Homeರಾಜ್ಯಬರ ಪರಿಸ್ಥಿತಿ ಕುರಿತು ಪರಿಷತ್‌ನಲ್ಲಿ ಕಾಂಗ್ರೆಸ್‌‍-ಬಿಜೆಪಿ ಸದಸ್ಯರ ವಾಕ್ಸಮರ

ಬರ ಪರಿಸ್ಥಿತಿ ಕುರಿತು ಪರಿಷತ್‌ನಲ್ಲಿ ಕಾಂಗ್ರೆಸ್‌‍-ಬಿಜೆಪಿ ಸದಸ್ಯರ ವಾಕ್ಸಮರ

ಬೆಂಗಳೂರು,ಸೆ.22- ರಾಜ್ಯದಲ್ಲಿ ತೀವ್ರಗೊಂಡಿರುವ ಬರ ಪರಿಸ್ಥಿತಿ ಕುರಿತು ವಿಧಾನ ಪರಿಷತ್ನಲ್ಲಿ ನಡೆಯುತ್ತಿರುವ ವಿಶೇಷ ಚರ್ಚೆ ಇಂದು ಆಡಳಿತಾರೂಢ ಕಾಂಗ್ರೆಸ್‌‍ ಹಾಗೂ ಬಿಜೆಪಿ ಸದಸ್ಯರ ನಡುವಿನ ತೀವ್ರ ವಾಗ್ವಾದಕ್ಕೆ ಸಾಕ್ಷಿಯಾಯಿತು. ರೈತರ ಸಮಸ್ಯೆ, ಬರ ತಾಲ್ಲೂಕುಗಳ ಘೋಷಣೆ ಹಾಗೂ ಕೇಂದ್ರದ ನೆರವು ವಿಚಾರ ಮುಂದಿಟ್ಟುಕೊಂಡು ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬರ ಚರ್ಚೆ ಆರಂಭಿಸಿದ ಛಲವಾದಿ ನಾರಾಯಣಸ್ವಾಮಿ, ರೈತರ ಕಣ್ಣೀರು ಒರೆಸುತ್ತೇವೆ, ರೈತರು ನಮ ಬೆನ್ನೆಲುಬು ಎಂದು ಭಾಷಣ ಮಾಡಿದರೆ ಮಾತ್ರ ಸಾಲದು ಎಂದು ಸರ್ಕಾರವನ್ನು ಪ್ರಶ್ನಿಸಿದ ಅವರು, ಘೋಷಣೆ ಮಾಡಿ ರೈತರನ್ನು ಶೋಷಣೆ ಮಾಡುವಂತಾಗಬಾರದು ಎಂದು ಟೀಕಿಸಿದ ಅವರು, ಕೇಂದ್ರ ಸರ್ಕಾರದ ನಿಯಮಾವಳಿಗಳ ಅನ್ವಯ ಒಂದೇ ಬಾರಿಗೆ ಬರ ತಾಲ್ಲೂಕುಗಳನ್ನು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಯಾವುದೋ ಕ್ರೀಡಾಕೂಟದಲ್ಲಿ ಗೆದ್ದು ಅರ್ಹತೆ ಪಡೆದವರಿಗೆ ಪದಕ ನೀಡಿದಂತೆ, ಒಮೊಮೆ ಒಂದೊಂದು ತಾಲ್ಲೂಕನ್ನು ಆಯ್ಕೆ ಮಾಡಿ ಬರ ತಾಲ್ಲೂಕುಗಳ ಪಟ್ಟಿಗೆ ಸೇರ್ಪಡೆ ಮಾಡುವುದು ಸರಿಯೇ? ಎಂದು ಪ್ರಶ್ನಿಸಿದ ಅವರು, ಬರ ಪರಿಸ್ಥಿತಿಯನ್ನು ಸಮಗ್ರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ದೆಹಲಿಗೆ ಹೋಗುವುದೇಕೆ? :
ರಾಜ್ಯ ಸರ್ಕಾರದ ನಾಯಕರು ಪಕ್ಷ ಹಾಗೂ ನಾಯಕತ್ವದ ವಿಚಾರಗಳಿಗೆ ಪದೇಪದೇ ದೆಹಲಿಗೆ ತೆರಳುತ್ತಾರೆ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು. ಜನರ ಸಮಸ್ಯೆಗಳನ್ನು ಹೊತ್ತು ಇದೇ ರೀತಿ ದೆಹಲಿಗೆ ಎಂದಾದರೂ ಹೋಗಿದ್ದೀರಾ? ಎಂದು ಪ್ರಶ್ನಿಸಿದ ಅವರು, ಪ್ರತಿಯೊಂದು ಸಮಸ್ಯೆಗೂ ಕೇಂದ್ರ ಸರ್ಕಾರವನ್ನು ದೂರಿ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಬರ, ಎಲ್‌ನಿನೋ ಸೇರಿದಂತೆ ಹವಾಮಾನ ಮುನ್ಸೂಚನೆಗಳು ಮೊದಲೇ ಲಭ್ಯವಿದ್ದರೂ ಸರ್ಕಾರ ಸೂಕ್ತ ಮುನ್ನೆಚ್ಚರಿಕೆ ಕೈಗೊಂಡಿಲ್ಲ ಏಕೆ ಎಂದು ಪ್ರಶ್ನಿಸಿದ ಅವರು, ಇದೀಗ ಪರಿಸ್ಥಿತಿ ಉಲ್ಬಣಗೊಂಡಿರುವ ಸಂದರ್ಭದಲ್ಲಿ ಬರ ನಿರ್ವಹಣೆ ಹಾಗೂ ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ಹೇಗೆ ನಡೆಯುತ್ತಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದರು. ಕೇವಲ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಗೆ ಹಣ ನೀಡಿದರೆ ರೈತರ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದು ಹೇಳಿದರು.

