Homeರಾಜ್ಯಬಿಡದಿ ಟೌನ್‌ಶಿಪ್‌ ವಿರೋಧಿಸಿ ಜೆಡಿಎಸ್‌‍ ಪಾದಯಾತ್ರೆಗೆ ಬಿಜೆಪಿ ಬೆಂಬಲ

ಬಿಡದಿ ಟೌನ್‌ಶಿಪ್‌ ವಿರೋಧಿಸಿ ಜೆಡಿಎಸ್‌‍ ಪಾದಯಾತ್ರೆಗೆ ಬಿಜೆಪಿ ಬೆಂಬಲ

ಬೆಂಗಳೂರು,ಆ.8- ಬಿಡದಿ ಉಪನಗರ ಯೋಜನೆಯನ್ನು ವಿರೋಧಿಸಿ ನಾಳೆಯಿಂದ 3 ದಿನಗಳ ಕಾಲ ಜೆಡಿಎಸ್‌‍ ನಡೆಸುತ್ತಿರುವ ನಮ ಭೂಮಿ, ನಮ ಹಕ್ಕು ಹೆಸರಿನ ಪಾದ ಯಾತ್ರೆಗೆ ಬಿಜೆಪಿ ಬೆಂಬಲ ವ್ಯಕ್ತಪಡಿಸಿದೆ. ಬೈರಮಂಗಲದಿಂದ ನಗರದ ಸ್ವಾತಂತ್ರ್ಯ ಉದ್ಯಾನವನದವರೆಗೆ ಪಾದಯಾತ್ರೆ ನಡೆಸಲು ಜೆಡಿಎಸ್‌‍ ತೀರ್ಮಾನಿಸಿದ್ದು, ನಾಳೆ ಬೆಳಿಗ್ಗೆ 9 ಗಂಟೆಗೆ ಬೈರಮಂಗಲದಲ್ಲಿ ಪಾದಯಾತ್ರೆ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ, ವಿಧಾನಸಭೆ ವಿರೋಧಪಕ್ಷದ ನಾಯಕರಾದ ಆರ್‌.ಅಶೋಕ್‌ ಸೇರಿದಂತೆ ಬಿಜೆಪಿ ನಾಯಕರು ಪಾಲ್ಗೊಂಡು ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ.

ಉಭಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ರೈತರಿಗೆ ಬೆಂಬಲ ವ್ಯಕ್ತಪಡಿಸಿ ಬಿಡದಿ ಟೌನ್‌ಶಿಪ್‌ ವಿರೋಧಿಸುವ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಇಂದು ಖಾಸಗಿ ಹೋಟೆಲ್‌ನಲ್ಲಿ ನಡೆದ ಬಿಜೆಪಿ, ಜೆಡಿಎಸ್‌‍ ನಾಯಕರ ಸಭೆಯಲ್ಲಿ ರಾಜ್ಯಸರ್ಕಾರದ ವಿರುದ್ಧ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ. ಜೆಡಿಎಸ್‌‍ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುವ ಪಾದಯಾತ್ರೆಗೆ ಬಿಜೆಪಿ ಬೆಂಬಲ ವ್ಯಕ್ತಪಡಿಸಿದ್ದು, ಆ ಪಕ್ಷದ ನಾಯಕರು ಸಾಂಕೇತಿಕವಾಗಿ ಭಾಗವಹಿಸಲಿದ್ದಾರೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರು, ಬಿಡದಿ ಟೌನ್‌ಶಿಪ್‌ ವಿರೋಧಿಸಿ ನಾಳೆಯಿಂದ ಆರಂಭವಾಗುವ ಪಾದಯಾತ್ರೆಯಲ್ಲಿ ಬಿಜೆಪಿ ನಾಯಕರು ಸಾಂಕೇತಿಕವಾಗಿ ಭಾಗವಹಿಸಲಿದ್ದಾರೆ ಎಂದರು. ಬಿಡದಿ ಟೌನ್‌ಶಿಪ್‌ ಅನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ನಾವು ಬೆಂಬಲ ನೀಡಿದ್ದೇವೆ. ಈ ವಿಚಾರದ ಬಗ್ಗೆ ಅಧಿವೇಶನದಲ್ಲೂ ದನಿ ಎತ್ತಲು ನಿರ್ಧರಿಸಿದ್ದೇವೆ. ಈ ಹಿಂದೆ ಅಧಿವೇಶನದಲ್ಲಿ ಬಿಡದಿ ಟೌನ್‌ಶಿಪ್‌ ವಿಚಾರವಾಗಿ ಕಾಂಗ್ರೆಸ್‌‍ ನಾಯಕರು ಯಾವ ರೀತಿ ಮಾತನಾಡಿದ್ದರು ಎಂಬುದನ್ನು ಪ್ರಸ್ತಾಪಿಸುತ್ತೇವೆ ಎಂದು ಹೇಳಿದರು.

