Homeಮನರಂಜನೆಮೊದಲ ದಿನವೇ 155 ಕೋಟಿ ರೂ. ಗಳಿಸಿದ ‘ರಾಮಾಯಣ: ಪಾರ್ಟ್‌ ಒನ್‌’

ಮೊದಲ ದಿನವೇ 155 ಕೋಟಿ ರೂ. ಗಳಿಸಿದ ‘ರಾಮಾಯಣ: ಪಾರ್ಟ್‌ ಒನ್‌’

ನವದೆಹಲಿ, ನ. 6- ಭಾರತೀಯ ಪೌರಾಣಿಕ ಮಹಾಕಾವ್ಯ ರಾಮಾಯಣ ಆಧಾರಿತ ಬಹುನಿರೀಕ್ಷಿತ ‘ರಾಮಾಯಣ: ಪಾರ್ಟ್‌ ಒನ್‌’ ಚಿತ್ರವು ವಿಶ್ವಾದ್ಯಂತ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಆರಂಭ ಕಂಡಿದೆ. ಬಿಡುಗಡೆಯಾದ ಮೊದಲ ದಿನವೇ ಜಾಗತಿಕ ಮಟ್ಟದಲ್ಲಿ ಒಟ್ಟು 155 ಕೋಟಿ ರೂ. ಗಳಿಕೆ ಮಾಡಿದೆ ಎಂದು ಚಿತ್ರತಂಡ ತಿಳಿಸಿದೆ.

ನಿತೇಶ್‌ ತಿವಾರಿ ನಿರ್ದೇಶನದ ಈ ಚಿತ್ರ ನವೆಂಬರ್‌ 5ರಂದು ವಿಶ್ವದಾದ್ಯಂತ ತೆರೆಕಂಡಿದೆ. ಚಿತ್ರದಲ್ಲಿ ರಣಬೀರ್‌ ಕಪೂರ್‌ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್‌ ರಾವಣನಾಗಿ ಹಾಗೂ ರವಿ ದುಬೆ ಲಕ್ಷ್ಮಣನಾಗಿ ಅಭಿನಯಿಸಿದ್ದಾರೆ.

ಚಿತ್ರತಂಡದ ಬಿಡುಗಡೆ ಹೇಳಿಕೆಯ ಪ್ರಕಾರ, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ದೀಪಾವಳಿ ಹಬ್ಬಕ್ಕೂ ಮುನ್ನ ಬಿಡುಗಡೆಯಾದ ಚಿತ್ರಗಳ ಪೈಕಿ ‘ರಾಮಾಯಣ’ ಮೊದಲ ದಿನದ ಅತಿ ಹೆಚ್ಚು ಗಳಿಕೆ ದಾಖಲಿಸಿದೆ.

ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ಅದ್ಭುತ ಆರಂಭ ಕಂಡಿರುವ ‘ರಾಮಾಯಣ’ ಮೊದಲ ದಿನವೇ ವಿಶ್ವಾದ್ಯಂತ 155 ಕೋಟಿ ರೂ. ಒಟ್ಟು ಗಳಿಕೆ ಮಾಡಿದೆ. ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ ದೀಪಾವಳಿ ಪೂರ್ವದ ಅತಿ ಹೆಚ್ಚು ಮೊದಲ ದಿನದ ಗಳಿಕೆ ಮಾಡಿದ ಚಿತ್ರ ಎಂಬ ದಾಖಲೆ ನಿರ್ಮಿಸಿದೆ ಎಂದು ಚಿತ್ರತಂಡ ತಿಳಿಸಿದೆ.

ಸಾಮಾನ್ಯವಾಗಿ ದೀಪಾವಳಿ ಪೂರ್ವದ ದಿನಗಳಲ್ಲಿ ಹಬ್ಬದ ಸಿದ್ಧತೆ ಹಾಗೂ ಪ್ರಯಾಣದ ಕಾರಣದಿಂದ ಚಿತ್ರಮಂದಿರಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಆದರೂ ಬೆಳಗಿನ ಪ್ರದರ್ಶನಗಳಿಂದಲೇ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಉತ್ತಮ ಹಾಜರಾತಿ ಕಂಡುಬಂದಿದ್ದು, ಇದು ಚಿತ್ರದ ಭರ್ಜರಿ ಆರಂಭಕ್ಕೆ ಕಾರಣವಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

‘ರಾಮಾಯಣ: ಪಾರ್ಟ್‌ ಒನ್‌’ ಭಾರತೀಯ ಮಹಾಕಾವ್ಯವನ್ನು ಆಧರಿಸಿ ಎರಡು ಭಾಗಗಳಲ್ಲಿ ನಿರ್ಮಿಸಲಾಗುತ್ತಿರುವ ಸಿನಿಮಾದ ಮೊದಲ ಭಾಗವಾಗಿದೆ. ನಮಿತ್‌ ಮಲ್ಹೋತ್ರಾ ಅವರ ಪ್ರೈಮ್‌ ಫೋಕಸ್‌ ಸ್ಟುಡಿಯೋಸ್‌ ಮತ್ತು ಯಶ್‌ ಅವರ ಮಾನ್ಸ್ಟರ್‌ ಮೈಂಡ್‌ ಕ್ರಿಯೇಷನ್ಸ್‌ ಸಹಯೋಗದಲ್ಲಿ ಚಿತ್ರವನ್ನು ನಿರ್ಮಿಸಿದೆ.

RELATED ARTICLES

Latest News