Homeರಾಜ್ಯಕೆಪಿಎಸ್‌‍ಸಿ ಹಗರಣದ ತನಿಖೆ ಡಿಜಿಪಿ ಅಲೋಕ್‌ಕುಮಾರ್‌ ನೇತೃತ್ವದಲ್ಲಿ ಎಸ್‌‍ಐಟಿ ರಚನೆ

ಕೆಪಿಎಸ್‌‍ಸಿ ಹಗರಣದ ತನಿಖೆ ಡಿಜಿಪಿ ಅಲೋಕ್‌ಕುಮಾರ್‌ ನೇತೃತ್ವದಲ್ಲಿ ಎಸ್‌‍ಐಟಿ ರಚನೆ

ಬೆಂಗಳೂರು,ಸೆ.22-ಕೆಪಿಎಸ್‌‍ಸಿ ನೇಮಕಾತಿ ಹಗರಣಗಳ ಸಂಬಂಧ ಹೊಸದಾಗಿ ತನಿಖೆ ನಡೆಸಲು ಡಿಜಿಪಿ ಅಲೋಕ್‌ಕುಮಾರ್‌ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ.ಈ ವಿಶೇಷ ತನಿಖಾ ತಂಡ (ಎಸ್‌‍ಐಟಿ) ತನ್ನ ಕಾರ್ಯವನ್ನು ಆರಂಭಿಸಿದ್ದು ಇಂದು ಅಥವಾ ನಾಳೆ ಈ ಸಂಬಂಧ ಸಭೆ ನಡೆಸಲಿದೆ.

ನೇಮಕಾತಿ ಅಕ್ರಮ ಸಂಬಂಧ ಕಡತಗಳ ಪರಿಶೀಲನೆ, ಸಿಐಡಿ ದಾಖಲೆಗಳು, ಸಾಕ್ಷ್ಯವನ್ನು ಪರಿಶೀಲಿಸುವುದಲ್ಲದೇ ಈಗಾಗಲೇ ಸಿಐಡಿ ವಿಚಾರಣೆ ಎದುರಿಸಿರುವ ಎಲ್ಲರಿಗೂ ವಿಚಾರಣೆಗೆ ಹಾಜರಾಗುವಂತೆ ಎಸ್‌‍ಐಟಿ ಸೂಚಿಸುವ ಸಾಧ್ಯತೆ ಇದೆ.ಅಭ್ಯರ್ಥಿಗಳು, ಮಧ್ಯವರ್ತಿಗಳು, ಕೆಪಿಎಸ್‌‍ಸಿ ಸಿಬ್ಬಂದಿ ಹಾಗೂ ಸದಸ್ಯರ ವಿಚಾರಣೆಯನ್ನು ಎಸ್‌‍ಐಟಿ ನಡೆಸಲಿದೆ.

ಕಾರಾಗೃಹಗಳ ಡಿಜಿಪಿ ಅಲೋಕ್‌ ಕುಮಾರ್‌ ನೇತೃತ್ವದಲ್ಲಿ ರಚಿಸಲಾಗಿರುವ ಎಸ್‌‍ಐಟಿ ತಂಡದಲ್ಲಿ ರಾಜ್ಯದ ವಿಧಿ ವಿಜ್ಞಾನ ಪ್ರಯೋಗಾಲಯದ ನಿರ್ಧೇಶಕರಾದ ಐಜಿಪಿ ಡಾ.ದಿವ್ಯಾ ಗೋಪಿನಾಥ್‌, ಉಪಪೊಲೀಸ್‌‍ ಆಯುಕ್ತ ಅನೂಪ್‌ ಶೆಟ್ಟಿ , ಎಸ್‌‍ಪಿ ಕುಶಾಲ್‌ ಚೌಕ್ಸೆ ಮತ್ತು ಉಪ ಪೊಲೀಸ್‌‍ ಆಯುಕ್ತೆ ಕ್ಷಮಾ ಮಿಶ್ರಾ ಅವರು ಸದಸ್ಯರಾಗಿರುತ್ತಾರೆ.

ಸಿಐಡಿ ವರದಿ ಸಲ್ಲಿಕೆ: ಎಸ್‌‍ಐಟಿ ರಚನೆ ಬೆನ್ನಲ್ಲೇ ಸರ್ಕಾರಕ್ಕೆ ಸಿಐಡಿ ತನಿಖಾ ವರದಿ ಸಲ್ಲಿಸಿದೆ. ಆ ವರದಿಯಲ್ಲಿ ಕೆಪಿಎಸ್‌‍ಸಿ ಹಗರಣದ ಕುರಿತು ಸಿಐಡಿ ಎಳೆಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದೆ. ಸಿಐಡಿ ಸಲ್ಲಿಸಿರುವ ತನಿಖಾ ವರದಿಯಲ್ಲಿ ಹಣ ವರ್ಗಾವಣೆ, ಹ್ದುೆಗಳ ಮಾರಾಟದ ಬಗ್ಗೆ ವಿಸ್ತಾರವಾಗಿ ಉಲ್ಲೇಖಿಸಲಾಗಿದೆ. ಪಶುವೈದ್ಯಾಧಿಕಾರಿ ಹ್ದುೆ ಅಕ್ರಮ ನೇಮಕಾತಿ ಸಂಬಂಧ ಸಿಐಡಿ ಈವರೆಗೂ 92 ಲಕ್ಷ ರೂ. ಜಪ್ತಿ ಮಾಡಿದೆ.