ಆರ್‌.ಅಶೋಕ್‌ ಮಾತನಾಡಿ, ಪಾದಯಾತ್ರೆಯನ್ನು ಜೆಡಿಎಸ್‌‍ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ರವರ ನೇತೃತ್ವದಲ್ಲಿ ನಡೆಸಲಾಗುತ್ತದೆ. ಬೆಂಗಳೂರಿನ ಹೊರವಲಯದವರೆಗೆ ಮಾತ್ರ ಪಾದಯಾತ್ರೆಗೆ ಅವಕಾಶ ನೀಡಲಾಗಿದೆ. ಇನ್ನು ಮುಂದೆ ಸರ್ಕಾರದ ವಿರುದ್ಧದ ಹೋರಾಟಗಳಲ್ಲಿ ಬಿಜೆಪಿ, ಜೆಡಿಎಸ್‌‍ ಜಂಟಿಯಾಗಿ ಹೋರಾಟ ನಡೆಸುತ್ತೇವೆ. ನಮ ಕಾರ್ಯಕರ್ತರು ಭಾಗವಹಿಸುತ್ತಾರೆ. ಸದನದಲ್ಲಿ ನೆರೆ, ಬರ, ಬಿಡದಿ ಟೌನ್‌ಶಿಪ್‌, ನೈಸ್‌‍ ಯೋಜನೆ, ಕೆಪಿಎಸ್‌‍ಸಿ ಅಕ್ರಮಗಳ ಬಗ್ಗೆಯೂ ವಿಚಾರ ಮಾಡಲಿದ್ದೇವೆ ಎಂದರು.

ಪಾದಯಾತ್ರೆ ವಿವರ : ಬೈರಮಂಗಲದಿಂದ ಆರಂಭವಾಗುವ ಪಾದಯಾತ್ರೆಯು ತಿಮೇಗೌಡನದೊಡ್ಡಿ, ವೃಷಭಾವತಿಪುರ, ಅಪ್ಪನಕುಪ್ಪೆ, ಜೋಗರದೊಡ್ಡಿ, ಮೇಡನಹಳ್ಳಿ, ಬೈರಮಂಗಲ ಕ್ರಾಸ್‌‍, ಬಿಜಿಎಸ್‌‍ ವೃತ್ತದ ಮೂಲಕ ಬಿಡದಿ ತಲುಪಲಿದೆ. ಸೋಮವಾರ ಬಿಡದಿಯಿಂದ ಎರಡನೇ ದಿನದ ಪಾದಯಾತ್ರೆ ಆರಂಭವಾಗಲಿದೆ. ಮಂಗಳವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಮಾವೇಶಗೊಳ್ಳಲಿದ್ದು, ಬಹಿರಂಗ ಸಭೆಯ ನಂತರ ಪಾದಯಾತ್ರೆಗೆ ತೆರೆ ಬೀಳಲಿದೆ ಎಂದು ಜೆಡಿಎಸ್‌‍ ಮೂಲಗಳು ತಿಳಿಸಿವೆ.

2025ರ ಜನವರಿ 25ರಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಬಿಡದಿ ಟೌನ್‌ಶಿಪ್‌ ವಿರೋಧಿಸುವ ರೈತರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಸೆ.25ರಂದು ರೈತರ ಪ್ರತಿಭಟನೆಗೆ ವಿಡಿಯೋ ಕಾನ್ಫರೆನ್‌್ಸ ಮೂಲಕ ಧೈರ್ಯತುಂಬಿದ್ದರು. ಬಿಡದಿ ಉಳಿಸಿ ಹೋರಾಟದಲ್ಲಿ ರೈತರ ಪರವಾಗಿ ನಿಖಿಲ್‌ ಕುಮಾರಸ್ವಾಮಿ ಭಾಗವಹಿಸಿದ್ದರು. ಅಲ್ಲದೆ, ಕಳೆದ ಮೇ 27ರಂದು ರೈತರೊಂದಿಗೆ ಸಂವಾದ ನಡೆಸಿ ಹೋರಾಟಕ್ಕೆ ಬೆಂಬಲ ನೀಡಿದ್ದರು.

ಜೂ.21ರಂದು ಅಂಚಿಪುರ ಗ್ರಾಮದಿಂದ ಹೊಸೂರು ಗ್ರಾಮದವರೆಗೆ ಪಾದಯಾತ್ರೆ ನಡೆಸಲಾಗಿತ್ತು. ಜತೆಗೆ ರೈತರಿಗೆ ಕಾನೂನು ಹೋರಾಟದ ಭರವಸೆಯನ್ನು ಜೆಡಿಎಸ್‌‍ ನೀಡಿದೆ.
ಸಭೆಯಲ್ಲಿ ಮೇಲನೆ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ಬಾಬು, ವಿಧಾನಪರಿಷತ್‌ ಸದಸ್ಯರಾದ ಬೋಜೇಗೌಡ, ರವಿಕುಮಾರ್‌, ಸಂಸದ ಮಲ್ಲೇಶ್‌ಬಾಬು, ಮಾಜಿ ಸಚಿವ ಸಿ.ಸಿ.ಪಾಟೀಲ್‌ ಮತ್ತಿತರರ ನಾಯಕರು ಭಾಗವಹಿಸಿದ್ದರು.

RELATED ARTICLES
spot_img

Latest News