Homeರಾಜ್ಯಪ್ರಿಯಾಂಕ್‌ ಖರ್ಗೆ ವಿರುದ್ಧ ಜೆಡಿಎಸ್‌‍ ಪ್ರತಿಭಟನೆ

ಪ್ರಿಯಾಂಕ್‌ ಖರ್ಗೆ ವಿರುದ್ಧ ಜೆಡಿಎಸ್‌‍ ಪ್ರತಿಭಟನೆ

ಬೆಂಗಳೂರು, ಸೆ.1- ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಜೆಡಿಎಸ್‌‍ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜೆಡಿಎಸ್‌‍ ಕಾರ್ಯಕರ್ತರನ್ನು ಟಾರ್ಗೆಟ್‌ ಮಾಡಲಾಗುತ್ತಿದೆ ಮತ್ತು ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು. ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹಾಗೂ ಜೆಡಿಎಸ್‌‍ ಮುಖಂಡ ರಮೇಶ್‌ ಗೌಡ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿ ಬಳಿ ಪ್ರತಿಭಟನೆ ನಡೆಯಿತು. ಜೆಡಿಎಸ್‌‍ ಕಾರ್ಯಕರ್ತರ ವಿರುದ್ಧ ನಡೆಯುತ್ತಿರುವ ಕ್ರಮಗಳನ್ನು ಖಂಡಿಸಿ ಕಾಂಗ್ರೆಸ್‌‍ ಕಚೇರಿಗೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ಮುಂದಾದರು.

ಪ್ರತಿಭಟನಾಕಾರರು ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕುವ ಮುನ್ನವೇ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಅಖಂಡ ಶ್ರೀನಿವಾಸ ಮೂರ್ತಿ, ರಮೇಶ್‌ ಗೌಡ ಸೇರಿದಂತೆ 50ಕ್ಕೂ ಹೆಚ್ಚು ಜೆಡಿಎಸ್‌‍ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.

ತಿಹಾರ್‌ ಜೈಲಿಗೆ ಸೋನಿಯಾ, ರಾಹುಲ್‌ ಹೋಗಿದ್ದೇಕೆ?
ಬೆಂಗಳೂರು, ಸೆ.1- ಕಾಂಗ್ರೆಸ್‌‍ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರು ಮತ್ತು ಅವರ ಪುತ್ರ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರಿಬ್ಬರೂ ಯಾರನ್ನು ಭೇಟಿಯಾಗಲು ತಿಹಾರ್‌ ಜೈಲಿಗೆ ಹೋಗಿದ್ದರು? ಎಂದು ಜೆಡಿಎಸ್‌‍ ಪ್ರಶ್ನಿಸಿದೆ. ಈ ಸಂಬಂಧ ಎಕ್‌್ಸನಲ್ಲಿ ಪೊಸ್ಟ್‌ ಮಾಡಿರುವ ಜೆಡಿಎಸ್‌‍, ಸ್ವಾತಂತ್ರ್ಯ ಹೋರಾಟಗಾರರನ್ನೋ ಅಥವಾ ರಾಜ್ಯ ಮತ್ತು ರಾಷ್ಟ್ರಕ್ಕೆ ಸಮರ್ಪಣೆ ಮಾಡಿಕೊಂಡ ಮಹಾಪುರುಷನನ್ನೋ?ಎಂದು ವ್ಯಂಗ್ಯವಾಡಿದೆ. ಇದಕ್ಕೆ ಉತ್ತರಿಸಪ್ಪ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನು ಜೆಡಿಎಸ್‌‍ ಪ್ರಶ್ನಿಸಿದೆ.

RELATED ARTICLES
spot_img

Latest News