ಮುಂಬೈ,ಸೆ.1- ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳ ನೂತನ ಕರಡು ಮತದಾರರ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದ್ದು, ರಾಜ್ಯದ ಚುನಾವಣಾ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ.
ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಬಳಿಕ ಹೊರಬಂದಿರುವ ಈ ಕರಡು ಪಟ್ಟಿಯಲ್ಲಿ ಬರೋಬ್ಬರಿ 2,06,88,487 ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ. ಇದು ಹಿಂದಿನ ಒಟ್ಟು ಮತದಾರರ ಸಂಖ್ಯೆಯ ಶೇಕಡಾ 21.14 ರಷ್ಟು ಎಂದು ತಿಳಿದುಬಂದಿದೆ.
7,71,65,562 (ಹಿಂದಿನ 9,78,54,049 ರಲ್ಲಿ ಶೇ. 78.86 ರಷ್ಟು ಮಾತ್ರ). ಲಿಂಗವಾರು ವಿಂಗಡಣೆ: 3,95,89,905 ಪುರುಷರು, 3,75,72,570 ಮಹಿಳೆಯರು ಹಾಗೂ 3,087 ತೃತೀಯ ಲಿಂಗಿಗಳು ಪಟ್ಟಿಯಲ್ಲಿದ್ದಾರೆ. ಪುಣೆ (28.6 ಲಕ್ಷ), ಥಾಣೆ (28.5 ಲಕ್ಷ), ಮುಂಬೈ ಸಬರ್ಬನ್ (26.5 ಲಕ್ಷ) ಮತ್ತು ನಾಗ್ಪುರ (14.43 ಲಕ್ಷ). ಮನೆಗಳಲ್ಲಿ ಗೈರು ಹಾಜರಿರುವುದು, ವಿಳಾಸ ಬದಲಾಯಿಸಿರುವುದು, ಮರಣಹೊಂದಿರುವುದು, ನಕಲಿ ಅಥವಾ ಬಹು ನೋಂದಣಿಗಳು ಹಾಗೂ ಗಣತಿ ನಮೂನೆಗಳನ್ನು ಸಂಗ್ರಹಿಸಲು ಅಥವಾ ಭರ್ತಿ ಮಾಡಿ ಸಲ್ಲಿಸಲು ಸಾಧ್ಯವಾಗದೆ ಇರುವುದು ಈ ದೊಡ್ಡ ಮಟ್ಟದ ಕಡಿತಕ್ಕೆ ಕಾರಣವೆಂದು ಚುನಾವಣಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕರಡು ಪಟ್ಟಿಯಿಂದ ಹೆಸರು ಕಳೆದುಕೊಂಡಿರುವ ಸಾರ್ವಜನಿಕರು ಆಗಸ್ಟ್ 31 ರಿಂದ ಸೆಪ್ಟೆಂಬರ್ 30 ರವರೆಗೆ ತಮ ಹಕ್ಕು ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ನಮೂನೆ 6: ಹೊಸ ಸೇರ್ಪಡೆಗೆ ನಮೂನೆ 7: ಆಕ್ಷೇಪಣೆಗಳಿಗೆ ನಮೂನೆ 8: ಹೆಸರು, ವಿಳಾಸ ಅಥವಾ ವಯಸ್ಸಿನ ತಿದ್ದುಪಡಿಗೆಎಲ್ಲಾ ಪ್ರಕ್ರಿಯೆಗಳು ಮುಕ್ತಾಯಗೊಂಡು ನವೆಂಬರ್ 4 ರಂದು ಅಂತಿಮ ಮತದಾರರ ಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗಲಿದೆ.
