Homeಕ್ರೀಡಾ ಸುದ್ದಿಏಷ್ಯನ್‌ ಗೇಮ್ಸ್ : ಪದಕವಿಲ್ಲದೆ ನಿರಾಸೆ ಮೂಡಿಸಿದ ಪಿ.ವಿ.ಸಿಂಧು

ಏಷ್ಯನ್‌ ಗೇಮ್ಸ್ : ಪದಕವಿಲ್ಲದೆ ನಿರಾಸೆ ಮೂಡಿಸಿದ ಪಿ.ವಿ.ಸಿಂಧು

ನಾಗೋಯಾ, ಸೆ.27- ಏಷ್ಯನ್‌ ಗೇಮ್ಸ್ ನ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಕಂಡ ಒಲಿಂಪಿಕ್‌್ಸ ಪದಕ ವಿಜೇತೆ ಪಿ.ವಿ.ಸಿಂಧು ಅವರು ಪದಕ ಗೆಲ್ಲುವ ಆಸೆಯನ್ನು ಕೈಚೆಲ್ಲಿದ್ದಾರೆ.ವಿಶ್ವ ನಂ.4 ಬ್ಯಾಡಿಂಟನ್‌ ತಾರೆ, ಚೀನಾದ ಚೆನ್‌ ಯು ಫೀ ವಿರುದ್ಧ ನಡೆದ ಕ್ವಾರ್ಟರ್‌ಫೈನಲ್‌ನ ಮೊದಲ ಸುತ್ತಿನಲ್ಲಿ ಉತ್ತಮ ಹೋರಾಟ ತೋರಿದ ಪಿ.ವಿ.ಸಿಂಧು 21-11 ಸೆಟ್‌ಗಳಿಂದ ಗೆಲುವು ಸಾಧಿಸಿದರು. ಆದರೆ ಆರಂಭಿಕ ಸೆಟ್‌ನಲ್ಲಿ ದೊರೆತ ಗೆಲು ವನ್ನುಉಳಿದೆರಡು ಸುತ್ತಿನಲ್ಲಿ ಉಳಿಸಿಕೊಳ್ಳಲು ವಿಫಲರಾದ ಸಿಂಧು 18-21, 10-21 ಅಂತರದಿಂದ ಸೋಲು ಕಂಡು ನಿರಾಸೆ ಮೂಡಿಸಿದ್ದಾರೆ.

25 ಮೀ. ಮಹಿಳಾ ಪ್ರಿಸಿಷನ್‌ನಲ್ಲಿ ಭಾರತಕ್ಕೆ ಕಂಚು

ನಾಗೋಯಾ, ಸೆ.27- ಏಷ್ಯನ್‌ ಕ್ರೀಡಾಕೂಟದ ಮಹಿಳೆ ಯರ 25 ಮೀಟರ್‌ ಪಿಸ್ತೂಲ್‌ ಪ್ರಿಸಿಷನ್‌ ವಿಭಾಗದಲ್ಲಿ ಭಾರತವು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.ಅರ್ಹತಾ ಸುತ್ತಿನಲ್ಲಿ ಭಾರತದ ಮಹಿಳಾ ಶೂಟರ್‌ಗಳಾದ ಮನುಭಾಕರ್‌ (287 ಅಂಕ), ಇಶಾಸಿಂಗ್‌ (290 ಅಂಕ) ಮತ್ತು ರಾಹಿ ಸರ್ಬೋಬತ್‌ (287 ಅಂಕ) ಗಳಿಸಿದರು.ಉತ್ತಮ ಗುರಿಯೊಂದಿಗೆ ಅದ್ಭುತ ಪ್ರದರ್ಶನ ತೋರಿದ ದಕ್ಷಿಣ ಕೊರಿಯಾ ಹಾಗೂ ಚೀನಾದ ಮಹಿಳಾ ಶೂಟರ್‌ಗಳು ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದರು.

