Homeರಾಜ್ಯಮಹಿಳಾ ಅಭ್ಯರ್ಥಿಗಳ ದುರ್ಬಳಕೆ: ಕೆಪಿಎಸ್‌‍ಸಿ ವಿರುದ್ಧ ಮತ್ತೊಂದು ಆರೋಪ

ಮಹಿಳಾ ಅಭ್ಯರ್ಥಿಗಳ ದುರ್ಬಳಕೆ: ಕೆಪಿಎಸ್‌‍ಸಿ ವಿರುದ್ಧ ಮತ್ತೊಂದು ಆರೋಪ

ಬೆಂಗಳೂರು, ಸೆ.1- ಕೆಪಿಎಸ್‌‍ಸಿ ನೇಮಕಾತಿಯಲ್ಲಿ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದ್ದು, ಮಹಿಳಾ ಉದ್ಯೋಗ ಆಕಾಂಕ್ಷಿಗಳನ್ನು ಅಧಿಕಾರಿಗಳು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ಕಾಂತರಾಜು ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ತಮ್ಮ ಆರೋಪಕ್ಕೆ ಸಮರ್ಪಕ ದಾಖಲೆಗಳನ್ನು ಹೊಂದಿರುವುದಾಗಿ ಹೇಳಿದ್ದಾರೆ. ಕರ್ನಾಟಕ ಲೋಕಾಸೇವಾ ಆಯೋಗ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳಿಗಾಗಿ ರೆಸಾರ್ಟ್‌ನಲ್ಲಿ ತರಬೇತಿ ನೀಡಲಾಗಿತ್ತು ಎಂಬ ಗಂಭೀರ ಆರೋಪದ ನಡುವೆಯೇ, ವಿದೇಶ ಪ್ರವಾಸ, ಐಶಾರಾಮಿ ಹೋಟೆಲ್‌ಗಳ ವಾಸ್ತವ್ಯದ ಸ್ಫೋಟಕ ಆರೋಪ ಮಾಡಿದ್ದಾರೆ.

ಈ ಹಿಂದೆ ವಿದೇಶ ಪ್ರವಾಸ ನಡೆದಿತ್ತು. ಇತ್ತೀಚಿನ ನೇಮಕಾತಿಗಳಲ್ಲಿ ಕೆಪಿಎಸ್‌‍ಸಿಯ ಅಧಿಕಾರಿಗಳು ಹೆಣ್ಣುಮಕ್ಕಳನ್ನು ದುರುಪಯೋಗಪಡಿಸಿಕೊಂಡು ಸರ್ಕಾರಿ ಹುದ್ದೆಗಳು ದೊರೆಯುವಂತೆ ಮಾಡಿದ್ದಾರೆ ಎಂದು ಹೇಳಿದರು. ಹೆಣ್ಣು ಮಕ್ಕಳನ್ನು ಹೋಟೆಲ್‌ಗೆ ಕರೆದುಕೊಂಡು ಹೋಗಿ ದುರ್ಬಳಕೆ ಮಾಡಿಕೊಂಡು ಅಲ್ಲಿಯೇ ಪರೀಕ್ಷೆ ಬರೆಸಿರುವ ಬಗ್ಗೆ ತಮ ಬಳಿ ದಾಖಲೆಗಳಿವೆ ಎಂದು ಹೇಳಿದರು.

ಈ ರೀತಿ ಅಧಿಕಾರಿಗಳ ಕಿರುಕುಳವನ್ನು ಅನುಭವಿಸಿದವರು ತಮ ಸ್ನೇಹಿತೆಯರ ಬಳಿ ಹೇಳಿಕೊಂಡಿದ್ದಾರೆ. ಕೆಪಿಎಸ್‌‍ಸಿ ಹಗರಣಗಳ ತನಿಖೆ ನಡೆಸುತ್ತಿರುವ ಸಿಐಡಿ ಮತ್ತು ಇಡಿ ಸಂಸ್ಥೆಗಳು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಸತ್ಯಾಂಶ ಹೊರ ಬರಬೇಕಾದರೆ ಸಿಬಿಐ ತನಿಖೆ ಅಗತ್ಯ ಎಂದು ಅವರು ಪ್ರತಿಪಾದಿಸಿದ್ದಾರೆ. ತಮ್ಮ ಸಂಸ್ಥೆ ತಪ್ಪಿತಸ್ಥರ ವಿರುದ್ಧ ಕ್ರಮಗಳಾಗುವವರೆಗೂ ಹೋರಾಟ ಮುಂದುವರೆಸಲಿದೆ ಎಂದು ಹೇಳಿದ್ದಾರೆ.

RELATED ARTICLES
spot_img

Latest News