Homeಕ್ರೀಡಾ ಸುದ್ದಿಶ್ರೀಲಂಕಾ ಪ್ರವಾಸದ ಟೆಸ್ಟ್‌ ತಂಡ ರೆಡಿ : ಜಡೇಜಾ, ಬೂಮ್ರಾ, ಸರಾಂಶ್‌ ಜೈನ್‌ ಸೇರ್ಪಡೆ

ಶ್ರೀಲಂಕಾ ಪ್ರವಾಸದ ಟೆಸ್ಟ್‌ ತಂಡ ರೆಡಿ : ಜಡೇಜಾ, ಬೂಮ್ರಾ, ಸರಾಂಶ್‌ ಜೈನ್‌ ಸೇರ್ಪಡೆ

India Test squad announcement set for Sri Lanka tour

ನವದೆಹಲಿ, ಜು. 28 (ಪಿಟಿಐ) ಶ್ರೀಲಂಕಾದಲ್ಲಿ ನಡೆಯಲಿರುವ ಎರಡು ಟೆಸ್ಟ್‌ ಪಂದ್ಯಗಳ ಸರಣಿಗೆ ಭಾರತ ತನ್ನ 15 ಸದಸ್ಯರ ತಂಡವನ್ನು ಘೋಷಿಸಿದ್ದು, ಅನುಭವಿ ರವೀಂದ್ರ ಜಡೇಜಾ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ಆಲ್‌ರೌಂಡರ್‌ ಸರಾಂಶ್‌ ಜೈನ್‌ ಅವರನ್ನು ಮೊದಲ ಬಾರಿಗೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಏಸ್‌‍ ವೇಗಿ ಜಸ್ಪ್ರೀತ್‌ ಬುಮ್ರಾ ಮತ್ತು ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್‌ ಬಿ. ಸಾಯಿ ಸುದರ್ಶನ್‌ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ ಆದರೆ ಅವರ ಲಭ್ಯತೆಯು ಬಿಸಿಸಿಐನ ಸೆಂಟರ್‌ ಆಫ್‌ ಎಕ್ಸಲೆನ್‌್ಸನಿಂದ ಫಿಟ್‌ನೆಸ್‌‍ ಕ್ಲಿಯರೆನ್‌್ಸಗೆ ಒಳಪಟ್ಟಿರುತ್ತದೆ.

ಈ ತಿಂಗಳ ಆರಂಭದಲ್ಲಿ ಇಂಗ್ಲೆಂಡ್‌ನ ವೈಟ್‌‍-ಬಾಲ್‌ ಪ್ರವಾಸದ ಸಮಯದಲ್ಲಿ ಗಾಯಗೊಂಡ ನಂತರ ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಮೊದಲ ಟೆಸ್ಟ್‌ಗೆ ಆಯ್ಕೆಗೆ ಲಭ್ಯವಿರಲಿಲ್ಲ.

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಚಕ್ರದ ಭಾಗವಾಗಿರುವ ಶ್ರೀಲಂಕಾ ಪ್ರವಾಸದಲ್ಲಿ ಭಾರತ ಎರಡು ಟೆಸ್ಟ್‌ ಪಂದ್ಯಗಳನ್ನು ಆಡಲಿದೆ. ಮೊದಲ ಟೆಸ್ಟ್‌ ಆಗಸ್ಟ್‌ 15ರಿಂದ 19 ರವರೆಗೆ ಗಾಲೆಯಲ್ಲಿ ನಡೆಯಲಿದ್ದು, ಎರಡನೇ ಟೆಸ್ಟ್‌ ಆಗಸ್ಟ್‌ 23ರಿಂದ 27 ರವರೆಗೆ ಕೊಲಂಬೊದಲ್ಲಿ (ಎಸ್‌‍ಎಸ್‌‍ಸಿ) ನಡೆಯಲಿದೆ.

ತಂಡ:
ಶುಭಮನ್‌ ಗಿಲ್‌ (ನಾಯಕ), ರಾಹುಲ್‌ (ಉಪನಾಯಕ), ಯಶಸ್ವಿ ಜೈಸ್ವಾಲ್‌‍, ರಿಷಬ್‌ ಪಂತ್‌ (ಕೀಪರ್‌), ಸಾಯಿ ಸುದರ್ಶನ್‌‍, ಧ್ರುವ್‌ ಜುರೆಲ್‌ (ಕೀಪರ್‌), ರವೀಂದ್ರ ಜಡೇಜಾ, ಕುಲದೀಪ್‌ ಯಾದವ್‌, ಮಾನವ್‌ ಸುತಾರ್‌, ಜಸ್ಪ್ರೀತ್‌ ಬುಮ್ರಾ, ಮೊಹಮದ್‌ ಸಿರಾಜ್‌‍, ಪ್ರಸಿದ್‌್ಧ ಕೃಷ್ಣ, ಗುರ್ನೂರ್‌ ಬ್ರಾರ್‌, ದೇವದತ್‌ ಪಡಿಕ್ಕಲ್‌‍, ಸರಾಂಶ್‌ ಜೈನ್‌ ಇದ್ದಾರೆ.

RELATED ARTICLES

Latest News