ಹುಬ್ಬಳ್ಳಿ, ಸೆ.1- ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಹಿನ್ನೆಲೆಯಲ್ಲಿ ಡಾ.ರವಿಕಾಂತೇಗೌಡರವರಿಗೆ ನಗರದ ಪೊಲೀಸ್ ಅಧೀಕ್ಷಕರ ಕಚೇರಿಯ ಸಭಾಭವನದಲ್ಲಿ ಗೌರವಪೂರ್ಣ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಡಾ.ರವಿಕಾಂತೇಗೌಡ ಅವರಿಗೆ ಸನ್ಮಾನಿಸಿ ಅವರ ದೀರ್ಘಕಾಲದ ಕರ್ತವ್ಯನಿಷ್ಠೆ, ಶಿಸ್ತು, ಧೈರ್ಯ ಹಾಗೂ ಜನಸೇವೆಯನ್ನು ಸರಿಸಲಾಯಿತು. ಜೊತೆಗೆ ಅವರ ನಿವೃತ್ತಿ ಜೀವನವು ಆರೋಗ್ಯ, ನೆಮದಿ ಮತ್ತು ಯಶಸ್ಸಿನಿಂದ ಕೂಡಿರಲಿ ಎಂದು ಹೃದಯಪೂರ್ವಕವಾಗಿ ಶುಭ ಹಾರೈಸಲಾಯಿತು.
ಕಾನೂನು ಮತ್ತು ಸುವ್ಯವಸ್ಥೆಯ ರಕ್ಷಣೆಯಲ್ಲಿ ದಕ್ಷತೆ, ಶಿಸ್ತು, ಪ್ರಾಮಾಣಿಕತೆ ಹಾಗೂ ದಿಟ್ಟ ನಿರ್ಧಾರಗಳಿಗೆ ಹೆಸರಾದ ಡಾ. ರವಿಕಾಂತೇಗೌಡರವರ ಸೇವೆ ನಿಜಕ್ಕೂ ಸರಣೀಯ. ಸುಮಾರು ಎರಡು ದಶಕಗಳ ಹಿಂದೆ ಹುಬ್ಬಳ್ಳಿಯ ಕಮರಿಪೇಟೆಯಲ್ಲಿ ಅಕ್ರಮ ಸಾರಾಯಿ ದಂಧೆಯನ್ನು ಮಟ್ಟಹಾಕುವಲ್ಲಿ ಅವರು ದಿಟ್ಟ ಪಾತ್ರ ವಹಿಸಿದ್ದರು. ಅವರ ಕರ್ತವ್ಯನಿಷ್ಠೆ ಮತ್ತು ಜನರ ಸುರಕ್ಷತೆಯ ಬಗೆಗಿನ ಬದ್ಧತೆಗೆ ಒಂದು ಉತ್ತಮ ಉದಾಹರಣೆಯಾಗಿದೆ.
ಜನರ ಜೀವ, ಆಸ್ತಿ ಮತ್ತು ನೆಮದಿಯ ರಕ್ಷಣೆಯನ್ನು ತಮ ಕರ್ತವ್ಯವೆಂದು ಭಾವಿಸಿ ಸೇವೆ ಸಲ್ಲಿಸಿದ ಅವರಂತಹ ಅಧಿಕಾರಿಗಳ ಸೇವೆ ಪೊಲೀಸ್ ಇಲಾಖೆಯ ಇತಿಹಾಸದಲ್ಲಿ ಸದಾ ಸರಣೀಯವಾಗಿರುತ್ತದೆ.
ಈ ಸಂದರ್ಭದಲ್ಲಿ ಮುಖಂಡರಾದ ರಾಜಶೇಖರ ಮೆಣಸಿನಕಾಯಿ, ಮೇಘರಾಜ ಕೂಲಿ, ಉದ್ಯಮಿ ರಾಘವೇಂದ್ರ ಮೇಲಗೇರಿ, ಯುವ ನಾಯಕ ನಾಗರಾಜ ಕ್ಯಾಬಳ್ಳಿ ಸೇರಿದಂತೆ ಗಣ್ಯರು ಹಾಗೂ ಹಿತೈಷಿಗಳು ಗೌರವ ಸಲ್ಲಿಸಿ ಶುಭ ಹಾರೈಸಿದರು.
