ಆಗ್ರಾ, ಆ.5-(ಪಿಟಿಐ) ತಾಜ್ ಮಹಲ್ ನಲ್ಲಿ ಕರ್ತವ್ಯಕ್ಕೆ ಹಾಜರಾಗಲು ಆಗಮಿಸಿದ್ದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಉದ್ಯೋಗಿಯೊಬ್ಬರು ಹಠಾತ್ತನೆ ಅಸ್ವಸ್ಥಗೊಂಡು ನಿಧನರಾಗಿದ್ದಾರೆ.ತಾಜ್ ಮಹಲ್ ಉಸ್ತುವಾರಿ ಖಲಂದರ್ ಬಿಂದ್ ಅವರ ಪ್ರಕಾರ, ಮೃತ ಕೈಲಾಶಿ (56) ಸ್ಮಾರಕದಲ್ಲಿ ನಿಯೋಜನೆಗೊಂಡಿದ್ದರು ಮತ್ತು ಆಗ್ರಾದ ಸಿಕಂದ್ರ ಪ್ರದೇಶದಲ್ಲಿ ವಾಸಿಸುತ್ತಿದ್ದರು.
ಕೈಲಾಶಿ ತಮ್ಮ ಮಧ್ಯಾಹ್ನದ ಪಾಳಿಗೆ ಸೈಕಲ್ ನಲ್ಲಿ ಬಂದು ತಾಜ್ ಮಹಲ್ ನ ಪಶ್ಚಿಮ ದ್ವಾರದ ಮೂಲಕ ಪ್ರವೇಶಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಕುಸಿದು ಬಿದ್ದು ವಾಂತಿ ಮಾಡಲು ಪ್ರಾರಂಭಿಸಿದರು ಎಂದು ಬಿಂದ್ ಹೇಳಿದರು.
ಸಹೋದ್ಯೋಗಿಗಳು ಅವರನ್ನು ಆಂಬ್ಯುಲೆನ್್ಸನಲ್ಲಿ ಖಾಸಗಿ ಆಸ್ಪತ್ರೆಗೆ ಸಾಗಿಸಿದರು, ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ಅವರು ಹೇಳಿದರು.ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅವರು ಹೇಳಿದರು.
