Homeಇದೀಗ ಬಂದ ಸುದ್ದಿಆಗಸ್ಟ್‌ 13ರಿಂದ ವಿಧಾನಮಂಡಲ ಅಧಿವೇಶನ..

ಆಗಸ್ಟ್‌ 13ರಿಂದ ವಿಧಾನಮಂಡಲ ಅಧಿವೇಶನ..

ಬೆಂಗಳೂರು, ಜು.26- ಮುಂದಿನ ತಿಂಗಳ 13 ರಿಂದ ವಿಧಾನಮಂಡಲದ ಅಧಿವೇಶನ ನಡೆಸಲಾಗುವು ದೆಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. ನಗರದಲ್ಲಿಂದು ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಬರದ ವಿಚಾರಗಳ ಕುರಿತಂತೆ ಸಂಸತ್‌ನಲ್ಲಿ ಪ್ರಸ್ತಾಪಿಸಬೇಕಿದೆ. ಈ ನಿಟ್ಟಿನಲ್ಲಿ ಸಂಸದರಿಗೆ ಮಾಹಿತಿ ನೀಡಲು ನಾಳೆ ದೆಹಲಿಯಲ್ಲಿ ಸಭೆ ಕರೆಯಲಾಗಿದೆ.

ಬರ ನಿರ್ವಹಣೆ ಸೇರಿದಂತೆ ಹಲವಾರು ವಿಚಾರಗಳ ಕುರಿತು ಚರ್ಚೆ ನಡೆಸಿ, ಮಾಹಿತಿ ನೀಡಲಾಗುವುದು. ರಾಜ್ಯದಲ್ಲಿನ ಅಣೆಕಟ್ಟುಗಳಲ್ಲಿರುವ ನೀರಿನ ಸಂಗ್ರಹ ಕುರಿತು ವಾಸ್ತವಾಂಶಗಳನ್ನು ವಿವರಿಸಲಾಗುವುದು. ಕೇಂದ್ರದ ಬಾಕಿ ಯೋಜನೆಗಳ ಕುರಿತು ವಿವರಣೆ ನೀಡಿ ಸಂಸತ್‌ನಲ್ಲಿ ಧ್ವನಿ ಎತ್ತಲು ಮನವಿ ಮಾಡಲಾಗುವುದು ಎಂದರು. ಕೇಂದ್ರ ಸಚಿವರಿಗೂ ಸಭೆಯಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದೆ. ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಎಲ್ಲರ ಜೊತೆ ಚರ್ಚೆ ನಡೆಸಲು ಸರ್ಕಾರ ಪ್ರಯತ್ನಿಸುತ್ತಿದೆ. ಸಂಸತ್‌ನಲ್ಲಿ ಚರ್ಚೆಗಳಾದಾಗ ಕೇಂದ್ರ ಸಚಿವರು ಮತ್ತು ಸಂಸದರು ಪಕ್ಷಾತೀತವಾಗಿ ರಾಜ್ಯದ ಪರವಾಗಿ ಧ್ವನಿ ಎತ್ತಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬರದ ಸನ್ನಿವೇಶಗಳಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರ ನೆರವನ್ನು ನಿರೀಕ್ಷಿಸುತ್ತಿದೆ. ಇದನ್ನು ಬಲವಾಗಿ ಪ್ರತಿಪಾದಿಸಲು ಸಂಸದರೊಟ್ಟಿಗೆ ಸಮಾಲೋಚನೆ ನಡೆಸುವುದಾಗಿ ಹೇಳಿದರು.

RELATED ARTICLES

Latest News