Homeರಾಜ್ಯಕಸ್ತೂರಿ ರಂಗನ್‌ ವರದಿ ಒಪ್ಪಲ್ಲ, ಭೂಮಿ ಬಿಟ್ಟುಕೊಡುವ ಮಾತೇ ಇಲ್ಲ : ಸಿಎಂ

ಕಸ್ತೂರಿ ರಂಗನ್‌ ವರದಿ ಒಪ್ಪಲ್ಲ, ಭೂಮಿ ಬಿಟ್ಟುಕೊಡುವ ಮಾತೇ ಇಲ್ಲ : ಸಿಎಂ

ಬೆಂಗಳೂರು,ಸೆ.21-ರಾಜಕಾರಣವನ್ನು ಬದಿಗಿಟ್ಟು ರೈತರ ಹಿತಕಾಪಾಡಲು ಕಸ್ತೂರಿ ರಂಗನ್‌ ನೇತೃತ್ವದ ಉನ್ನತ ಮಟ್ಟದ ಕಾರ್ಯನಿರತ ತಂಡ ನೀಡಿರುವ ವರದಿಯ ಬಗ್ಗೆ ವಿಶೇಷ ಚರ್ಚೆ ಮಾಡೋಣ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿಧಾನಸಭೆಯಲ್ಲಿಂದು ತಿಳಿಸಿದರು.

ವಿಶೇಷ ಚರ್ಚೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯಮಂತ್ರಿ , ಪ್ರತಿಯೊಬ್ಬ ರೈತರ ರಕ್ಷಣೆ ಮಾಡಬೇಕೆಂಬುದು ನನ್ನ ಬದ್ಧತೆ ಯಾಗಿದೆ. ಕೇವಲ ಅರಣ್ಯದಂಚಿನಲ್ಲಿರುವ ರೈತರ ಪರಿಸ್ಥಿತಿ ಅಷ್ಟೇ ಅಲ್ಲ ನಾಡಿನ ರೈತರ ಹಿತ ಕಾಪಾಡಬೇಕಿದೆ. ಕೇಂದ್ರಕ್ಕೆ ರಾಜ್ಯದ ನಿಲುವುದನ್ನು ತಿಳಿಸಬೇಕಾಗಿರುವುದರಿಂದ ಈ ವಿಶೇಷ ಚರ್ಚೆಯನ್ನು ನಡೆಸಬೇಕಿದೆ ಎಂದರು.

ಕಳೆದ ಅಧಿವೇಶನದಲ್ಲಿ 10 ದಿನಗಳ ಸಮಯವಿದ್ದರೂ ಪ್ರತಿಪಕ್ಷಗಳು ಬಳಸಿಕೊಳ್ಳಲಿಲ್ಲ. ಕಸ್ತೂರಿ ರಂಗನ್‌ ವರದಿ, ಬರಗಾಲ, ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅಧಿವೇಶನವನ್ನು ಕರೆಯಲಾಗಿದೆ. ಹುಟ್ಟಿದಾಗ ಭೂಮಿಗೆ ಬರುತ್ತೇವೆ. ಸತ್ತಾಗಲೂ ಭೂಮಿಗೆ ಹೋಗುತ್ತೇವೆ. ಹೀಗಾಗಿ ಭೂಮಿ ಬಿಟ್ಟುಕೊಡುವ ಮಾತೇ ಇಲ್ಲ ಎಂದರು.

ಕಸ್ತೂರಿ ರಂಗನ್‌ ವರದಿ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಜನಾಕ್ರೋಶವಿದೆ. ಆ ಭಾಗದ ಜನರ ಸಮಸ್ಯೆಯನ್ನು ಆಲಿಸಿದ್ದೇನೆ. ಸಾವಿರಾರು ಅರ್ಜಿಗಳು ಬಂದಿವೆ. ಅನೇಕ ಸಲಹೆಗಳನ್ನು ನೀಡಿದ್ದಾರೆ. ಪಶ್ಚಿಮ ಘಟ್ಟದ ಬಡ ಜನರ ಹಿತವನ್ನು ಕಾಪಾಡಬೇಕಾಗಿದೆ ಎಂದು ತಿಳಿಸಿದರು. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಆರು ನದಿಗಳು ಹುಟ್ಟುತ್ತವೆ. 10 ಜಿಲ್ಲೆಯ ಜನರ ಬದುಕಿಗೆ ಕಸ್ತೂರಿ ರಂಗನ್‌ ವರದಿಯಿಂದ ಮಾರಕವಾಗಲಿದೆ ಎಂಬ ಭಯದ ವಾತಾವರಣ ಉಂಟಾಗಿದೆ.

19, 252 ಲಕ್ಷ ಚದರ ಕಿ.ಮೀ ವ್ಯಾಪ್ತಿಯಲ್ಲಿದೆ. 960 ಕಿ.ಮೀ ಜಾಗವನ್ನು ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿಸಲಾಗಿದೆ. ಹೀಗಾಗಿ ವರದಿಯನ್ನು ತಿರಸ್ಕರಿಸಬೇಕೆಂಬ ಒತ್ತಾಯ ತೀವ್ರವಾಗಿದೆ ಎಂದರು.

