Homeಮನರಂಜನೆಶಿವಣ್ಣ @ 64 : ಅಭಿಮಾನಿಗಳ ಜೊತೆಗೆ `ಶಿವೋತ್ಸವ'

ಶಿವಣ್ಣ @ 64 : ಅಭಿಮಾನಿಗಳ ಜೊತೆಗೆ `ಶಿವೋತ್ಸವ’

Shivanna @ 64: `Shivottsava' with fans

ದೊಡನೆಯ ದೊಡ್ಡ ಕುಡಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಎಷ್ಟೇ ಆಗಲೀ ಅಭಿಮಾನಿ ದೇವರುಗಳು ಅಂತ ಅಣ್ಣಾವ್ರ ಹೇಳಿದ್ರು. ಅದನ್ನೇ ದೊಡ್ಮನೆ ಕುಡಿಗಳು ಪಾಲಿಸಿಕೊಂಡು ಬರ್ತಿದ್ದಾರೆ. ಏನೇ ಬ್ಯುಸಿ ಇದ್ದರು ಕೂಡ ಶಿವಣ್ಣ, ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ.

ಸದ್ಯಕ್ಕಂತು ಅನಾರೋಗ್ಯದಿಂದ ಶಿವಣ್ಣ ಚೇತರಿಸಿಕೊಂಡಿದ್ದಾರೆ. ಅದೇ ಅಭಿಮಾನಿಗಳಿಗೆ ದೊಡ್ಡ ಸಂತಸ. ಇಂದು ಕೂಡ ಮನೆ ಬಳಿ ಅದ್ದೂರಿಯಾಗಿ ಶಿವಣ್ಣರ 64ನೇ ಹುಟ್ಟುಹಬ್ಬ ಆಚರಿಸಲಾಗಿದೆ.

ಅಭಿಮಾನಿಗಳು ತಮ ಅಭಿಮಾನವನ್ನ ತೋರಿಸುವ ರೀತಿಯೇ ಚೆಂದ. ಹಾರ ತರ್ತಾರೆ, ಡಿಫ್ರೆಂಟ್‌ ಕೇಕ್‌ ತರ್ತಾರೆ, ಗಿಫ್‌್ಟ, ಶಾಲು ಶಲ್ಯ ಅಂತ ಪ್ರೀತಿಯಿಂದ ಏನೇನೋ ತರ್ತಾರೆ. ಆದರೆ ಇದೆಲ್ಲದಕ್ಕೂ ಹಣ ವ್‌ಯರ್ಥ ಬೇಡ ಎಂದಿರುವ ಶಿವಣ್ಣ, ಆ ಹಣವನ್ನ ಶಕ್ತಿಧಾಮದ ಮಕ್ಕಳಿಗೆ ನೀಡುವಂತೆ ಸ್ಕ್ಯಾನರ್‌ ಕೋಡ್‌ ಕೂಡ ಹಾಕಿದ್ದಾರೆ. ಶಿವಣ್ಣನ ಮಾತನ್ನ ಅಭಿಮಾನಿಗಳು ಕೂಡ ಫಾಲೋ ಮಾಡುತ್ತಿದ್ದಾರೆ.

ಇನ್ನು ಶಿವಣ್ಣನ ಹುಟ್ಟುಹಬ್ಬಕ್ಕೆ ಸಿನಿಮಾ ತಂಡಗಳು ಹೊಸ ಹೊಸ ಘೋಷಣೆಯ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನ ತಿಳಿಸುತ್ತಾರೆ. ಅದೇ ರೀತಿ ಕಿಶೋರ್‌ ಪತ್ತಿಕೊಂಡ ನಿರ್ಮಾಣದಲ್ಲಿ, ಚೇತನ್‌ ಕುಮಾರ್‌ ನಿರ್ದೇಶನದಲ್ಲಿ M16 ಜೆಜೆ ರಾಯ್‌ ಸಿನಿಮಾ ಕೂಡ ಅನೌನ್ಸ್ ಆಗಿದೆ.

ಇನ್ನು ಶಿವಣ್ಣ ಹಾಗೂ ಡಾಲಿ ಧನಂಜಯ ಅಭಿನಯದ 666 ಆಪರೇಷನ್‌ ಡ್ರೀಮ್‌ ಥಿಯೇಟರ್‌, ಗುಮಡಿ ನರಸಯ್ಯ, ಬೇಲ್‌, ಎ ಫಾರ್‌ ಆನಂದ್‌ ಹೀಗೆ ಸಾಕಷ್ಟು ಸಿನಿಮಾಗಳು ಶಿವಣ್ಣನ ಅಭಿಮಾನಿಗಳಿಗಾಗಿ ಕಾಯ್ತಿವೆ. ಹ್ಯಾಪಿ ಬರ್ತ್‌ ಡೇ ಶಿವಣ್ಣ.

RELATED ARTICLES
spot_img

Latest News