ಬರ ಚರ್ಚೆ ವೇಳೆ ಕೇಂದ್ರದ ರೈತಪರ ಯೋಜನೆಗಳು ಹಾಗೂ ಸಾಲಮನ್ನಾ ವಿಚಾರವೂ ಪ್ರಸ್ತಾಪವಾಯಿತು. ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದ ಅವಧಿಯಲ್ಲಿ 71 ಸಾವಿರ ಕೋಟಿ ಸಾಲಮನ್ನಾ ಮಾಡಲಾಗಿತ್ತು ಎಂದು ಕಾಂಗ್ರೆಸ್‌‍ ಸದಸ್ಯರು ಉಲ್ಲೇಖಿಸಿದರೆ, ಬಿಜೆಪಿ ಸದಸ್ಯರು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಖಾತೆಗಳಿಗೆ 14.40 ಲಕ್ಷ ಕೋಟಿ ಹಣ ವರ್ಗಾವಣೆ ಮಾಡಿದೆ ಎಂದು ಪ್ರತಿಪಾದಿಸಿದರು.

ಇದಕ್ಕೆ ಕಾಂಗ್ರೆಸ್‌‍ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಱಱರೈತರ ಖಾತೆಗೆ 14 ಲಕ್ಷ ಕೋಟಿ ಹಾಕಿದ್ದರೆ ದೆಹಲಿ ಗಡಿಯಲ್ಲಿ ರೈತರು ಏಕೆ ಪ್ರತಿಭಟನೆ ನಡೆಸುತ್ತಿದ್ದರು? ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್‌‍ನ ಬಿ.ಕೆ.ಹರಿಪ್ರಸಾದ್‌ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ಟೀಕೆ ಮಾಡುತ್ತಾ, ದೆಹಲಿ ರೈತ ಪ್ರತಿಭಟನೆ ವೇಳೆ ನೂರಾರು ರೈತರು ಮೃತಪಟ್ಟ ವಿಚಾರ ಪ್ರಸ್ತಾಪಿಸಿದರು. ಅವರ ಹೇಳಿಕೆಗೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಹರಿಪ್ರಸಾದ್‌ ಅವರು ಏಕವಚನ ಬಳಸಿದ್ದಾರೆ ಎಂದು ಬಿಜೆಪಿ ಸದಸ್ಯರು ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಸದನದಲ್ಲಿ ಗದ್ದಲ ಹೆಚ್ಚಾಯಿತು.

