ನಿತ್ಯ ನೀತಿ : ಪ್ರತಿಯೊಂದು ಜನ್ಮದಲ್ಲೂ ಬೇರೆ ಬೇರೆ ತಾಯಿ ಇರುತ್ತಾರೆ, ಎಲ್ಲ ಜನ್ಮಕ್ಕೂ ಸಲ್ಲುವ ಏಕೈಕ ತಾಯಿ ಎಂದರೆ ಜಗನ್ಮಾತೆ, ಈಕೆಯೇ ಎಲ್ಲರ ತಾಯಿ.
ಪಂಚಾಂಗ : ಶುಕ್ರವಾರ, 02-10-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ಶರದ / ಮಾಸ: ಭಾದ್ರಪದ / ಪಕ್ಷ: ಕೃಷ್ಣ / ತಿಥಿ: ಷಷ್ಠಿ / ನಕ್ಷತ್ರ: ಮೃಗಶಿರಾ / ಯೋಗ: ವೃತೀಪಾತ / ಕರಣ: ವಿಷ್ಟಿ
ಸೂರ್ಯೋದಯ – ಬೆ.6.10
ಸೂರ್ಯಾಸ್ತ – 06.11
ರಾಹುಕಾಲ – 10.30-12.00
ಯಮಗಂಡ ಕಾಲ – 3.00- 4.30
ಗುಳಿಕ ಕಾಲ – 7.30-9.00
ರಾಶಿಭವಿಷ್ಯ :
ಮೇಷ: ಉತ್ತಮ ಹೆಸರು, ಕೀರ್ತಿ, ಮಾನ- ಸನ್ಮಾನಗಳು ಲಭಿಸಲಿವೆ. ಉತ್ತಮ ದಿನ.
ವೃಷಭ: ಕಟ್ಟಡ ವ್ಯವಹಾರಕ್ಕೆ ಸಂಬಂಧಿಸಿದ ಜನರಿಗೆ ಬಹಳ ಅನುಕೂಲಕರವಾದ ದಿನವಾಗಿದೆ.
ಮಿಥುನ: ಶತ್ರುಗಳ ಕಾಟ ಅಧಿಕವಿರುತ್ತದೆ. ಆದರೆ ಅವರು ನಿಮ್ಮನ್ನು ಏನೂ ಮಾಡಲು ಆಗುವುದಿಲ್ಲ.
ಕಟಕ: ಆರ್ಥಿಕವಾಗಿ ನೀವು ಅಂದುಕೊಂಡದ್ದಕ್ಕಿಂತ ಹೆಚ್ಚು ನಷ್ಟ ಉಂಟಾಗಬಹುದು.
ಸಿಂಹ: ಸರ್ಕಾರಿ ವಲಯದಲ್ಲಿ ಕೆಲಸ ಮಾಡುವವರಿಗೆ ಅತ್ಯುತ್ತಮವಾದ ದಿನ.
ಕನ್ಯಾ: ವೃತ್ತಿಪರರು ವೃತ್ತಿಜೀವನದಲ್ಲಿ ಸಕಾರಾತ್ಮಕ ಫಲಿತಾಂಶ ಪಡೆಯಲು ಗಮನ ಹರಿಸಬೇಕು.
ತುಲಾ: ಕಚೇರಿಯಲ್ಲಿ ಉನ್ನತ ಅಧಿಕಾರಿಯೊಂದಿಗೆ ವಾದ- ವಿವಾದ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ.
ವೃಶ್ಚಿಕ: ವ್ಯಾಪಾರಿಗಳು ಅಥವಾ ವೃತ್ತಿಯಲ್ಲಿರುವ ವರು ಅಧಿಕೃತ ಪ್ರಯಾಣ ಕೈಗೊಳ್ಳಬೇಕಾಗುತ್ತದೆ.
ಧನುಸ್ಸು: ಮಕ್ಕಳಿಂದ ಬೇಸರ ಉಂಟಾಗಲಿದೆ. ಅನಾರೋಗ್ಯ ಸಮಸ್ಯೆ ಕಾಡಬಹುದು.
ಮಕರ: ಯಾವುದೇ ನಿರ್ಧಾರವನ್ನು ಅವಸರದಲ್ಲಿ ತೆಗೆದು ಕೊಳ್ಳದಿರಿ.ಪ್ರೇಮ ಸಂಬಂಧದಲ್ಲಿ ಸೂಕ್ಷ್ಮತೆ ಇರಲಿದೆ.
ಕುಂಭ: ಹಿಡಿದ ಕೆಲಸ ಗಳನ್ನು ಒಂದೇ ಬಾರಿಗೆ ಪೂರ್ಣಗೊಳಿಸುವುದು ಕಷ್ಟಸಾಧ್ಯವಾಗಲಿದೆ.
ಮೀನ: ಪ್ರಯಾಣದಲ್ಲಿ ಸಕಾರಾತ್ಮಕ ವಾತಾ ವರಣವಿರಲಿದೆ. ಮಾನಸಿಕ ನೆಮ್ಮದಿ ಸಿಗುವುದು.
