Homeರಾಜ್ಯಜ್ಯೂವೆಲರಿ ಶಾಪ್‌ನಲ್ಲಿ ಆಭರಣ ಎಳೆದೊಯ್ದ ಇಲಿ

ಜ್ಯೂವೆಲರಿ ಶಾಪ್‌ನಲ್ಲಿ ಆಭರಣ ಎಳೆದೊಯ್ದ ಇಲಿ

ತುಮಕೂರು,ಜು.30-ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಜ್ಯೂವೆಲರಿ ಶಾಪ್‌ ನಲ್ಲಿ ಮಾಯವಾಗಿತ್ತು ವಜ್ರ ಖಚಿತ ಆಭರಣಗಳು.. ನಗರದ ಕಾಲ್‌ ಟ್ಸೆ್‌ ಸರ್ಕಲ್‌ ಬಳಿಯ ವಿಶ್ವಾಸ್‌‍ ಜ್ಯೂವೆಲರಿ ಶಾಪ್‌ನಲ್ಲಿ 50 ಗ್ರಾಂ ಗೂ ಅಧಿಕ ವಜ್ರ ಹಾಗೂ ಚಿನ್ನಾಭರಣ ನಾಪತ್ತೆಯಾಗಿತ್ತು. ಶಟರ್‌ ಮುರಿದಿಲ್ಲಾ.. ಶಾಪ್‌ ಒಳಗೆ ಯಾರ ಪ್ರವೇಶವೂ ಇಲ್ಲ. ಹೀಗಿದ್ದರೂ ಶಾಪ್‌ ನಲ್ಲಿ ಮಾಯವಾಗಿತ್ತು 10 ಲಕ್ಷ ಮೌಲ್ಯದ ಸರಗಳು, ಉಂಗುರಗಳು.

ಸ್ಥಳೀಯ ಪೊಲೀಸ್‌‍ ಠಾಣೆಗೆ ದೂರು ನೀಡುವ ಮುನ್ನ ಸಿಸಿ ಟಿವಿ ಪರಿಶೀಲಿಸಿದಾಗ ಇಲಿಯೊಂದರ ಕತ್ಯಕ್ಕೆ ಥಂಡಾ ಹೊಡೆದ ಜ್ಯೂವೆಲರಿ ಶಾಪ್‌ ಸಿಬ್ಬಂದಿ ಹಾಗೂ ಮಾಲೀಕರು. ಸೈಲೆಂಟಾಗಿ ಎಂಟ್ರಿ ಕೊಟ್ಟು 10 ಲಕ್ಷ ಮೌಲ್ಯದ ಆಭರಣಗಳ ಮಾಯ ಮಾಡಿತ್ತು ಅದೊಂದು ಇಲಿ.

ಇಲಿಯ ಕತ್ಯ ಸಂಪೂರ್ಣ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಇಲಿ ಕತ್ಯದ ಬಳಿಕ ಅದರ ಜಾಡು ಹಿಡಿದ ಜ್ಯೂವೆಲರಿ ಶಾಪ್‌ನ ಸಿಬ್ಬಂದಿಗಳು ನಂತರ ಇಲಿ ಬಿಲ ತೋಡಿದಾಗ ವಜ್ರ ಖಚಿತ ಚಿನ್ನಾಭರಣ ಪತ್ತೆಯಾಗಿವೆ.

ಒಂದಲ್ಲಾ.. ಎರಡಲ್ಲಾ.. ಬರೊಬ್ಬರಿ 10 ರಿಂಗ್‌, 3 ಸರ ಎತ್ತಿದ್ದ ಇಲಿ. ಕೊನೆಗೂ ಆಭರಣ ಸಿಕ್ಕ ಬಳಿಕ ನಿಟ್ಟುಸಿರು ಬಿಟ್ಟ ಜ್ಯೂವೆಲರಿ ಶಾಪ್‌ ಮಾಲೀಕ ಹಾಗೂ ಸಿಬ್ಬಂದಿಗಳು.

RELATED ARTICLES
spot_img

Latest News