Homeರಾಜ್ಯಬೆಳ್ಳಂಬೆಳಿಗ್ಗೆ ರೌಡಿಗಳ ನಿದ್ದೆಗೆಡಿಸಿದ ಪೊಲೀಸರು, ಅಪರಾಧ ತಡೆಗೆ ವಿಶೇಷ ಕಾರ್ಯಾಚರಣೆ

ಬೆಳ್ಳಂಬೆಳಿಗ್ಗೆ ರೌಡಿಗಳ ನಿದ್ದೆಗೆಡಿಸಿದ ಪೊಲೀಸರು, ಅಪರಾಧ ತಡೆಗೆ ವಿಶೇಷ ಕಾರ್ಯಾಚರಣೆ

ಬೆಂಗಳೂರು, ಜು.10- ಕೇಂದ್ರ ವಿಭಾಗದ ಪೊಲೀಸರು ರಾತ್ರಿ ಡ್ರಗ್‌ ಪೆಡ್ಲರ್‌, ಹಳೇ ಆರೋಪಿಗಳು ಹಾಗೂ ರೌಡಿ ಶೀಟರ್‌ಗಳ ಮನೆ ಮೇಲೆ ದಾಳಿ ಮಾಡಿ ಕಾರ್ಯಾಚರಣೆ ನಡೆಸಿದ್ದಾರೆ.

ನಗರದಲ್ಲಿ ಹೆಚ್ಚಾಗುತ್ತಿರುವ ಅಕ್ರಮ ಚಟುವಟಿಕೆಗಳು, ಮಾದಕ ದ್ರವ್ಯ ಜಾಲ ಹಾಗೂ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಡಿಸಿಪಿ ಅಕ್ಷಯ್‌ ಮಚೀಂದ್ರ ಹಕೇ ಅವರ ನೇತೃತ್ವದಲ್ಲಿ 400 ಕ್ಕೂ ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿಗಳು ಈ ಕಾರ್ಯಾಚರಣೆ ಕೈಗೊಂಡಿದ್ದರು.

ಕೇಂದ್ರ ವಿಭಾಗದ ಎಲ್ಲಾ ಪೊಲೀಸ್‌‍ ಠಾಣೆ ವ್ಯಾಪ್ತಿಗಳು ಹಾಗೂ ಗಡಿಯಲ್ಲಿರುವ ಕೋರಮಂಗಲ, ಮಡಿವಾಳ, ಸಿದ್ದಾಪುರ ಪೊಲೀಸ್‌‍ ಠಾಣೆ ವ್ಯಾಪ್ತಿಗಳಲ್ಲೂ ಈ ಕಾರ್ಯಾಚರಣೆ ನಡೆಸಲಾಯಿತು. ಸಾರ್ವಜನಿಕ ಶಾಂತಿಗೆ ಧಕ್ಕೆ ತರುವ, ದಾಂಧಲೆ ನಡೆಸುವ ರೌಡಿಗಳಿಗೆ, ಹಳೇ ಆರೋಪಿಗಳಿಗೆ ಹಾಗೂ ಡ್ರಗ್‌್ಸಪೆಡ್ಲರ್‌ಗಳಿಗೆ ಚಳಿ ಬಿಡಿಸಿದ್ದಾರೆ.

ನಗರದ ಪ್ರಮುಖ ರಸ್ತೆಗಳು ಹಾಗೂ ಶಂಕಾಸ್ಪದ ಪ್ರದೇಶಗಳು ಹಾಗೂ ಗಡಿ ಭಾಗದ ಚೆಕ್‌ಪೋಸ್ಟ್‌ಗಳಲ್ಲಿ ತಡೆರಾತ್ರಿವರೆಗೂ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ನಾಕಾಬಂದಿ ನಿರ್ಮಿಸಿ ಸಂಚರಿಸುತ್ತಿದ್ದ ಅನುಮಾನಾಸ್ಪದ ವಾಹನ ತಡೆದು ತಪಾಸಣೆ ನಡೆಸಿ ಕುಡಿದು ವಾಹನ ಚಲಾಯಿಸುವ ಸವಾರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಶೇಷ ಕಾರ್ಯಾಚರಣೆಯಲ್ಲಿ 154 ರೌಡಿ ಶೀಟರ್‌ಗಳು ಹಾಗೂ ಹಳೇ ಆರೋಪಿಗಳ ಮನೆಗಳ ಮೇಲೆ ದಾಳಿ ಮಾಡಿದರೇ, ಒಂಬತ್ತು ಡ್ರಗ್‌ ಪೆಡ್ಲರ್‌ಗಳ ಮನೆ ಮೇಲೆ ದಾಳಿ ನಡೆಸಿ 16 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಹಾಗೂ 1029 ವಾಹನಗಳನ್ನು ತಪಾಸಣೆ ಮಾಡಿ 151 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

14 ಆಟೋಗಳನ್ನು ಜಪ್ತಿ ಮಾಡಲಾಗಿದ್ದು, 179 ಪೆಟಿ ಕೇಸ್‌‍, 171 ಕೋಪ್ಟಾ ಪ್ರಕರಣ,4 ಎನ್‌ಬಿಡಬ್ಲ್ಯೂ,19 ಪಿಎಆರ್‌ ಪ್ರಕರಣ, 58 ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳ ಪರಿಶೀಲನೆ ಹಾಗೂ 77 ಹೋಟೆಲ್‌್ಸ ಮತ್ತು ರೆಸ್ಟೋರೆಂಟ್‌ಗಳನ್ನು ಪರಿಶೀಲನೆ ನಡೆಸಿ ನಿಯಮ ಉಲ್ಲಂಘಿಸಿದವರ ವಿರುದ್ಧ ಖಡಕ್‌ ಎಚ್ಚರಿಕೆ ನೀಡಲಾಗಿದೆ.

RELATED ARTICLES
spot_img

Latest News