ಉನ್ನತ ಮಟ್ಟದ ತಾಂತ್ರಿಕ ಸಮಿತಿ ರಚಿಸಬೇಕು. ಕೇರಳ ಮಾದರಿ ಇರಬೇಕು. ಪರಿಸರ ಸೂಕ್ಷ್ಮವಲಯ ತೆಗೆಯಬೇಕು, ಬಫರ್‌ ಜೋನ್‌ ವಲಯ ಕಾಡಿನ ಗಡಿಯೊಳಗಿರಬೇಕು. ಕಸ್ತೂರಿ ರಂಗನ್‌ ವರದಿ ತಿರಸ್ಕರಿಸಿ ಎಂಬ ಒತ್ತಾಯ ಬಂದಿವೆ. ನಮ ಆಸ್ತಿ ನಮ ಬದುಕಿಗೆ ತೊಂದರೆ ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ವರದಿಯಿಂದಾಗಿ ಬಗರ್‌ ಹುಕುಂ ಅರ್ಜಿಗಳು ಹಾಗೂ ಅಕ್ರಮ ಸಕ್ರಮ ಅನುಷ್ಠಾನಕ್ಕೂ ತೊಂದರೆಯಾಗಿದೆ ಎಂದರು.

ಕೇಂದ್ರ ಸರ್ಕಾರದ ಬಳಿಗೆ ಸರ್ವ ಪಕ್ಷಗಳ ನಿಯೋಗ ಕರೆದೊಯ್ಯಬೇಕು. ಸಂವಿಧಾನದ 371ನೇ ವಿಧಿಯಡಿ ಸೇರಿಸಿ ವಿಶೇಷ ಸ್ಥಾನಮಾನ ನೀಡಬೇಕು ಎಂಬಂತಹ ಹಲವು ಸಲಹೆಗಳು ಬಂದಿವೆ ಎಂದು ಹೇಳಿದರು. ಕೇವಲ ಇದರ ಬಗ್ಗೆ ಸಂಪುಟಲ್ಲಿ ತೀರ್ಮಾನ ಮಾಡಬಾರದೆಂಬ ಉದ್ದೇಶದಿಂದ ರೈತರು, ಸಾರ್ವಜನಿಕರ ಅಭಿಪ್ರಾಯಗಳನ್ನು ಪಡೆದು ವಿಶೇಷ ಚರ್ಚೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.

ಕಳೆದ ಅಧಿವೇಶನದಲ್ಲಿ ನಾನು ಬಾಯಿ ತೆಗೆಯಲು ಪ್ರತಿಪಕ್ಷಗಳು ಬಿಡಲಿಲ್ಲ. ಹೀಗಾಗಿ ಎರಡು ದಿನ ಅಧಿವೇಶನ ಮೊಟಕುಗೊಂಡಿತ್ತು. ಸೆ.27ರೊಳಗೆ ರಾಜ್ಯದ ಅಭಿಪ್ರಾಯವನ್ನು ಕೇಂದ್ರಕ್ಕೆ ತಿಳಿಸಬೇಕಿದೆ. ರಾಜ್ಯದ ನಾಲ್ಕು ಭಾಗಗಳಲ್ಲಿ ಬರ ಪರಿಸ್ಥಿತಿ ಬಗ್ಗೆ ಚರ್ಚೆ ಮಾಡಲಾಗಿದೆ. ಈಗಾಗಲೇ 124 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಪ್ರತಿಪಕ್ಷಗಳ ತೀವ್ರ ಒತ್ತಾಯದಿಂದಾಗಿ ನಿರಪರಾಧಿಯಾಗಿದ್ದ ಇವರ ರಾಜೀನಾಮೆಯನ್ನು ಅನಿವಾರ್ಯವಾಗಿ ಪಡೆಯಬೇಕಾಗಿತ್ತು. ಪಾದಯಾತ್ರೆ, ಪ್ರತಿಭಟನೆ ಮಾಡಲು ನಮ ತಕರಾರು ಇಲ್ಲ. ಕಸ್ತೂರಿ ರಂಗನ್‌ ವರದಿಯಿಂದ ಆಗುತ್ತಿರುವ ತೊಂದರೆಯನ್ನು ಕಣ್ನಾರೆ ಕಂಡಿದ್ದೇನೆ. ಜನಾಭಿಪ್ರಾಯ ಪಡೆದಿದ್ದೇನೆ ಎಂದರು.

ಅಧಿಕಾರಿಗಳಿಗಿಂತ ರೈತರೇ ಚೆನ್ನಾಗಿ ಅಧ್ಯಯನ ಮಾಡಿದ್ದಾರೆ:
ಬಾಳೆಹೊನ್ನೂರು, ಸಕಲೇಶಪುರ ಮೊದಲಾದ ಕಡೆ ರೈತರ ಅಭಿಪ್ರಾಯ ಸಂಗ್ರಹಿಸಿದಾಗ ಅಧಿಕಾರಿಗಳಿಗಿಂತ ರೈತರೇ ಚೆನ್ನಾಗಿ ಕಸ್ತೂರಿ ರಂಗನ್‌ ವರದಿನ್ನು ಅಧ್ಯಯನ ಮಾಡಿದ್ದಾರೆ ಎಂಬುದು ತಿಳಿದುಬಂದಿತು. ಇಡೀ ದಿನಚರ್ಚೆಯಾಗಲಿ, ನಿಲುವಳಿ ಸೂಚನೆಯಂತಾದರೂ ಚರ್ಚೆಯಾಗಲಿ ಎಂದು ಮುಖ್ಯಮಂತ್ರಿ ತಿಳಿಸಿದರು.

RELATED ARTICLES
spot_img

Latest News