Homeರಾಷ್ಟ್ರೀಯಪ್ರಥಮ ಬಾರಿಗೆ ಕೆಂಪುಕೋಟೆಯಲ್ಲಿ ಮೊಳಗಲಿದೆ ವಂದೇ ಮಾತರಂ

ಪ್ರಥಮ ಬಾರಿಗೆ ಕೆಂಪುಕೋಟೆಯಲ್ಲಿ ಮೊಳಗಲಿದೆ ವಂದೇ ಮಾತರಂ

‘Vande Mataram’ To Be Sung At Red Fort For The First Time On Independence Day

ನವದೆಹಲಿ,ಆ.11- ಕೆಂಪು ಕೋಟೆಯ ಆವರಣದಲ್ಲಿ ಆ. 15ರಂದು ನಡೆಯಲಿ ರುವ 80ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಂದೇ ಮಾತರಂ ಗೀತೆಯನ್ನು ಮೊದಲ ಬಾರಿಗೆ ಅಧಿಕೃತವಾಗಿ ಹಾಡಲಾಗುವುದು ಎಂದು ರಕ್ಷಣಾ ಕಾರ್ಯದರ್ಶಿ ರಾಜೇಶ್‌ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ವಂದೇ ಮಾತರಂ ಬಳಿಕ ರಾಷ್ಟ್ರಗೀತೆ ಜನಗಣ ಮನಕ್ಕೆ ಸ್ಥಾನ ಇರಲಿದೆ ಎಂದು ವರದಿಯಾಗಿದೆ.ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಕೆಂಪುಕೋಟೆಗೆ ಆಗಮಿಸಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಸಾಂಪ್ರದಾಯಿಕ ಸ್ವಾತಂತ್ರ್ಯ ದಿನದ ಭಾಷಣ ಮಾಡಲಿದ್ದಾರೆ. ಈ ವರ್ಷದ ಸಮಾರಂಭದ ಪ್ರಮುಖ ಸಂದೇಶ ಯುವ ಶಕ್ತಿ ಆಗಿದ್ದು, 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ವಿಕ್ಷಿತ್‌ ಭಾರತ ಗುರಿಯಲ್ಲಿ ಯುವಜನರ ಪಾತ್ರವನ್ನು ಮುನ್ನೆಲೆಗೆ ತರುವ ಉದ್ದೇಶ ಸರ್ಕಾರದ್ದಾಗಿದೆ.

ಯುವಕರ ಸಾಧನೆ ಮತ್ತು ಕೊಡುಗೆಯನ್ನು ಸ್ವಾತಂತ್ರ್ಯ ದಿನಾಚರಣೆಯ ಕೇಂದ್ರ ವಿಷಯವನ್ನಾಗಿಸುವ ನಿರ್ಧಾರವು ಜಂತರ್‌ ಮಂತರ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಕೈಗೊಂಡಿದ್ದಲ್ಲ ಎಂದು ರಾಜೇಶ್‌ಕುಮಾರ್‌ ಸ್ಪಷ್ಟಪಡಿಸಿದ್ದಾರೆ. ಯುವಜನರು ದೇಶದ ಅಭಿವೃದ್ಧಿ ಪಯಣದಲ್ಲಿ ನಿರ್ಣಾಯಕ ಶಕ್ತಿಯಾಗಿದ್ದು, ಅವರು ದೇಶದ ನಿರ್ಮಾಣಕ್ಕೆ ಕೊಡುಗೆ ನೀಡುವುದರ ಜೊತೆಗೆ ಅದರ ಭವಿಷ್ಯದ ಫಲಾನುಭವಿಗಳೂ ಆಗಿದ್ದಾರೆ ಎಂಬುದೇ ಈ ವರ್ಷದ ಱಯುವ ಶಕ್ತಿ ಪರಿಕಲ್ಪನೆಯ ಮೂಲ ಉದ್ದೇಶ ಎಂದು ಅವರು ವಿವರಿಸಿದ್ದಾರೆ. ಹೀಗಾಗಿ, ಸಮಾರಂಭದ ಯುವಕೇಂದ್ರಿತ ರೂಪುರೇಷೆಯನ್ನು ಇತ್ತೀಚಿನ ವಿದ್ಯಾರ್ಥಿ ಚಳವಳಿಗಳಿಗೆ ಪ್ರತಿಕ್ರಿಯೆಯಾಗಿ ನೋಡಬಾರದು ಎಂಬುದು ಸರ್ಕಾರದ ನಿಲುವಾಗಿದೆ.

ರಾಷ್ಟ್ರೀಯ ಗೀತೆಯ ಸ್ಥಾನ
ವಂದೇ ಮಾತರಂಗೆ ಸ್ವತಂತ್ರ ಭಾರತದ ಸಂವಿಧಾನ ರಚನಾ ಪ್ರಕ್ರಿಯೆಯಲ್ಲೂ ವಿಶೇಷ ಗೌರವ ದೊರಕಿತು. 1950ರ ಜನವರಿ 24ರಂದು ಸಂವಿಧಾನ ಸಭೆಯ ಅಂತಿಮ ಸಭೆಯಲ್ಲಿ ಅಧ್ಯಕ್ಷ ಡಾ. ರಾಜೇಂದ್ರ ಪ್ರಸಾದ್‌ ಅವರು ಜನ ಗಣ ಮನ ರಾಷ್ಟ್ರಗೀತೆ ಆಗಿದ್ದು, ವಂದೇ ಮಾತರಂಗೆ ಸಮಾನ ಗೌರವ ಮತ್ತು ಸ್ಥಾನಮಾನ ನೀಡಲಾಗುವುದು ಎಂದು ಘೋಷಿಸಿದ್ದರು.