ಬಿಜೆಪಿ ಸದಸ್ಯ ಸಿ.ಟಿ. ರವಿ, ಹರಿಪ್ರಸಾದ್‌ ಅವರ ಮಾತಿನ ಶೈಲಿಯನ್ನು ಆಕ್ಷೇಪಿಸಿ ಆಚಾರವಿಲ್ಲ ನಾಲಿಗೆ ಎಂದು ತಿರುಗೇಟು ನೀಡಿದರು. ಇದರಿಂದ ಕಾಂಗ್ರೆಸ್‌‍ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ಮತ್ತಷ್ಟು ತೀವ್ರಗೊಂಡಿತು.

ಇದೇನು ಫಿಶ್‌ ಮಾರ್ಕೆಟ್ಟಾ? ಎಂದ ಸಭಾಪತಿ :
ಸದನದಲ್ಲಿ ಗದ್ದಲ ಹೆಚ್ಚಾಗುತ್ತಿದ್ದಂತೆ ಸಭಾಪತಿ ಸಲೀಂ ಅಹದ್‌ ಅವರು ಪೀಠದಿಂದ ಎದ್ದು ನಿಂತು ಸದಸ್ಯರನ್ನು ಶಾಂತಗೊಳಿಸಲು ಮುಂದಾದರು. ಸದಸ್ಯರ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಇದೇನು ಫಿಶ್‌ ಮಾರ್ಕೆಟ್ಟಾ ?ಎಂದು ಪ್ರಶ್ನಿಸಿದರು.

ಇದಕ್ಕೆ ಬಿಜೆಪಿ ಸದಸ್ಯ ಕೇಶವ ಪ್ರಸಾದ್‌ ತಿರುಗೇಟು ನೀಡಿ, ಫಿಶ್‌ ಮಾರ್ಕೆಟ್‌ ವ್ಯವಸ್ಥೆ ಮಾಡಿದ್ದು ನೀವೇ ಎಂದು ಆಕ್ಷೇಪಿಸಿದರು. ಮಾತನಾಡಲು ಅವಕಾಶ ಮಾಡಿಕೊಟ್ಟಿರುವುದರಿಂದಲೇ ಇಂತಹ ಪರಿಸ್ಥಿತಿ ಉಂಟಾಗಿದೆ ಎಂದು ಅವರು ಸಭಾಪತಿಯನ್ನು ಪ್ರಶ್ನಿಸಿದರು.

ಗದ್ದಲ ನಿಯಂತ್ರಿಸಲು ಮತ್ತೊಮೆ ಮನವಿ ಮಾಡಿದ ಸಭಾಪತಿ ಸಲೀಂ ಅಹದ್‌, ಜನ ನಮನ್ನು ನೋಡುತ್ತಿದ್ದಾರೆ. ಗೌರವದಿಂದ ವಿಚಾರ ಚರ್ಚೆ ಮಾಡಿ. ಒಬ್ಬರಿಗೊಬ್ಬರು ಅಗೌರವ ತರುವಂತೆ ನಡೆದುಕೊಳ್ಳಬೇಡಿ ಎಂದು ಸದಸ್ಯರಿಗೆ ಸೂಚಿಸಿದರು.ಬಳಿಕ ಸದಸ್ಯರು ತಮ ಸ್ಥಾನಗಳಲ್ಲಿ ಕುಳಿತುಕೊಂಡಿದ್ದು, ಸದನದ ಕಲಾಪ ಮತ್ತೆ ಸಹಜ ಸ್ಥಿತಿಗೆ ಮರಳಿತು. ನಂತರ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಮ ಬರ ಚರ್ಚೆಯನ್ನು ಮುಂದುವರಿಸಿದರು.

RELATED ARTICLES
spot_img

Latest News