ಅಹಮದಾಬಾದ್,ಫೆ.15-ರಾಮ ಮಂದಿರಕ್ಕೆ ಒಮ್ಮೆ 11 ಕೋಟಿ ದೇಣಿಗೆ ನೀಡಿ ಭಕ್ತಿ ಬಾವ ಮೆರದಿದ್ದ ಉದ್ಯಮಿ ಗೋವಿಂದ್ ಧೋಲಾಕಿಯಾ ಅವರು ಗುಜರಾತ್‍ನಿಂದ ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕಡುಬಡತನದಿಂದ ಸಿರವಂತರಾದ ವಜ್ರದ ಉದ್ಯಮಿ ರಾಜಕೀಯಕ್ಕೆ ಕಾಲಿಡುತ್ತಿರುವುದು ಹಲವರನ್ನು ಹುಬ್ಬೇರುವಂತೆ ಮಾಡಿದೆ.
ಈ ಬಗ್ಗೆ ಮಾತನಾಡಿರುವ ಗೋವಿಂದ್ ಧೋಲಾಕಿಯಾ ರೈತ ಕುಟುಂಬದಿಂದ ಬಂದು , ಉದ್ಯಮಿಯಾಗುವತ್ತ ನನ್ನ ಪ್ರಯಾಣವು ತುಂಬಾ ಸಂತೋಷವಾಗಿದೆ… ನಾಲ್ಕು ಗಂಟೆಗಳ ಹಿಂದೆಯಷ್ಟೇ ನನಗೆ ಬಿಜೆಪಿ ಟಿಕೆಟ್ ನೀಡಿರುವುದು ನನಗೆ ತಿಳಿಯಿತು ಆದರೆ ನನ್ನ ಹೆಸರನ್ನು ಅಂತಿಮಗೊಳಿಸುವ ಮೊದಲು ಬಿಜೆಪಿ ನಾಯಕರು ಖಂಡಿತವಾಗಿಯೂ ಈ ಬಗ್ಗೆ ಚಿಂತನೆ ನಡೆಸಿರಬಹುದು ಎಂದು ಅವರು ತಿಳಿಸಿದರು.
ಗೋವಿಂದ್ ಧೋಲಾಕಿಯಾ ಅವರು ಸೂರತ್ ಮೂಲದ ವಜ್ರ ಉತ್ಪಾದನೆ ಮತ್ತು ರಫ್ತು ಮಾಡುವ ಕಂಪನಿ ಶ್ರೀರಾಮಕೃಷ್ಣ ಎಕ್ಸ್‍ಪೋಟ್ರ್ಸ್ ಪ್ರೈವೇಟ್ ಲಿಮಿಟೆಡ್‍ನ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದಾರೆ. ಇದು ಈ ವಲಯದ ವಿಶ್ವದ ಅತಿದೊಡ್ಡ ಕಂಪನಿಗಳಲ್ಲಿ ಒಂದಾಗಿದೆ. ಕಳೆದ 1970 ರಲ್ಲಿ ಕಂಪನಿಯನ್ನು ಪ್ರಾರಂಭಿಸಿ ಇಂದು ಲಿಂಕ್ಡ್‍ಇನ್ ಪೆಪೋಲ್ ಪ್ರಕಾರ, ಕಂಪನಿಯು 5000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಕಂಪನಿಯ ಒಟ್ಟು ಆದಾಯವು ಈಗ 1.8 ಬಿಲಿಯನ್ ಡಾಲರ್‍ಗಳನ್ನು ಮೀರಿದೆ.
ರಾಜ್ಯಸಭೆಗೆ ಜೆಡಿಎಸ್ ಅಭ್ಯರ್ಥಿ ಕಣಕ್ಕೆ : ಅಡ್ಡ ಮತದಾನ ಭೀತಿ
ಗೋವಿಂದಕಾಕ ಅವರು ವಜ್ರ ಉದ್ಯಮ ಮತ್ತು ಯುವಜನತೆಗೆ ಚಿಂತನಶೀಲ ನಾಯಕರಾಗಿದ್ದಾರೆ. ಅವರ ಅಪಾರ ಅನುಭವದಿಂದ ಪ್ರೇರಿತರಾದ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್- ಅಹಮದಾಬಾದ್, ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಅವರನ್ನು ಆಗಾಗ್ಗೆ ಆಹ್ವಾನಿಸುತ್ತಾರೆ. (ದೆಹಲಿ, ನ್ಯಾಷನಲ್ ಅಕಾಡೆಮಿ ಆಫ್ ಇಂಡಿಯನ್ ರೈಲ್ವೇಸ್, ವಡೋದರಾದ ಸಿಂಬಯೋಸಿಸ್ ಇನ್‍ಸ್ಟಿಟ್ಯೂಟ್ ಆಫ್ ಬ್ಯುಸಿನೆಸ್ ಮ್ಯಾನೇಜ್‍ಮೆಂಟ್,ಬೆಂಗಳೂರಿನ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಹಲವಾರು ಇತರ ವಿಶ್ವವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಬಜೆಟ್‌ನಲ್ಲಿ ಏನನ್ನು ನಿರೀಕ್ಷಿಸಬಹುದು..?
ಲೋಕೋಪಕಾರಕ್ಕಾಗಿ 2014 ರಲ್ಲಿ ನಾಲೆಡ್ಜ್ ಡೇಶನ್ ಅನ್ನು ಸ್ಥಾಪಿಸಿದರು.ಅವರು ದೀಪಾವಳಿ ಸಮಯದಲ್ಲಿ ತಮ್ಮ ಉದ್ಯೋಗಿಗಳಿಗೆ ಉದಾರ ಉಡುಗೊರೆಗಳನ್ನು ನೀಡಲು ಹೆಸರುವಾಸಿಯಾಗಿದ್ದಾರೆ. ಪ್ರಸ್ತುತ ರಾಜ್ಯಸಭೆ ಸದಸ್ಯರಾಗುವುದು ನಿಶ್ಚಿತವಾಗಿದ್ದು ಹೊಸ ರಂಗ ಪ್ರವೇಶಿಸಲಿದ್ದಾರೆ.