Homeಇದೀಗ ಬಂದ ಸುದ್ದಿಮನೆ ಬಾಡಿಗೆ ಪಡೆದು ಹುಕ್ಕಾ ಬಾರ್‌ : ಸಿವಿಲ್‌ ಎಂಜಿನಿಯರ್‌ ಸೇರಿ ಇಬ್ಬರ ಬಂಧನ

ಮನೆ ಬಾಡಿಗೆ ಪಡೆದು ಹುಕ್ಕಾ ಬಾರ್‌ : ಸಿವಿಲ್‌ ಎಂಜಿನಿಯರ್‌ ಸೇರಿ ಇಬ್ಬರ ಬಂಧನ

ಬೆಂಗಳೂರು,ಸೆ.1- ಮನೆಯನ್ನು ಬಾಡಿಗೆಗೆ ಪಡೆದುಕೊಂಡು ಹುಕ್ಕಾ ಬಾರ್‌ ನಡೆಸುತ್ತಿದ್ದ ಎಂಜಿನಿಯರ್‌ ಸೇರಿದಂತೆ ಇಬ್ಬರನ್ನು ಕುಂಬಳಗೋಡು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಸವೇಶ್ವರನಗರದ ಮೀನಾಕ್ಷಿನಗರ ನಿವಾಸಿ ಸಿವಿಲ್‌ ಎಂಜಿನಿಯರ್‌ ಅಜಿತ್‌ ಬಿ ನಾಯಕ್‌ (28) ಮತ್ತು ಹಾಸನ ಮೂಲದ ವರುಣ (25) ಬಂಧಿತ ಆರೋಪಿಗಳು. ದೊಮಲೂರು ಇಜಿಎಲ್‌ನಲ್ಲಿ ಸೀನಿಯರ್‌ ಅನಾಲಿಸ್ಟ್‌ ವೃತ್ತಿ ಮಾಡುತ್ತಿದ್ದ ಅಜಿತ್‌ ಬಿ ನಾಯಕ್‌ ಹಾಗೂ ಬಿಬಿಎ ಪದವೀಧರನಾಗಿದ್ದು, ಸರ್ವೀಸ್‌‍ಬಾಯ್‌ ಕೆಲಸ ಮಾಡುತ್ತಿದ್ದ ವರುಣ ಇವರಿಬ್ಬರೂ ಸೇರಿಕೊಂಡು ಹುಕ್ಕಾ ಬಾರ್‌ ತೆರೆದಿರುವುದು ವಿಚಾರಣೆಯಿಂದ ಗೊತ್ತಾಗಿದೆ.

ಬಂಧಿತರಿಂದ 450 ರೂ. ನಗದು, 5 ಹುಕ್ಕಾ ಪಾಟ್‌ಗಳು, 3 ಹುಕ್ಕಾ ಪೈಪ್‌ಗಳು, 2 ಬಾಕ್‌್ಸ ಹುಕ್ಕಾ ಪಾಟ್‌ಗಳು, ಬಳಸಿದ ವಿವಿಧ ಬಗೆಯ 3 ಹುಕ್ಕಾ ಫ್ಲೈವರ್‌ಗಳು, ಚಾರ್‌ಕೋಲ್‌ಗಳು, 3 ಫಾಯಿಲ್‌ಶೀಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಕೆಂಚನಪುರ ಗ್ರಾಮದಲ್ಲಿ ಭಾಗ್ಯಮ ಎಂಬುವವರಿಗೆ ಸೇರಿದ ಮನೆಯೊಂದನ್ನು ಬಾಡಿಗೆಗೆ ಪಡೆದು ಇವರಿಬ್ಬರೂ ನಿಷೇಧಿತ ಹುಕ್ಕಾ ಬಾರ್‌ ತೆರೆದು ಗ್ರಾಹಕರಿಗೆ ಸರಬರಾಜು ಮಾಡುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆ ಹಾಕಿ ಈ ಮನೆಯ ಮೇಲೆ ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಅಲ್ಲದೆ ಮನೆ ಮಾಲೀಕರ ಪಾತ್ರದ ಬಗ್ಗೆಯೂ ತನಿಖೆ ಕೈಗೊಂಡಿದ್ದಾರೆ. ಈ ಕಾರ್ಯಾಚರಣೆಯನ್ನು ನೈಋತ್ಯ ವಿಭಾಗದ ಉಪ ಪೊಲೀಸ್‌‍ ಆಯುಕ್ತರಾದ ಅನಿತಾ ಬಿ ಹದ್ದಣ್ಣನವರ್‌ ಅವರ ಮಾರ್ಗದರ್ಶನದಲ್ಲಿ ಕೆಂಗೇರಿ ಉಪವಿಭಾಗದ ಸಹಾಯಕ ಪೊಲೀಸ್‌‍ ಆಯುಕ್ತರಾದ ಸತ್ಯವತಿ ಅವರ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ ಕುಮಾರ ಹಾಗೂ ಸಿಬ್ಬಂದಿ ತಂಡ ಈ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ.

RELATED ARTICLES
spot_img

Latest News