ಭಾಲ್ಕಿ ಪಟ್ಟಣದ ಓಂ ಲಕೀ ಸೌಹಾರ್ದ ಸಹಕಾರಿ ಬ್ಯಾಂಕ್‌, ಕೋಟಕ್‌ ಮಹೀಂದ್ರಾ ಬ್ಯಾಂಕ್‌ ಖಾತೆಗಳಿಗೆ 92 ಲಕ್ಷ ರೂ. ಹಣ ಜಮೆಯಾಗಿರುವುದು ಸಿಐಡಿ ತನಿಖೆಯಲ್ಲಿ ಪತ್ತೆಯಾಗಿದೆ.
ಕನ್ನಾಳೆ ಸೂಚನೆಯಂತೆ ಐವರು ಅಭ್ಯರ್ಥಿಗಳು ಹಣ ವರ್ಗಾಯಿಸಿದ್ದರು. ಸಿದ್ಧಾರ್ಥ್‌ 20 ಲಕ್ಷ ರೂ, ವಿ.ಬಸವರಾಜ್‌ 27 ಲಕ್ಷ , ಮಹೇಂದ್ರ 25 ಲಕ್ಷ ಹಾಗೂ ನಿರಂಜನ್‌ 14 ಲಕ್ಷ ರೂ. ಹಣವನ್ನ ಖಾತೆಗೆ ಜಮೆ ಮಾಡಿದ್ದರು. ಅಭ್ಯರ್ಥಿಗಳಾದ ಕಿರಣ್‌ ಗೌಡ 10 ಲಕ್ಷ, ಸಲೀಂ 30 ಲಕ್ಷ, ಮೊಹಮದ್‌ ಸುಹೈಲ್‌ 20 ಲಕ್ಷ ನಗದು ರೂಪದಲ್ಲಿ ಹಣ ನೀಡಿದ್ದರು ಎಂಬುವುದು ಸಿಐಡಿ ತನಿಖೆಯಲ್ಲಿ ಗೊತ್ತಾಗಿದೆ.

ಇನ್ನು ಅಭ್ಯರ್ಥಿಗಳು, ಮಧ್ಯವರ್ತಿಗಳು, ಕನ್ನಾಳೆ ವಾಟ್ಸಾಪ್‌ನಲ್ಲಿ ಸಂವಹನ ನಡೆಸಿದ್ದಾರೆ. ಪರೀಕ್ಷೆಗೆ ಮೊದಲು ಗ್ಯಾಂಗ್‌ ಅಭ್ಯರ್ಥಿಗಳಿಗೆ 60-80 ಪ್ರಶ್ನೆ ನೀಡಿತ್ತು. 5 ಅಭ್ಯರ್ಥಿಗಳಿಗೆ ಪ್ರಶ್ನೆಗಳಿಗೆ ಉತ್ತರಿಸುವ ಅಭ್ಯಾಸ ಮಾಡಿಸಲಾಗಿತ್ತು.

ಕನ್ನಾಳೆ ಮಧ್ಯವರ್ತಿ ಪವನ್‌ ಮೂಲಕ ವಿದ್ಯಾರ್ಥಿಗಳನ್ನು ಸಂಪರ್ಕಿಸಿದ್ದ. ಸಿದ್ದಾಥರ್, ರಾಜ್‌ ಮೊಹಮದ್‌, ಬಸವರಾಜ್‌‍, ಮಹೇಂದ್ರ, ನಿರಂಜನ್‌ ಸಂಪರ್ಕ ಮಾಡಿದ್ದ. ಅಲ್ಲದೇ ವಿನೋದ್‌, ಕಿರಣ್‌ ಗೌಡ, ಚೈತ್ರಾ ನೇರವಾಗಿ ಸಂಪರ್ಕಿಸಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಸಿಐಡಿ ಒಟ್ಟು 40 ಅಭ್ಯರ್ಥಿಗಳನ್ನು ವಿಚಾರಣೆ ನಡೆಸಿದೆ.

ಪ್ರಕರಣ ಸಂಬಂಧ 22 ಲಕ್ಷ ಮೌಲ್ಯದ ವಜ್ರದ ಹಾರವನ್ನು ಸಿಐಡಿ ಸೀಜ್‌ ಮಾಡಿದೆ. ಜ್ಞಾನೇಂದ್ರ ತನ್ನ ಸ್ನೇಹಿತೆಗಾಗಿ ಚಿನ್ನಾಭರಣ ಖರೀದಿಸಿದ್ದ. ಇನ್ನು ಮಧ್ಯವರ್ತಿ ಬಸವರಾಜ್‌ ಕನ್ನಾಳೆಯಿಂದ 5.76 ಲಕ್ಷ ರೂ. ಹಣವನ್ನು ಸೀಜ್‌ ಮಾಡಲಾಗಿದೆ. ಕನ್ನಾಳೆ ಮತ್ತು ಪತ್ನಿ ಖಾತೆಯಲ್ಲಿದ್ದ 71.18 ಲಕ್ಷ ರೂ. ಹಣವನ್ನು ಫ್ರೀಜ್‌ ಮಾಡಲಾಗಿದೆ.ಒಟ್ಟಾರೆ ಸಿಐಡಿ 2 ಕೋಟಿ ಹಣವನ್ನು ಜಪ್ತಿ ಮಾಡಿದೆ.

RELATED ARTICLES
spot_img

Latest News