ಏಷ್ಯನ್‌ ಗೇಮ್ಸೌ ಪದಕ 200ರ ಗಡಿಯತ್ತ ಚೀನಾ

ನಾಗೋಯಾ, ಸೆ.27- ಏಷ್ಯನ್‌ ಕ್ರೀಡಾಕೂಟದಲ್ಲಿ ಪ್ರಾಬಲ್ಯ ಸಾಧಿಸಿರುವ ಚೀನಾ ಜಪಾನ್‌ನಲ್ಲಿ ಜರುಗುತ್ತಿರುವ ಪ್ರಸಕ್ತ ಕ್ರೀಡಾಕೂಟದಲ್ಲೂ ಉತ್ತಮ ಪ್ರದರ್ಶನದೊಂದಿಗೆ ಅಂಕಪಟ್ಟಿಯಲ್ಲಿ ಟಾಪ್‌ 1 ಸ್ಥಾನವನ್ನು ಆಲಂಕರಿಸಿದೆ. ಬೆಳ್ಳಿ ಹಾಗೂ ಕಂಚಿಗಿಂತ ಬಂಗಾರದ ಬೇಟೆಯನ್ನೇ ಗುರಿಯಾಗಿಸಿರುವ ಚೀನಾದ ಅಥ್ಲೀಟ್ಸ್ ಗಳು ಹಾಗೂ ಆಟಗಾರರು ಇದುವರೆಗೂ 113 ಸ್ವರ್ಣ ಪದಕಗಳನ್ನು ಗೆದ್ದು ಬೀಗಿದೆ.

44 ಬೆಳ್ಳಿ ಹಾಗೂ 33 ಕಂಚಿನ ಪದಕಗಳೊಂದಿಗೆ ಇದುವರೆಗೂ 190 ಪದಕಗಳನ್ನು ಗೆದ್ದಿರುವ ಚೀನಾ 200 ಪದಕಗಳ ಗಡಿ ದಾಟುವತ್ತ ಚಿತ್ತ ಹರಿಸಿದೆ. ಜಪಾನ್‌ (33 ಚಿನ್ನ, 53 ಬೆಳ್ಳಿ, 52 ಕಂಚು- 138) 2ನೇ ಸ್ಥಾನದಲ್ಲಿದ್ದರೆ, ದಕ್ಷಿಣ ಕೊರಿಯಾ (76), ಉಜ್ಬೇಕಿಸ್ತಾನ್‌ (35 ), ಕಜಾಕಿಸ್ತಾನ್‌ (37) ಪದಕಗಳೊಂದಿಗೆ ಟಾಪ್‌ 5 ಸ್ಥಾನದಲ್ಲಿ ಗುರುತಿಸಿಕೊಂಡಿದೆ.

ಭಾರತವು ಇದುವರೆಗೂ 4 ಚಿನ್ನ, 12 ಬೆಳ್ಳಿ ಹಾಗೂ ಕಂಚು ಪದಕಗಳೊಂದಿಗೆ ಒಟ್ಟಾರೆ 30 ಪದಕಗಳನ್ನು ಜಯಿಸಿ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ನಿನ್ನೆ ಒಂದೇ ದಿನ ಭಾರತ ಕಬಡ್ಡಿ (ಪುರುಷ, ಮಹಿಳಾ) ಯಲ್ಲಿ 2 ಸ್ವರ್ಣ ಪದಕ ಸೇರಿದಂತೆ 7 ಪದಕಗಳನ್ನು ಗೆದ್ದು ಸಂಭ್ರಮಿಸಿತ್ತು.

ಅರ್ಚರಿ ಸೆಮಿಫೈನಲ್‌ಗೆ ಭಾರತ ಪ್ರವೇಶ
ನಾಗೋಯಾ, ಸೆ.27- ಪದಕಗಳ ಭರವಸೆ ಮೂಡಿ ಸಿರುವ ಭಾರತೀಯ ಬಿಲ್ಲು ಗಾರರು ಏಷ್ಯನ್‌ ಗೇಮ್ಸೌನ ಸೆಮಿಫೈನಲ್‌ ಹಾದಿ ತಲುಪಿದೆ. ಇಂದಿಲ್ಲಿ ನಡೆದ ಪುರುಷ ಹಾಗೂ ಮಹಿಳೆಯರ ಅರ್ಚರಿ ರಿಕವರಿ ಕ್ವಾರ್ಟರ್‌ ಫೈನಲ್‌ ಪಂದ್ಯಗಳಲ್ಲಿ ಭಾರತ ಆರ್ಚರಿ ವಿಭಾಗ ಕ್ಲೀನ್‌ ಸ್ವೀಪ್‌ ಸಾಧಿಸಿದೆ.

