಲ್ಲಿದ್ದಾರೆ.
ಪಂದ್ಯದ 76ನೇ ನಿಮಿಷದಲ್ಲಿ ಬಲಗಾಲಿನ ಪಾದಗಂಟಿಗೆ ಗಾಯಗೊಂಡಂತೆ ಕಂಡುಬಂದ ಎಂಬಾಪೆ ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬದಲಾಯಿಸಲಾಯಿತು. ಆದರೆ ಪಂದ್ಯದ ಬಳಿಕ ಅವರು ಗಾಯ ಗಂಭೀರವಾಗಿಲ್ಲ ಎಂದು ಸ್ಪಷ್ಟಪಡಿಸಿದರು.ಗೆಲ್ಲುವುದೇ ನಮ ವಿಶ್ರಾಂತಿಯ ಮಾರ್ಗ. ಸೆಮಿಫೈನಲ್ ಪ್ರವೇಶಿಸಿರುವುದು ಸಂತಸದ ಸಂಗತಿ. ಆದರೆ ಇನ್ನೂ ನಮ ಗುರಿ ದೂರದಲ್ಲಿದೆ, ಎಂದು ಎಂಬಾಪೆ ಹೇಳಿದರು.
2022ರ ವಿಶ್ವಕಪ್ ಸೆಮಿಫೈನಲ್‌ನಲ್ಲೂ ಫ್ರಾನ್ಸ್ ಇದೇ ಮೊರಾಕೊ ತಂಡವನ್ನು 2-0 ಅಂತರದಲ್ಲಿ ಸೋಲಿಸಿತ್ತು. ಸತತ ಮೂರನೇ ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಿರುವ ಫ್ರಾನ್ಸ್, ಸತತ ಮೂರನೇ ಬಾರಿಗೆ ಫೈನಲ್ ಪ್ರವೇಶಿಸುವ ಗುರಿಯತ್ತ ಹೆಜ್ಜೆಯಿಟ್ಟಿದೆ. ಫ್ರಾನ್ಸ್ ಕೋಚ್ ಡಿಡಿಯರ್ ಡೆಶಾಂಪ್, ನಮ್ಮ ಯಶಸ್ಸಿನ ಹಿಂದೆ ಶ್ರೇಷ್ಠ ಆಟಗಾರರ ಕೊಡುಗೆ ಇದೆ. ಮೈದಾನದಲ್ಲಿನ ಪ್ರದರ್ಶನವೇ ನಿಜವಾದ ಉತ್ತರ, ಎಂದು ಹೇಳಿದರು.
ಮೊರಾಕೊ ಕೋಚ್ ಮೊಹಮದ್ ಒಹಾಬಿ ಸೋಲಿನ ಬಗ್ಗೆ ನಿರಾಶೆ ವ್ಯಕ್ತಪಡಿಸಿ, ನಾವು ಇನ್ನಷ್ಟು ಉತ್ತಮವಾಗಿ ಆಡಬೇಕಾಗಿತ್ತು. ಚೆಂಡಿನ ಮೇಲಿನ ಹಿಡಿತವನ್ನು ಗೋಲುಗಳಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲಎಂದರು. ಫ್ರಾನ್ಸ್ ತಂಡ ಈಗ ಸೆಮಿಫೈನಲ್‌ನಲ್ಲಿ ಸ್ಪೇನ್ ಮತ್ತು ಬೆಲ್ಜಿಯಂ ನಡುವಿನ ಪಂದ್ಯದ ವಿಜೇತರನ್ನು ಎದುರಿಸಲಿದೆ. ಈ ಪಂದ್ಯ ಡಲ್ಲಾಸ್‌ನಲ್ಲಿ ಮಂಗಳವಾರ ನಡೆಯಲಿದೆ.