ಇಲ್ಲಿ ಒಂದು ಪ್ರಮುಖ ವ್ಯತ್ಯಾಸವನ್ನು ಗಮನಿಸಬೇಕು, ವಂದೇ ಮಾತರಂ ಭಾರತದ ರಾಷ್ಟ್ರೀಯ ಗೀತೆ, ಆದರೆ ಜನ ಗಣ ಮನ ಭಾರತದ ರಾಷ್ಟ್ರಗೀತೆ. ಎರಡಕ್ಕೂ ಸ್ವತಂತ್ರ ಭಾರತದ ರಾಷ್ಟ್ರೀಯ ಜೀವನದಲ್ಲಿ ಅತ್ಯಂತ ಮಹತ್ವದ ಸ್ಥಾನವಿದೆ.

ಕೆಂಪುಕೋಟೆಯಲ್ಲಿ ಯುವ ಶಕ್ತಿಯ ಪ್ರದರ್ಶನ
ಆಗಸ್ಟ್‌ 15ರ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಯುವಕರಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಅಂತಾರಾಷ್ಟ್ರೀಯ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತ ಒಲಿಂಪಿಯಾಡ್‌ಗಳಲ್ಲಿ 2026ರಲ್ಲಿ ಪದಕ ಗೆದ್ದ 19 ವಿದ್ಯಾರ್ಥಿಗಳನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷದ ಸಮಾರಂಭಕ್ಕೆ ವಿವಿಧ ಕ್ಷೇತ್ರಗಳ ಸಾಧಕರು, ಸಾಮಾನ್ಯ ನಾಗರಿಕರು ಹಾಗೂ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವವರ ನ್ನೊಳಗೊಂಡ ಸುಮಾರು 5,000 ವಿಶೇಷ ಅತಿಥಿಗಳನ್ನು ಆಹ್ವಾನಿಸುವ ಪರಂಪರೆಯೂ ಮುಂದುವರಿಯಲಿದೆ.

ಈ ವರ್ಷದ ಕಾರ್ಯಕ್ರಮದಲ್ಲಿ ಭಾರತೀಯ ವಾಯುಪಡೆಯ ಒ-17 ಹೆಲಿಕಾಪ್ಟರ್‌ ವಂದೇ ಮಾತರಂನ 150 ವರ್ಷಗಳ ಸರಣೆಯನ್ನು ಸಾರುವ ಬ್ಯಾನರ್‌ ಹೊತ್ತು ಹಾರಲಿದೆ. ಕೆಂಪುಕೋಟೆಯಲ್ಲಿ ನೆರೆದಿರುವ ಜನರ ಮೇಲೆ ಹೂವಿನ ದಳಗಳನ್ನು ಸುರಿಸುವ ಕಾರ್ಯಕ್ರಮವೂ ಇರಲಿದೆ. ಈ ಮೂಲಕ ಸ್ವಾತಂತ್ರ್ಯ ಹೋರಾಟದ ಪರಂಪರೆ, ಆಧುನಿಕ ಭಾರತದ ಸಾಧನೆ ಮತ್ತು ಭವಿಷ್ಯದ ಯುವಶಕ್ತಿಯನ್ನು ಒಂದೇ ವೇದಿಕೆಯಲ್ಲಿ ಪ್ರತಿಬಿಂಬಿಸುವ ಪ್ರಯತ್ನ ಮಾಡಲಾಗಿದೆ.

ಸೇವಾ ತೀರ್ಥದಿಂದ ಸರೋವರಗಳವರೆಗೆ
ಈ ವರ್ಷದ ಆಹ್ವಾನ ಪತ್ರಿಕೆಗಳಲ್ಲಿ ಸೇವಾ ತೀರ್ಥ ಪರಿಕಲ್ಪನೆಗೂ ಸ್ಥಾನ ನೀಡಲಾಗಿದೆ. ಇದು ನಾಗರಿಕರ ಸೇವೆಯನ್ನು ಕೇಂದ್ರವಾಗಿಟ್ಟುಕೊಂಡ ಆಡಳಿತದ ಸಂದೇಶವನ್ನು ಪ್ರತಿಬಿಂಬಿಸುತ್ತದೆ. 2026ರಲ್ಲಿ ಹೊಸ ಪ್ರಧಾನಮಂತ್ರಿ ಕಚೇರಿ ಸಂಕೀರ್ಣಕ್ಕೂ ಸೇವಾ ತೀರ್ಥ ಎಂಬ ಹೆಸರು ಬಳಕೆಗೆ ಬಂದಿದೆ. ವಿರೋಧ ಪಕ್ಷದ ನಾಯಕನಿಗೂ ಆಹ್ವಾನ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರಿಗೂ ಸ್ವಾತಂತ್ರ್ಯ ದಿನಾಚರಣೆಗೆ ಆಹ್ವಾನ ನೀಡಲಾಗಿದೆ. ಅಧಿಕೃತ ಟೇಬಲ್‌ ಆಫ್‌ ಪ್ರೆಸಿಡೆನ್ಸ್ ಪ್ರಕಾರ ಅವರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ರಕ್ಷಣಾ ಕಾರ್ಯದರ್ಶಿ ತಿಳಿಸಿದ್ದಾರೆ.

RELATED ARTICLES
spot_img

Latest News