ಪುರುಷರ ಆರ್ಚರಿ ತಂಡವು ಚೀನಾದ ವಿರುದ್ಧ 5-1 ಅಂತರದಿಂದ ಗೆಲುವು ಸಾಧಿಸಿದರೆ, ಮಹಿಳಾ ತಂಡವು ಚೀನಾದ ವಿರುದ್ಧವೇ 6-0 ಅಂತರದಿಂದ ಜಯ ಕಂಡಿದೆ.ಪುರುಷ ಹಾಗೂ ಮಹಿಳೆಯರ ಮಿಕ್ಸೆಡ್ ರಿಕರ್ವ್‌ ಸೆಮಿಫೈನಲ್‌ ಪಂದ್ಯವು ಅಕ್ಟೋಬರ್‌ 2 ರಂದು ನಡೆಯಲಿದ್ದು ಪದಕದ ಆಸೆ ಮೂಡಿಸಿದೆ.

ಬೆಳ್ಳಿಗೆ ತೃಪ್ತಿಪಟ್ಟ ಅಭಯ್‌
ನಾಗೋಯಾ, ಸೆ.27- ಸ್ಕ್ವಾಷ್‌ನ ಫೈನಲ್‌ ಸುತ್ತು ತಲುಪಿ ಬಂಗಾರ ಪದಕದ ಭರವಸೆ ಮೂಡಿಸಿದ್ದ ಭಾರತದ ಅಭಯ್‌ ಸಿಂಗ್‌ ಅವರು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಫೈನಲ್‌ ಪಂದ್ಯದಲ್ಲಿ ಮಲೇಷಿಯಾದ ಬಲಿಷ್ಠ ಸ್ಕ್ವಾಷ್‌ ಆಟಗಾರ ಎನಂಗ್ ಈನ್‌ ಯೋನ್‌ ಅವರ ಎದುರು ಯಾವುದೇ ಕ್ಷಣದಲ್ಲೂ ಉತ್ತಮ ಹೋರಾಟ ತೋರುವಲ್ಲಿ ಅಭಯ್‌ ಅವರು ಎಡವಿದರು.

ಮೊದಲ ಸುತ್ತಿನಲ್ಲಿ ಆರಂಭಿಕ ಕ್ಷಣದಲ್ಲಿ ಹಿನ್ನಡೆ ಅನುಭವಿಸಿದರೂ ನಂತರ ಉತ್ತಮ ಹೋರಾಟ ತೋರಿದ ಅಭಯ್‌ ಅವರು ಯೋನ್‌ ಅವರ ಅನುಭವ ಹಾಗೂ ಕೌಶಲ್ಯತೆ ಎದುರು ಎಡವಿ 11-9 ಅಂತರದಿಂದ ಸೋಲು ಕಂಡರು. ಮೊದಲ ಸುತ್ತಿನ ಸೋಲಿನಿಂದ ಕಂಗೆಟ್ಟಿದ್ದ ಅಭಯ್‌ ನಂತರದ ಸೆಟ್‌ಗಳಲ್ಲೂ ಉತ್ತಮ ಹೋರಾಟ ತೋರುವಲ್ಲಿ ಎಡವಿ 11-5 ಹಾಗೂ 11-5 ರಿಂದ ಸೋಲು ಕಂಡು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡರು.ಮಲೇಷಿಯಾದ ಎನ್‌್ಗ ಈನ್‌ ಯೋನ್‌ ಅವರು 2002, 2006ರ ಏಷ್ಯನ್‌ ಕ್ರೀಡಾಕೂಟದಲ್ಲೂ ಚಿನ್ನದ ಪದಕ ಗೆದ್ದಿದ್ದರು. ಮಲೇಷಿಯಾ ಅವರೇ ಆದ ಒಂಗ್‌ ಬೆಂಗ್‌ ಹೀ ಅವರ 3 ಏಷ್ಯನ್‌ ಗೇಮ್ಸೌ ಬಂಗಾರದ ಪದಕದ ಸಾಧನೆಯನ್ನು ಯೋನ್‌ ಅವರು ಸರಿಗಟ್ಟಿದ್ದಾರೆ.

RELATED ARTICLES
spot_img

Latest News