Homeಜಿಲ್ಲಾ ಸುದ್ದಿಗಳುಚಿಕ್ಕಮಗಳೂರಲ್ಲಿ ಪ್ರವಾಸಿಗರಿಗೆ ಭಯ ಹುಟ್ಟಿಸಿದ ಹುಲಿ ದರ್ಶನ

ಚಿಕ್ಕಮಗಳೂರಲ್ಲಿ ಪ್ರವಾಸಿಗರಿಗೆ ಭಯ ಹುಟ್ಟಿಸಿದ ಹುಲಿ ದರ್ಶನ

Tourists fear tiger sighting in Chikkamagaluru

ಚಿಕ್ಕಮಗಳೂರು,ಜು.11- ಕಾಫಿನಾಡಿನ ಹಸಿರು ಕಾಡುಗಳ ನಡುವೆ ಸಂಚರಿಸುತ್ತಿದ್ದ ಪ್ರವಾಸಿಗರಿಗೆ ಮರೆಯಲಾಗದ ಅನುಭವವೊಂದು ಎದುರಾಗಿದೆ. ತಾಲೂಕಿನ ಮಲ್ಲಂದೂರು ಸಮೀಪದ ಕವಿಕಲ್‌ ಮಠದ ರಸ್ತೆಯಲ್ಲಿ ಬೃಹತ್‌ ಗಾತ್ರದ ಹುಲಿಯೊಂದು ದಿಢೀರನೆ ಪ್ರತ್ಯಕ್ಷವಾಗಿದ್ದು, ಕೆಲಕಾಲ ರಸ್ತೆ ಬದಿಯಲ್ಲಿ ನಡಿಗೆಯಿಟ್ಟ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ರಸ್ತೆಯ ಪಕ್ಕದ ದಟ್ಟ ಪೊದೆಗಳಿಂದ ಹೊರಬಂದ ಹುಲಿ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದ ದೃಶ್ಯವನ್ನು ಪ್ರವಾಸಿಗರು ತಮ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಹುಲಿಯನ್ನು ಕಣ್ಣಾರೆ ಕಂಡ ಪ್ರವಾಸಿಗರು ಒಂದೆಡೆ ರೋಮಾಂಚನಗೊಂಡರೆ, ಮತ್ತೊಂದೆಡೆ ಕ್ಷಣಕಾಲ ಆತಂಕಕ್ಕೂ ಒಳಗಾದರು.

ಸ್ವಲ್ಪ ದೂರ ರಸ್ತೆಯಲ್ಲೇ ಸಾಗಿದ ಹುಲಿ, ಬಳಿಕ ಕಾರಿನತ್ತ ಒಮೆ ಗಂಭೀರವಾಗಿ ದೃಷ್ಟಿ ಹರಿಸಿ ನಿಧಾನವಾಗಿ ಮತ್ತೆ ದಟ್ಟ ಅರಣ್ಯದೊಳಗೆ ಮರೆಯಾಯಿತು.ಮಂಜು ಮುಸುಕಿದ ಹಸಿರು ಕಾನನದ ನಡುವೆ ಕಾಡಿನ ರಾಜನ ಈ ಅಪರೂಪದ ಸಂಚಾರದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗಿದ್ದು, ಪ್ರಕೃತಿ ಮತ್ತು ವನ್ಯಜೀವಿ ಪ್ರಿಯರ ಗಮನ ಸೆಳೆಯುತ್ತಿದೆ.

ಕವಿಕಲ್‌ ಮಠ ಹಾಗೂ ಮಲ್ಲಂದೂರು ಸುತ್ತಮುತ್ತಲಿನ ಪ್ರದೇಶಗಳು ಭದ್ರಾ ಅಭಯಾರಣ್ಯದ ವ್ಯಾಪ್ತಿಗೆ ಹೊಂದಿಕೊಂಡಿರುವುದರಿಂದ ಹುಲಿ ಸೇರಿದಂತೆ ಹಲವು ವನ್ಯಜೀವಿಗಳ ಸಂಚಾರ ಸಾಮಾನ್ಯವಾಗಿದೆ.

RELATED ARTICLES
spot_img

Latest News