Homeರಾಜ್ಯಸೆ.13ಕ್ಕೆ ಮೈಸೂರಿಗೆ ಆಗಮಿಸಲಿದೆ ಗಜಪಡೆಯ 2ನೇ ತಂಡ ತಂಡ

ಸೆ.13ಕ್ಕೆ ಮೈಸೂರಿಗೆ ಆಗಮಿಸಲಿದೆ ಗಜಪಡೆಯ 2ನೇ ತಂಡ ತಂಡ

ಮೈಸೂರು, ಸೆ.9- ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಎರಡನೇ ತಂಡದ ಗಜಪಡೆ ಇದೇ 13ರಂದು ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಲಿದೆ.

ಈಗಾಗಲೇ ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಮೊದಲ ತಂಡದ ಗಜಪಡೆಗೆ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ತಾಲೀಮು ನಡೆಸಲಾಗುತ್ತಿದೆ. ಎರಡನೇ ತಂಡದ ಆನೆಗಳ ಆಗಮನ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ದುಬಾರೆ ಆನೆ ಶಿಬಿರದಿಂದ ಸುಗ್ರೀವ, ರಾಮಾಪುರ ಆನೆ ಶಿಬಿರದಿಂದ ಚೈತ್ಯ ಹಾಗೂ ದೊಡ್ಡಅರವೆಯ ಶಿಬಿರದಿಂದ ರೂಪ ಆನೆಗಳು ಮೈಸೂರಿಗೆ ಆಗಮಿಸಲಿವೆ.

ಈ ಪೈಕಿ ಸುಗ್ರೀವ ಮೊದಲ ತಂಡದೊಂದಿಗೇ ಮೈಸೂರಿಗೆ ಆಗಮಿಸಬೇಕಿತ್ತು. ಆದರೆ ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿದ್ದ ಕಾಡಾನೆಗಳ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಅದರ ಆಗಮನವನ್ನು ಎರಡನೇ ತಂಡಕ್ಕೆ ಮುಂದೂಡಲಾಗಿತ್ತು. ಸುಗ್ರೀವನ ಬದಲಾಗಿ ಶ್ರೀಕಂಠನನ್ನು ಅರಮನೆಗೆ ಕರೆತರಲಾಗಿತ್ತು.

ಅರಮನೆ ಆವರಣದಲ್ಲಿ ಮೊದಲ ತಂಡದ ಗಜಪಡೆಗೆ ಬೆಳಿಗ್ಗೆ ಮತ್ತು ಸಂಜೆ ತಾಲೀಮು ನಡೆಸಲಾಗುತ್ತಿದ್ದು, ಎಲ್ಲ ಆನೆಗಳು ಗಾಂಭೀರ್ಯದಿಂದ ತಾಲೀಮಿನಲ್ಲಿ ಪಾಲ್ಗೊಂಡು ಸಾರ್ವಜನಿಕರ ಗಮನ ಸೆಳೆಯುತ್ತಿವೆ.

ಮಹೇಂದ್ರನಿಗೆ ಭಾರ ಹೊರುವ ತಾಲೀಮು

ಜಂಬೂಸವಾರಿಯಲ್ಲಿ ಅಂಬಾರಿ ಹೊರುವ ಜವಾಬ್ದಾರಿ ವಹಿಸಲಿರುವ ಮಹೇಂದ್ರ ಆನೆ ಭಾರ ಹೊರುವ ತಾಲೀಮಿಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾನೆ. ಮಹೇಂದ್ರನಿಗೆ ಲಕ್ಷ್ಮಿ ಮತ್ತು ಕಾವೇರಿ ಸಾಥ್ ನೀಡುತ್ತಿವೆ. ಮಹೇಂದ್ರ ಯಾವುದೇ ಅಳುಕಿಲ್ಲದೆ ಗಾಂಭೀರ್ಯದಿಂದ ಮುಂದೆ ಸಾಗುತ್ತಿದ್ದರೆ, ಏಕಲವ್ಯ, ಗೋಪಿ, ಪ್ರಶಾಂತ, ಶ್ರೀರಾಮ ಹಾಗೂ ಧನಂಜಯ ಆನೆಗಳು ಶಿಸ್ತಿನ ಸಿಪಾಯಿಗಳಂತೆ ಹಿಂಬಾಲಿಸುತ್ತಿವೆ. ಗಜಪಡೆಯ ತಾಲೀಮನ್ನು ವೀಕ್ಷಿಸಲು ಅರಮನೆಗೆ ಆಗಮಿಸುತ್ತಿರುವ ಪ್ರವಾಸಿಗರು ಆನೆಗಳ ಶಿಸ್ತು ಹಾಗೂ ಗಾಂಭೀರ್ಯವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

RELATED ARTICLES
spot_img

Latest News