Homeರಾಜ್ಯಪೆಟ್ರೋಲ್‌ನಲ್ಲಿ ಶೇ.20 ಕ್ಕಿಂತ ಹೆಚ್ಚು ಎಥೆನಾಲ್‌ ಮಿಶ್ರಣ : ಸಚಿವ ರಿಜ್ವಾನ್‌ ಅರ್ಷದ್‌ ಗಂಭೀರ ಆರೋಪ

ಪೆಟ್ರೋಲ್‌ನಲ್ಲಿ ಶೇ.20 ಕ್ಕಿಂತ ಹೆಚ್ಚು ಎಥೆನಾಲ್‌ ಮಿಶ್ರಣ : ಸಚಿವ ರಿಜ್ವಾನ್‌ ಅರ್ಷದ್‌ ಗಂಭೀರ ಆರೋಪ

ಬೆಂಗಳೂರು,ನ.6- ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಚಿವಾಲಯಗಳು ವಾಸ್ತವಾಂಶಗಳನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್‌ ಅರ್ಷದ್‌ ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಿತಿ ಮೀರಿದ ಎಥೆನಾಲ್‌ ಮಿಶ್ರಣಕ್ಕೆ ದಂಡ ವಿಧಿಸಬೇಕು. ಇ-20 ಹಾನಿ ಪರಿಹಾರ ನೀಡಿ ಸ್ಥಾಪನೆ ಮಾಡಬೇಕು ಎಂದು ಅವರು ಕೇಂದ್ರಸರ್ಕಾರವನ್ನು ಒತ್ತಾಯಿಸಿದರು. ದೇಶಾದ್ಯಂತ ಪೆಟ್ರೋಲ್‌ನಲ್ಲಿರುವ ಎಥೆನಾಲ್‌ ಮಿಶ್ರಣದ ಪ್ರಮಾಣವನ್ನು ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಿ ಮತ್ತು ಗ್ರಾಹಕರಿಗೆ ಇಂಧನದ ಆಯ್ಕೆಯ ಅವಕಾಶಗಳನ್ನು ನೀಡಬೇಕು ಎಂದರು.

ಐಒಸಿಎಲ್‌ನ 14 ಸ್ಯಾಂಪಲ್‌ಗಳಲ್ಲಿ ಶೇ.31.2 ರಷ್ಟು ಎಚ್‌ಪಿಸಿಎಲ್‌ನ ಸ್ಯಾಂಪಲ್‌ಗಳಲ್ಲಿ ಶೇ.30.5 ರಷ್ಟು, ಶೆಲ್‌ ಸ್ಯಾಂಪಲ್‌ನಲ್ಲಿ ಶೇ. 13.5 ರಷ್ಟು, ಎಂಆರ್‌ಪಿಎಲ್‌ನಲ್ಲಿ ಶೇ.19.5 ರಷ್ಟು, ನಯಾರದಲ್ಲಿ ಶೇ.20 ರಷ್ಟು ಎಥೆನಾಲ್‌ ಅಂಶ ಇರುವುದು ಕಂಡುಬಂದಿದೆ. ಎಥೆನಾಲ್‌ನಿಂದ ವಾಹನ ಹಾಳಾಗುವುದು ಜನರಿಗೆ ಹೇಗೆ ಗೊತ್ತಾಗುತ್ತದೆ ಎಂದು ಅವರು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ತೈಲ ಕಂಪನಿಗಳಿಗೆ ಕಡಿವಾಣ ಹಾಕಬೇಕು. ಆ ಕಂಪನಿಗಳು ಲಾಭಾಂಶವನ್ನು ಏಕೆ ತೋರಿಸುತ್ತಿಲ್ಲ. ವೋಟ್‌ ಚೋರಿ ಆಯಿತು. ಈಗ ಪೆಟ್ರೋಲ್‌ ಚೋರಿ ಸರದಿ ಎಂದ ಅವರು, ವಾರಂಟಿ ನೀಡಲು ವಾಹನಗಳ ಕಂಪನಿಗಳು, ವಿಮಾ ಕಂಪನಿಗಳಿಗೆ ಸೂಚಿಸಬೇಕು. ವಿಮಾ ಕಂಪನಿಗಳ ನಿಯಮ ಮಾರ್ಪಾಡು ಮಾಡಬೇಕು ಎಂದು ಅವರು ಆಗ್ರಹಿಸಿದರು.

ಇ-20 ಪ್ರಕಟಿಸಿದರೆ ಹೆಚ್ಚು ಮಾರಾಟಕ್ಕೆ ಅವಕಾಶವಿಲ್ಲ, ಕೇಂದ್ರ ಸರ್ಕಾರ ಈ ಬಗ್ಗೆ ಸಮಿತಿ ರಚನೆ ಮಾಡಬೇಕು. ಆಟೋ, ಕಾರು ವಿಮೆಗಾಗಿ ಎಷ್ಟು ಆದಾಯ ಸಂಗ್ರಹವಾಗುತ್ತಿದೆ. ಜನರಿಗಾಗುವ ನಷ್ಟವನ್ನು ತುಂಬಿಕೊಡಬೇಕು ಎಂದು ಹೇಳಿದರು.ಎಥೆನಾಲ್‌ ಯುನಿಟ್‌್ಸ ರೆಡ್‌ಝೋನ್‌ನಲ್ಲಿದೆ ಎಂದು ಕೇಂದ್ರ ಸರ್ಕಾರ ವರದಿ ಕೊಟ್ಟಿದೆ. ಮೂಲ ಸೌಕರ್ಯಗಳನ್ನು ಉನ್ನತ ದರ್ಜೆಗೆ ಹೆಚ್ಚಿಸಬೇಕಲ್ಲವೇ? ಎಂದು ಪ್ರಶ್ನಿಸಿದರು.

RELATED ARTICLES

Latest News