Homeರಾಜಕೀಯಆರ್‌ಎಸ್‌‍ಎಸ್‌‍ ನಿಯಂತ್ರಿಸದಿದ್ದರೆ ಸಮಾಜ ಹಾಗೂ ದೇಶಕ್ಕೆ ಹಾನಿ : ಸಚಿವ ಯತೀಂದ್ರ ಸಿದ್ದರಾಮಯ್ಯ

ಆರ್‌ಎಸ್‌‍ಎಸ್‌‍ ನಿಯಂತ್ರಿಸದಿದ್ದರೆ ಸಮಾಜ ಹಾಗೂ ದೇಶಕ್ಕೆ ಹಾನಿ : ಸಚಿವ ಯತೀಂದ್ರ ಸಿದ್ದರಾಮಯ್ಯ

RSS will be harmful to society and country if not controlled: Yathindra

ಮೈಸೂರು, ಆ. 17-ಆರ್‌ಎಸ್‌‍ಎಸ್‌‍ ನಿಯಂತ್ರಿಸದೆ ಬಿಟ್ಟರೆ ಸಮಾಜ ಹಾಗೂ ದೇಶಕ್ಕೆ ಹಾನಿಯಾಗಲಿದೆ. ಆರ್‌ಎಸ್‌‍ಎಸ್‌‍ ಒಂದು ಸಾವಿರ ತಲೆಗಳ ವಿಷ ಸರ್ಪವಿದ್ದಂತೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಜಾತಿ ವ್ಯವಸ್ಥೆ ನಿರ್ಮೂಲನೆ ಯಾಗಬೇಕು ಎಂದು ನಂಬುವ ಹಾಗೂ ಈ ಬಗ್ಗೆ ಜಾಗೃತರಾಗಿರುವ ಪ್ರತಿಯೊಬ್ಬರೂ ಆರ್‌ಎಸ್‌‍ಎಸ್‌‍ನ ಮನಸ್ಥಿತಿಯನ್ನು ಖಂಡಿಸಿ ಪ್ರತಿಭಟನೆ ನಡೆಸಬೇಕು ಎಂದು ಕರೆ ನೀಡಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆರ್‌ಎಸ್‌‍ಎಸ್‌‍, ಬಿಜೆಪಿ ಹಾಗೂ ಶ್ರೀರಾಮಸೇನೆ ಕಾಂಗ್ರೆಸ್‌‍ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯಬಾರದು. ಎಲ್ಲ ಕಾಂಗ್ರೆಸ್‌‍ ಕಾರ್ಯಕರ್ತರು ಪ್ರತಿಭಟನೆಯನ್ನು ಮುಂದುವರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

RELATED ARTICLES
spot_img

Latest News